
ನ್ಯೂಯಾರ್ಕ್: ನ್ಯೂಯಾರ್ಕ್ ನ ವೆಸ್ಟ್‌ಬರಿಯಲ್ಲಿ ನಡೆದ T20 ವಿಶ್ವಕಪ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 8 ವಿಕೆಟ್ ಗಳ ಜಯ ಗಳಿಸಿದೆ.
12.2 ಓವರ್ ಗಳಲ್ಲಿ 997 ರನ್ ಗಳ ಟಾರ್ಗೆಟ್ ನ್ನು ತಲುಪುವ ಮೂಲಕ ಭಾರತ ಗೆಲುವನ್ನು ದಕ್ಕಿಸಿಕೊಂಡಿದೆ.
ರೋಹಿತ್ ಶರ್ಮಾ ನೇತೃತ್ವದ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನ್ಯೂಯಾರ್ಕ್ ನಲ್ಲಿ ಬ್ಯಾಟ್ಸ್ ಮನ್ ಗಳಿಗೆ ಅತ್ಯಂತ ಕಠಿಣವಾಗಿರುವ ಈ ಪಿಚ್ ನಲ್ಲಿ ಭಾರತದ ಬೌಲರ್ ಗಳನ್ನು ಎದುರಿಸಲು ಹೆಣಗಿದರು.
ಐರ್ಲೆಂಡ್ ತಂಡ 16 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 96 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ತಂಡದ ಪರ ಗರೆಥ್ ಡೆಲಾನಿ 14 ಎಸೆತಗಳಲ್ಲಿ 26 ರನ್ ಗಳಿಸಿದ್ದು ಗರಿಷ್ಠ ಮೊತ್ತವಾಗಿತ್ತು.
ಸರಳವಾದ ರನ್ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ರೋಹಿತ್ ಶರ್ಮಾ (retired hurt ) 37 ಎಸೆತಗಳಲ್ಲಿ 52 ರನ್ ಗಳಿಸುವ ಮೂಲಕ ತಂಡದ ಗೆಲುವು ಖಾತ್ರಿಯಾಗುವ ಬ್ಯಾಟಿಂಗ್ ಪ್ರದರ್ಶನ ನೀಡಿದರು. ರಿಷಭ್ ಪಂತ್ 26 ಎಸೆತಗಳಲ್ಲಿ 36 ರನ್ ಗಳಿಸಿದರು.
Advertisement