
ಗಯಾನ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ.
ಗಯಾನದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ 2ನೇ ಸೆಮಿ ಫೈನಲ್ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜಾಸ್ ಬಟ್ಲರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಈ ವೇಳೆ ಮಾತನಾಡಿದ ಬಟ್ಲರ್, ''ಪಿಚ್ ಉತ್ತಮ ಮೇಲ್ಮೈ ಹೊಂದಿದ್ದು, ಬೌನ್ಸ್ ಕಡಿಮೆ ಇರುವಂತೆ ತೋರುತ್ತಿದೆ.
ಔಟ್ ಫೀಲ್ಡ್ ಮಳೆಯಿಂದಾಗಿ ತೇವಾಂಶದಿಂದ ಕೂಡಿದ್ದು, ನಾವು ಮೊದಲು ಬೌಲ್ ಮಾಡಲು ಸ್ವಲ್ಪ ಅನುಕೂಲವಾಗಿದೆ ಎಂದು ಭಾವಿಸಿದ್ದೇವೆ. ನಾವು ಉತ್ತಮ ತಂಡದ ವಿರುದ್ಧ ಆಡುತ್ತಿದ್ದು, ಅಗ್ರ ತಂಡದ ವಿರುದ್ಧ ದೊಡ್ಡ ಸವಾಲನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಭಾರತ ತಂಡದ ರೋಹಿತ್ ಶರ್ಮಾ ಮಾತನಾಡಿ, ನಾವು ಮೊದಲು ಬ್ಯಾಟಿಂಗ್ ಮಾಡಲು ಬಯಸಿದ್ದೆವು. ಈಗ ಬ್ಯಾಟಿಂಗ್ ಮಾಡುವ ಅವಕಾಶ ದೊರೆತಿದೆ. ಹವಾಮಾನ ಉತ್ತಮವಾಗಿದೆ. ಮಳೆಯಿಂದಾಗಿ ಏನಾಗಬೇಕೋ ಅದು ಈಗಾಗಲೇ ಆಗಿ ಹೋಗಿದೆ. ನಾವು ಉತ್ತಮ ರನ್‌ಗಳನ್ನು ಕೆಲ ಹಾಕಲು ಬಯಸಿದ್ದೇವೆ. ಆಟ ನಡೆಯುತ್ತಿರುವಂತೆ ಪಿಚ್ ನಿಧಾನವಾಗುತ್ತದೆ.
ಈ ರೀತಿಯ ಪರಿಸ್ಥಿತಿಯಲ್ಲಿ ಪಂದ್ಯಾವಳಿಯನ್ನು ಆಡುವ ಸವಾಲನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಉತ್ತಮ ಕ್ರಿಕೆಟ್ ಆಡಲು ಇದೊಂದು ಅವಕಾಶ ಎಂದು ಹೇಳಿದ್ದಾರೆ.
ತಂಡಗಳು ಇಂತಿವೆ
ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ
ಇಂಗ್ಲೆಂಡ್: ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್ ಮತ್ತು ನಾಯಕ), ಜಾನಿ ಬೇರ್ ಸ್ಟೋ, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರನ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ರೀಸ್ ಟೋಪ್ಲಿ
Advertisement