ಮುರಳಿ, ವಾರ್ನ್ ಇರುವ 'ಎಲೈಟ್ ಗ್ರೂಪ್'ಗೆ ಆ್ಯಂಡರ್ಸನ್ ಎಂಟ್ರಿ; 700 ವಿಕೆಟ್ ಪಡೆದ ಜಗತ್ತಿನ ಮೊದಲ ವೇಗಿ

ಭಾರತದ ವಿರುದ್ಧ ಟೆಸ್ಟ್ ಸರಣಿಯಲ್ಲಿ ನಿರೀಕ್ಷೆಯಂತೆಯೇ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಐತಿಹಾಸಿಕ ಸಾಧನೆ ಮಾಡಿದ್ದು, ಶ್ರೀಲಂಕಾದ ಸ್ಪಿನ್ ಲೆಜೆಂಡ್ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ ಮ್ಯಾಜಿಕಲ್ ಸ್ಪಿನ್ನರ್ ಶೇನ್ ವಾರ್ನ್ ಇರುವ ಎಲೈಟ್ ಗ್ರೂಪ್ ಸೇರಿದ್ದಾರೆ.
ಜೇಮ್ಸ್ ಆ್ಯಂಡರ್ಸನ್
ಜೇಮ್ಸ್ ಆ್ಯಂಡರ್ಸನ್

ಧರ್ಮಶಾಲಾ: ಭಾರತದ ವಿರುದ್ಧ ಟೆಸ್ಟ್ ಸರಣಿಯಲ್ಲಿ ನಿರೀಕ್ಷೆಯಂತೆಯೇ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಐತಿಹಾಸಿಕ ಸಾಧನೆ ಮಾಡಿದ್ದು, ಶ್ರೀಲಂಕಾದ ಸ್ಪಿನ್ ಲೆಜೆಂಡ್ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ ಮ್ಯಾಜಿಕಲ್ ಸ್ಪಿನ್ನರ್ ಶೇನ್ ವಾರ್ನ್ ಇರುವ ಎಲೈಟ್ ಗ್ರೂಪ್ ಸೇರಿದ್ದಾರೆ.

ಧರ್ಮಶಾಲಾ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಜೇಮ್ಸ್​ ಆ್ಯಂಡರ್ಸನ್​ ಅವರು ಕುಲ್​ದೀಪ್​ ಯಾದವ್​ ಅವರ ವಿಕೆಟ್​ ಕೀಳುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 700 ವಿಕೆಟ್​ಗಳನ್ನು ಪೂರ್ತಿಗೊಳಿಸಿದರು. ಆ ಮೂಲಕ ಈ ಸಾಧನೆಗೈದ ವಿಶ್ವದ ಮೂರನೇ ಹಾಗೂ ಮೊದಲ ವೇಗಿ ಎಂಬ ಹಿರಿಮೆಗೆ ಪಾತ್ರರಾದರು. ಹೈದರಾಬಾದ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಡುವ ಅವಕಾಶವನ್ನು ಸಿಗಲಿಲ್ಲ. ಆದರೆ, ನಂತರದ ಎಲ್ಲ ಪಂದ್ಯಗಳಲ್ಲಿ ಆಡಿದ ಜೇಮ್ಸ್‌ ಆಂಡರ್ಸನ್‌ ಅಬ್ಬರಿಸಿ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ.

ಜೇಮ್ಸ್ ಆ್ಯಂಡರ್ಸನ್
IND Vs ENG: ಕ್ರಿಕೆಟ್ ನಲ್ಲಿ 112 ವರ್ಷಗಳ ಹಿಂದಿನ ಐತಿಹಾಸಿಕ ದಾಖಲೆ ಸರಿಗಟ್ಟಿದ ಟೀಂ ಇಂಡಿಯಾ

ಧರ್ಮಶಾಲಾದಲ್ಲಿ ಎರಡು ವಿಕೆಟ್‌ ಪಡೆಯುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಜೇಮ್ಸ್ ಆ್ಯಂಡರ್ಸನ್ 700 ವಿಕೆಟ್‌ ಪಡೆದ ಸಾಧನೆಯನ್ನು ಮಾಡಿದರು.

ಅಂದಹಾಗೆ ರೋಹಿತ್​ ಶರ್ಮ ಅವರು ಬೆನ್ನು ಮೂಳೆಯ ನೋವಿನಿಂದಾಗಿ ಮೂರನೇ ದಿನದಾಟದಿಂದ ಹೊರಗುಳಿದರು. ಹೀಗಾಗಿ ಉಪನಾಯಕ ಜಸ್​ಪ್ರೀತ್​ ಬುಮ್ರಾ ತಂಡವನ್ನು ಮುನ್ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com