
ಗಯಾನ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲ್ಲುವ ಮೂಲಕ ಭಾರತ ತಂಡ ಮತ್ತೊಂದು ವಿಶ್ವದಾಖಲೆಯ ಸನಿಹದಲ್ಲಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಗೆದ್ದರೆ ತನ್ನದೇ ದಾಖಲೆಯನ್ನು ಸರಿಗಟ್ಟಲಿದೆ.
ಹೌದು.. ಇಂಗ್ಲೆಂಡ್ ವಿರುದ್ಧದ ಗೆಲುವಿನ ಮೂಲಕ ಕಳೆದೊಂದು ವರ್ಷದಲ್ಲಿ ಭಾರತ ಒಟ್ಟು ಸತತ 11 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 2023ರ ಡಿಸೆಂಬರ್ ನಿಂದ 2024ರ ಜೂನ್ ವರೆಗೂ ಭಾರತ ತಂಡ ಒಟ್ಟು 11 ಪಂದ್ಯಗಳಲ್ಲಿ ಜಯಭೇರಿ ಭಾರಿಸಿದೆ.
ಆ ಮೂಲಕ ಸತತವಾಗಿ 2ನೇ ಬಾರಿಗೆ ಗರಿಷ್ಠ ಪಂದ್ಯಗಳಲ್ಲಿ ಜಯ ಗಳಿಸಿದೆ. ಫೈನಲ್ ಪಂದ್ಯವನ್ನೂ ಗೆದ್ದರೆ ಭಾರತ ತಂಡ ತನ್ನದೇ ದಾಖಲೆಯನ್ನು ಸರಿಗಟ್ಟಲಿದೆ.
2022ರಲ್ಲಿ ಭಾರತ 12 ಪಂದ್ಯಗಳಲ್ಲಿ ಸತತ ಜಯ ದಾಖಲಿಸಿತ್ತು. 2021ರ ನವೆಂಬರ್ ನಿಂದ ಫೆಬ್ರವರಿ 2022ರವರೆಗೂ ಸತತ 12 ಪಂದ್ಯಗಳಲ್ಲಿ ಜಯಗಳಿಸಿತ್ತು.
India’s longest winning streaks in T20Is
12 - Nov 2021 to Feb 2022
11* - Dec 2023 to June 2024
9 - Jan 2020 to Dec 2020
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಜಯಗಳಿಸಿದ 2ನೇ ತಂಡ
ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಅತೀ ಹೆಚ್ಚು ಪಂದ್ಯಗಳಲ್ಲಿ ಸತತ ಜಯಗಳಿಸಿದ 2ನೇ ತಂಡ ಎಂಬ ಖ್ಯಾತಿಗೆ ಭಾಜನವಾಗಿದೆ. ಹಾಲಿ ಟೂರ್ನಿಯಲ್ಲಿ ಭಾರತ ಸತತ 7 ಪಂದ್ಯಗಳಲ್ಲಿ ಜಯಗಳಿಸಿದ್ದು, ಇದೇ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 8 ಪಂದ್ಯಗಳಲ್ಲಿ ಜಯಭೇರಿ ಭಾರಿಸಿ ಅಗ್ರ ಸ್ಥಾನದಲ್ಲಿದೆ. ಫೈನಲ್ ಭಾರತ ಗೆದ್ದರೆ ಆಗ ದಕ್ಷಿಣ ಆಫ್ರಿಕಾದ ದಾಖಲೆಯನ್ನು ಸರಿಗಟ್ಟಲಿದೆ.
Most wins in a T20 WC edition
8* - South Africa (2024)
7* - India (2024)
6 - Sri Lanka (2009)
6 - Australia (2010)
6 - Australia (2021)
ಪುರುಷರ ICC ಟೂರ್ನಮೆಂಟ್‌ನಲ್ಲಿ ತಂಡವು ಅಜೇಯ ಓಟವನ್ನು ಹೊಂದಿರುವ ಕೊನೆಯ ನಿದರ್ಶನವೆಂದರೆ ಚಾಂಪಿಯನ್ಸ್ ಟ್ರೋಫಿ 2013 ಅಲ್ಲಿಯೂ ಭಾರತ ಸತತ ಜಯದ ಮೂಲಕ ದಾಖಲೆ ನಿರ್ಮಿಸಿದೆ. ಹಾಲಿ ಟೂರ್ನಿಯಲ್ಲಿ ಎರಡು ಅಜೇಯ ತಂಡಗಳು (ಭಾರತ vs ದಕ್ಷಿಣ ಆಫ್ರಿಕಾ) ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿವೆಯ. ಈ ಹಿಂದೆ ಯಾವುದೇ ತಂಡವೂ T20 ವಿಶ್ವಕಪ್‌ನಾದ್ಯಂತ ಅಜೇಯ ಓಟವನ್ನು ಹೊಂದಿರಲಿಲ್ಲ ಎಂಬುದು ಗಮನಾರ್ಹ.
Advertisement