
ಬಾರ್ಬಡೋಸ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ವಿಶ್ವಕಪ್ ಜಯಿಸಿದ ಭಾರತ ತಂಡ ತನ್ನ 2ನೇ ಟಿ20 ವಿಶ್ವಕಪ್ ಜಯಿಸಿದ್ದು ಮಾತ್ರವಲ್ಲದೇ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ದಕ್ಷಿಣ ಆಫ್ರಿಕಾದ ವಿರುದ್ಧ 7 ರನ್ ಗಳ ಅಂತರದಲ್ಲಿ ವಿರೋಚಿತ ಜಯ ಸಾಧಿಸಿ ಪ್ರಶಸ್ತಿ ಜಯಿಸಿದ ಭಾರತ 2 ಬಾರಿ ಟಿ20 ವಿಶ್ವಕಪ್ ಜಯಿಸಿದ ಮೂರನೇ ತಂಡ ಎಂಬ ಕೀರ್ತಿಗೆ ಭಾಜನವಾಯಿತು.
ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ತಂಡ (2012 & 2016), ಇಂಗ್ಲೆಂಡ್ (2010 & 2022) ಈ ಸಾಧನೆ ಮಾಡಿದ್ದವು. ಇದೀಗ ಭಾರತ ತಂಡ (2010 & 2022) ಈ ಸಾಧನೆ ಮಾಡಿದ ಮೂರನೇ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.
Teams to win two T20 WCs
West Indies (2012 & 2016)
England (2010 & 2022)
India (2010 & 2022)
ಸತತ ಜಯ; ತನ್ನದೇ ದಾಖಲೆ ಸರಿಗಟ್ಟಿದ ಟೀಂ ಇಂಡಿಯಾ
ಇನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತವಾಗಿ ಗೆದ್ದು ಫೈನಲ್ ಗೆ ಎಂಟ್ರಿಕೊಟ್ಟಿದ್ದ ಭಾರತ ತಂಡ ಫೈನಲ್ ನಲ್ಲೂ ತನ್ನ ಅಜೇಯ ಯಾತ್ರೆ ಮುಂದುವರೆಸಿ ಪ್ರಶಸ್ತಿ ಜಯಿಸಿದೆ. ಆ ಮೂಲಕ ಟಿ20 ಮಾದರಿಯಲ್ಲಿ ಗರಿಷ್ಠ ಸತತ ಜಯ ದಾಖಲಿಸಿದ್ದ ತನ್ನದೇ ದಾಖಲೆಯನ್ನು ಭಾರತ ತಂಡ ಸರಿಗಟ್ಟಿದೆ. ಈ ಹಿಂದೆ ನವೆಂಬರ್ 2021ರಿಂದ ಫೆಬ್ರವರಿ 2022ರವರೆಗೆ ಭಾರತ ತಂಡ ಸತತ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಇದೀಗ ಹಾಲಿ ಋತು ಅಂದರೆ ಡಿಸೆಂಬರ್ 2023ರಿಂದ ಜೂನ್ 2024ರವರೆಗೆ ಸತತ 12 ಪಂದ್ಯಗಳಲ್ಲಿ ಗೆದ್ದು ಈ ದಾಖಲೆಯನ್ನು ಸರಿಗಟ್ಟಿದೆ.
India’s longest winning streaks in T20Is
12 - Nov 2021 to Feb 2022
12* - Dec 2023 to June 2024
9 - Jan 2020 to Dec 2020
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಜಯ: ಭಾರತ-ದ.ಆಫ್ರಿಕಾ ಜಂಟಿ ದಾಖಲೆ
ಇನ್ನು ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸತತ 8 ಜಯದ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಜಯ ಗಳಿಸಿದ ತಂಡಗಳಾಗಿವೆ. ಆ ಮೂಲಕ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ತಲಾ 6 ಜಯದ ಮೂಲಕ 2ನೇ ಸ್ಥಾನದಲ್ಲಿವೆ.
Most wins in a T20 WC edition
8 - India (2024)*
8 - South Africa (2024)*
6 - Sri Lanka (2009)
6 - Australia (2010)
6 - Australia (2021)
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಜಯ
ಇನ್ನು ಇದೇ ಟೂರ್ನಿಯಲ್ಲಿ ಭಾರತ ಸತತ 8 ಜಯದ ಮೂಲಕ ಅಜೇಯ ತಂಡ ಎಂಬ ದಾಖಲೆ ಬರೆದಿದ್ದು, ಇದೇ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಕೂಡ ಸತತ 8 ಜಯದ ಮೂಲಕ ಈ ದಾಖಲೆ ಬರೆದಿತ್ತಾದರೂ ಫೈನಲ್ ನಲ್ಲಿನ ಸೋಲಿನ ಮೂಲಕ ಅದರ ಅಜೇಯ ಗೆಲುವಿನ ಕೊಂಡಿ ಕಳಚಿಬಿದ್ದಿದೆ. ಇದಕ್ಕೂ ಮೊದಲು 2022 ಮತ್ತು 2024ರಲ್ಲಿ ಆಸ್ಟ್ರೇಲಿಯಾ ಸತತ 8 ಪಂದ್ಯಗಳಲ್ಲಿ ಈ ದಾಖಲೆ ಬರೆದಿತ್ತು 2012 ಮತ್ತು 2014ರಲ್ಲಿ ಭಾರತ ಕೂಡ ಸತತ 7 ಪಂದ್ಯಗಳಲ್ಲಿ ಜಯಿಸಿತ್ತು.
Most consecutive wins in T20 WCs
8* - India (2024)
8 - South Africa (2024)
8 - Australia (2022-2024)
7 - England (2010-2012)
7 - India (2012-2014)
ಇಡೀ ಟೂರ್ನಿಯಲ್ಲಿ ಫೈನಲ್ ನಲ್ಲಿ ಮಾತ್ರ ಸೋತ ತಂಡ ದಕ್ಷಿಣ ಆಫ್ರಿಕಾ
ಇನ್ನು ಇಡೀ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಫೈನಲ್ ನಲ್ಲಿ ಮಾತ್ರ ಸೋತಿದ್ದು, ಇಂತಹ ಅಪರೂಪದ ದಾಖಲೆ ಮಾಡಿರುವ 4ನೇ ತಂಡ ಎಂಬ ಪಟ್ಟಿಗೆ ಸೇರ್ಪಡೆಯಾಗಿದೆ. ಈ ಹಿಂದೆ 2009ರಲ್ಲಿ ಶ್ರೀಲಂಕಾ, 2010ರಲ್ಲಿ ಆಸ್ಟ್ರೇಲಿಯಾ, 2014ರಲ್ಲಿ ಭಾರತ ಇದೇ ರೀತಿಯಲ್ಲಿ ಫೈನಲ್ ನಲ್ಲಿ ಮಾತ್ರ ಸೋತಿತ್ತು.
Only defeat in a T20 WC coming in the final
2009 - SL
2010 - AUS
2014 - IND
2024 - SA
Advertisement