ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯಕ್ಕೂ ಮುನ್ನ, ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯಾಗಿದ್ದು, ಇದರಿಂದಾಗಿ ಪಂದ್ಯದ ಟಾಸ್ ತಡವಾಗಲಿದೆ.
ಟಾಸ್‌ಗೆ ಮುನ್ನವೇ ಮಳೆ ಆರಂಭವಾಗಿದ್ದು, ಮೈದಾನದ ಪ್ರಮುಖ ಭಾಗ ಹಾಗೂ ಪಿಚ್ ಅನ್ನು ಮುಚ್ಚಲಾಗಿದೆ. ಮಳೆಯಾಗುವ ಮುನ್ಸೂಚನೆಯೂ ಇತ್ತು. ಇನ್ನು 7.30ಕ್ಕೆ ಟಾಸ್ ಮಾಡಬೇಕಾಗಿತ್ತು ಆದರೆ ಇದೀಗ ಟಾಸ್ ಮುಂದೂಡಬೇಕಾಗಿದೆ.
ಟಾಸ್ ವಿಳಂಬವಾದ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅಂಪೈರ್‌ಗಳೊಂದಿಗೆ ಮಾತುಕತೆ ನಡೆಸಿದರು. ನ್ಯೂಯಾರ್ಕ್ ಸ್ಟೇಡಿಯಂನಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಮಳೆಯ ನಂತರ ನೆಲವನ್ನು ಒಣಗಿಸುವ ಪ್ರಕ್ರಿಯೆಯೂ ಇದೆ. ಇಲ್ಲಿ ಅಷ್ಟೊಂದು ಮಳೆಯಾಗದಿದ್ದರೂ ಟಾಸ್ ಮುಂದೂಡಬೇಕಾಗಿದೆ.

Advertisement