ಐಪಿಎಲ್ ಹೆಚ್ಚು ಜನಪ್ರಿಯ, ಆದರೆ ಸತ್ವ ಇರುವುದು ಟೆಸ್ಟ್ ಕ್ರಿಕೆಟ್ ನಲ್ಲಿ: ಆರ್ ಅಶ್ವಿನ್

ಟೀಂ ಇಂಡಿಯಾದ ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಇಂದು ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದು, ಇದಕ್ಕೂ ಮುನ್ನ ಗುರುವಾರ ಇಲ್ಲಿ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಂದ ವಿಶೇಷ 100ನೇ ಟೆಸ್ಟ್ ಕ್ಯಾಪ್ ಸ್ವೀಕರಿಸಿದರು.
ರಾಹುಲ್ ದ್ರಾವಿಡ್ ಅವರಿಂದ ವಿಶೇಷ 100ನೇ ಟೆಸ್ಟ್ ಕ್ಯಾಪ್ ಸ್ವೀಕರಿಸಿದ ಆರ್ ಅಶ್ವಿನ್
ರಾಹುಲ್ ದ್ರಾವಿಡ್ ಅವರಿಂದ ವಿಶೇಷ 100ನೇ ಟೆಸ್ಟ್ ಕ್ಯಾಪ್ ಸ್ವೀಕರಿಸಿದ ಆರ್ ಅಶ್ವಿನ್
Updated on

ಧರ್ಮಶಾಲಾ: ಟೀಂ ಇಂಡಿಯಾದ ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಇಂದು ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದು, ಇದಕ್ಕೂ ಮುನ್ನ ಗುರುವಾರ ಇಲ್ಲಿ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಂದ ವಿಶೇಷ 100ನೇ ಟೆಸ್ಟ್ ಕ್ಯಾಪ್ ಸ್ವೀಕರಿಸಿದರು.

ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್‌ ಪಂದ್ಯದ ವೇಳೆ ಟಿ20 ಲೀಗ್‌ಗಳು ಮತ್ತು ಟೆಸ್ಟ್ ಕ್ರಿಕೆಟ್‌ ನಡುವಿನ ವ್ಯತ್ಯಾಸವನ್ನು ತಿಳಿಸಿದ ಅವರು, ಟೆಸ್ಟ್ ಕ್ರಿಕೆಟ್ ಎನ್ನುವುದು ಜೀವನವನ್ನು ನಿಕಟವಾಗಿ ಪ್ರತಿಬಿಂಬಿಸುತ್ತದೆ ಎಂದರು.

'ಐಪಿಎಲ್ ಅತ್ಯಂತ ಜನಪ್ರಿಯ ಪಂದ್ಯಾವಳಿಯಾಗಿದೆ. ಬಹಳಷ್ಟು ಮಕ್ಕಳು ಟಿ20 ಆಡಲು ಮತ್ತು ಐಪಿಎಲ್‌ಗೆ ಪ್ರವೇಶಿಸಲು ಬಯಸುತ್ತಾರೆ. ಅವರು ಅಲ್ಲಿಗೆ ಬರಬೇಕೆಂದು ನಾನು ನಿಜವಾಗಿಯೂ ಬಯಸುತ್ತೇನೆ. ಆದರೆ, ಒಂದು ವಿಷಯವನ್ನು ನೆನಪಿಡಿ. ಈ ಸ್ವರೂಪದ (ಟೆಸ್ಟ್) ಕ್ರಿಕೆಟ್ ನಿಮಗೆ ಬಹಳಷ್ಟು ಹೇಳಿಕೊಡುತ್ತದೆ. ನಿಮ್ಮ ಜೀವನವು ನಿಮಗೆ ಕಲಿಸದ ಹಲವು ವಿಷಯಗಳನ್ನು ಕಲಿಸುತ್ತದೆ' ಎಂದು ಅಶ್ವಿನ್ ಹೇಳಿದರು.

ಪಂದ್ಯಕ್ಕೂ ಮುನ್ನ ಕುಟುಂಬ ಸದಸ್ಯರೊಂದಿಗೆ ರವಿಚಂದ್ರನ್ ಅಶ್ವಿನ್
ಪಂದ್ಯಕ್ಕೂ ಮುನ್ನ ಕುಟುಂಬ ಸದಸ್ಯರೊಂದಿಗೆ ರವಿಚಂದ್ರನ್ ಅಶ್ವಿನ್

'ಟೆಸ್ಟ್ ಕ್ರಿಕೆಟ್ ಎಂದರೆ ಜೀವನ ಎಂದು ನಾನು ಭಾವಿಸುತ್ತೇನೆ. ಇದು ಜೀವನಕ್ಕೆ ನೀವು ಕಂಡುಕೊಳ್ಳಬಹುದಾದ ಅತ್ಯಂತ ಹತ್ತಿರದ ಹೋಲಿಕೆಯಾಗಿದೆ. ಇದು ನಿಮಗೆ ಹೊಂದಿಕೊಳ್ಳಲು, ಒತ್ತಡವನ್ನು ನಿಭಾಯಿಸಲು ಕಲಿಸುತ್ತದೆ' ಎಂದರು.

2011ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ 37 ವರ್ಷದ ಅಶ್ವಿನ್, ತಮ್ಮ ತಂದೆ ರವಿಚಂದ್ರನ್ ಅವರು ತಮ್ಮನ್ನು ನಂಬಿದ್ದಕ್ಕಾಗಿ ಮತ್ತು ತಮ್ಮ ಪ್ರಯಾಣವನ್ನು ಬೆಂಬಲಿಸಿದ್ದಕ್ಕಾಗಿ ವಂದನೆ ಸಲ್ಲಿಸಿದರು. 'ಇದು ಸಾಕಷ್ಟು ಭಾವನಾತ್ಮಕ ಕ್ಷಣ. ನನಗಷ್ಟೇ ಅಲ್ಲ. ನಾನು ಹೆಚ್ಚು ಭಾವನೆಗಳಿಗೆ ಒಳಗಾಗುವ ವ್ಯಕ್ತಿಯಲ್ಲ. ಆದರೆ, ಇಂದು ಚೆನ್ನೈನಲ್ಲಿರುವ ವ್ಯಕ್ತಿಗೆ (ನನ್ನ ತಂದೆ) ಭಾರಿ ಭಾವನಾತ್ಮಕ ಕ್ಷಣವಾಗಿದೆ. ದುರದೃಷ್ಟವಶಾತ್, ಅವರು ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ' ಎಂದು ಹೇಳಿದರು.

ರಾಹುಲ್ ದ್ರಾವಿಡ್ ಅವರಿಂದ ವಿಶೇಷ 100ನೇ ಟೆಸ್ಟ್ ಕ್ಯಾಪ್ ಸ್ವೀಕರಿಸಿದ ಆರ್ ಅಶ್ವಿನ್
Ashwin's 500 Wickets: 500 ವಿಕೆಟ್ ಮೈಲುಗಲ್ಲು ದಾಟಿದ ಆರ್. ಅಶ್ವಿನ್; ಇತಿಹಾಸ ಸೃಷ್ಟಿಸಿದ 2ನೇ ಭಾರತೀಯ!

'ಮೊದಲ ದಿನ (ಮಕ್ಕಳ ಕ್ರಿಕೆಟಿಗನಾಗಿದ್ದಾಗ), ನನಗೆ ಇನ್ನೂ ಸ್ಪಷ್ಟವಾಗಿ ನೆನಪಿದೆ. ನಾನು ನನ್ನ ಕಿಟ್ ಅನ್ನು ಬೈಕಿನ ಪೆಟ್ರೋಲ್ ಟ್ಯಾಂಕ್ ಮುಂದೆ ಇಡುತ್ತಿದ್ದೆ. ನಂತರ ಅವರು ನನ್ನನ್ನು ಕೋಚಿಂಗ್ ಕ್ಯಾಂಪ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಸರ್ಕಾರಿ ನೌಕರರೊಬ್ಬರು (ಅವರ ತಂದೆ) ತನ್ನ ಮಗನನ್ನು ಜೀವನದಲ್ಲಿ ಮೈಲುಗಟ್ಟಲೆ ಮುಂದಕ್ಕೆ ಕರೆದೊಯ್ಯಲು ಬಯಸಿದರು. ನನ್ನ ತಾಯಿ ಮತ್ತು ನನ್ನ ಅಜ್ಜನ ಸಹಾಯದಿಂದಾಗಿ ಅವರು ನನ್ನನ್ನು ಇಲ್ಲಿಯವರೆಗೆ ಕರೆತಂದರು' ಎಂದು ಭಾವುಕರಾದರು.

ಅಶ್ವಿನ್ ಅವರ ಪತ್ನಿ ಪ್ರೀತಿ ನಾರಾಯಣನ್ ಕೂಡ ಅವರ ಹೋರಾಟದ ಅವಧಿಯಲ್ಲಿ ದೊಡ್ಡ ಆಧಾರಸ್ತಂಭವಾಗಿದ್ದಾರೆ ಎಂಬುದನ್ನು ಅಶ್ವಿನ್ ನೆನಪಿಸಿಕೊಂಡರು.

'ನನ್ನ ಹೆಂಡತಿಗೆ ಅವಳು ಏನಾಗುತ್ತಿದ್ದಾಳೆಂದು ತಿಳಿದಿರಲಿಲ್ಲ. ಅವಳು ಅದರಲ್ಲಿ ಸಿಲುಕಿಕೊಂಡಿದ್ದಾಳೆ ಮತ್ತು ಅವಳು ಇಂದು ನನ್ನ ಪಕ್ಕದಲ್ಲಿ ನಿಂತಿದ್ದಾಳೆ. ಇದೀಗ ಇಬ್ಬರು ಸುಂದರ ಮಕ್ಕಳು ನಮಗಿದ್ದಾರೆ. ಅವರು ತಮ್ಮ ಪ್ರಯಾಣದ ಭಾಗವಾಗಿದ್ದಾರೆ ಮತ್ತು ಕಳೆದ ಕೆಲವು ವರ್ಷಗಳಿಂದ ಈ ಪ್ರಯಾಣವನ್ನು ಆನಂದಿಸುತ್ತಿದ್ದಾರೆ' ಎಂದು ಹೇಳಿದರು.

ಅಶ್ವಿನ್‌ ಸಾಧನೆಗೆ ರಾಹುಲ್ ದ್ರಾವಿಡ್ ಮೆಚ್ಚುಗೆ

ಅಶ್ವಿನ್‌ಗೆ ಕ್ಯಾಪ್ ನೀಡಿದ ನಂತರ ಮಾತನಾಡಿದ ದ್ರಾವಿಡ್, ಇದು ತಮಿಳುನಾಡು ಕ್ರಿಕೆಟಿಗನಿಗೆ ದೊರಕಿತ ಅರ್ಹವಾದ ಕ್ಷಣವಾಗಿದೆ. 'ನೀವು ತಂಡಕ್ಕೆ ಎಲ್ಲವನ್ನೂ ನಿಷ್ಠೆಯಿಂದ ನೀಡಿದ್ದೀರಿ ಮತ್ತು ಇಂದು ನಿಮ್ಮ 100ನೇ ಟೆಸ್ಟ್ ಪಂದ್ಯವಾಗಿದೆ. ನಿಮ್ಮ ಈ ಪ್ರಯಾಣ ಚೆನ್ನೈನ ಬೀದಿಗಳಿಂದ ಪ್ರಾರಂಭವಾಯಿತು. ಅದೀಗ ಸುದೀರ್ಘ ಮತ್ತು ಘಟನಾತ್ಮಕ ಪ್ರಯಾಣವಾಗಿದೆ. ನಿಮ್ಮ ಕುಟುಂಬದ ಬೆಂಬಲವಿಲ್ಲದೆ ಇದು ನಿಮಗೆ ಸಾಧ್ಯವಾಗುತ್ತಿರಲಿಲ್ಲ. ಅವರಿಗೂ ಅಭಿನಂದನೆಗಳು' ಎಂದು ಹೇಳಿದರು.

'ಇದೊಂದು ಅದ್ಭುತವಾದ ಕ್ಷಣವಾಗಿದೆ. ನಿಮ್ಮೊಂದಿಗೆ ಮಾತನಾಡುವುದು ಒಂದು ಸುಯೋಗವಾಗಿದೆ. ತರಬೇತುದಾರರಾಗಿ ನಿಮ್ಮೊಂದಿಗೆ ಕೆಲಸ ಮಾಡುವುದು ಭಾಗ್ಯವಾಗಿದೆ. ಈ ಕ್ಯಾಪ್ ಅನ್ನು ನಿಮಗೆ ಹಸ್ತಾಂತರಿಸುವುದು ಸಹಜವಾಗಿಯೇ ವಿಶೇಷ ಕ್ಷಣವಾಗಿದೆ' ಎಂದು ತಂಡದ ಇತರ ಆಟಗಾರರ ಚಪ್ಪಾಳೆಗಳ ನಡುವೆ ದ್ರಾವಿಡ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com