
ಆ್ಯಂಟಿಗುವಾ: ಐಸಿಸಿ ಟಿ0 ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶದ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡ ಭರ್ಜರಿ ಜಯ ದಾಖಲಸಿದೆ.
ಭಾರತ ನೀಡಿದ 197 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಬಾಂಗ್ಲಾದೇಶ ತಂಡ ನಿಗಧಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 146 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 50 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಬಾಂಗ್ಲಾದೇಶ ಪರ ಶಾಂಟೋ 40 ರನ್ ಗಳಿಸಿದರೆ, ಟಿ ಹಸನ್ 29 ಮತ್ತು ರಿಷಾದ್ ಹೊಸೆನ್ 24 ರನ್ ಗಳಿಸಿದರು. ಉಳಿದ ಆಟಗಾರರಿಂದ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ. ಇನ್ನು ಭಾರತದ ಪರ ಕುಲದೀಪ್ ಯಾದವ್ 3 ವಿಕೆಟ್ ಪಡೆದರೆ, ಜಸ್ ಪ್ರೀತ್ ಬುಮ್ರಾ ಮತ್ತು ಅರ್ಶ್ ದೀಪ್ ಸಿಂಗ್ ತಲಾ ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯಾ 1 ವಿಕೆಟ್ ಪಡೆದು ಬೌಲಿಂಗ್ ನಲ್ಲೂ ಮಿಂಚಿದರು.
ಬ್ಯಾಟಿಂಗ್ ನಲ್ಲಿ ಅರ್ಧಶತಕ ಸಿಡಿಸಿ ಬೌಲಿಂಗ್ ನಲ್ಲಿ 1 ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯಾ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸೆಮೀಸ್ ಗೆ ಭಾರತ
ಇನ್ನು ನಾಳೆ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡ ಆಸ್ಟ್ರೇಲಿಯಾವನ್ನು ಮಣಿಸುವಲ್ಲಿ ವಿಫಲವಾದರೆ ಭಾರತ ತಂಡ ಸೆಮೀಸ್ ಹಂತಕ್ಕೇರಲಿದೆ.
Advertisement