Ranji Trophy: ಕೊನೆಗೂ ವಿದರ್ಭ ಕನಸು ಛಿದ್ರ; ದಾಖಲೆಯ 42ನೇ ಬಾರಿಗೆ ರಣಜಿ ಟ್ರೋಫಿ ಗೆದ್ದ ಮುಂಬೈ!

ರಣಜಿ ಟ್ರೋಫಿ ಗೆಲ್ಲುವ ವಿದರ್ಭ ತಂಡದ ಕನಸು ಛಿದ್ರವಾಗಿದ್ದು, ದಾಖಲೆಯ 42ನೇ ಬಾರಿಗೆ ಮುಂಬೈ ತಂಡ ಪ್ರಶಸ್ತಿ ಜಯಿಸಿದೆ.
ರಣಜಿಟ್ರೋಫಿ ಗೆದ್ದ ಮುಂಬೈ
ರಣಜಿಟ್ರೋಫಿ ಗೆದ್ದ ಮುಂಬೈ

ಮುಂಬೈ: ರಣಜಿ ಟ್ರೋಫಿ ಗೆಲ್ಲುವ ವಿದರ್ಭ ತಂಡದ ಕನಸು ಛಿದ್ರವಾಗಿದ್ದು, ದಾಖಲೆಯ 42ನೇ ಬಾರಿಗೆ ಮುಂಬೈ ತಂಡ ಪ್ರಶಸ್ತಿ ಜಯಿಸಿದೆ.

ಹೌದು.. ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ ತಂಡವು, ದಾಖಲೆಯ 42ನೇ ಬಾರಿಗೆ ರಣಜಿ ಟ್ರೋಫಿ ಜಯಿಸಿದ್ದು, ವಿದರ್ಭ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ 169 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ದಾಖಲೆಯ 42ನೇ ಬಾರಿಗೆ ರಣಜಿ ಟ್ರೋಫಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೊನೆಯ ದಿನದಾಟದಲ್ಲಿ 538 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿದ ವಿದರ್ಭ, 134.3 ಓವರ್‌ಗಳಲ್ಲಿ 368 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ವಿದರ್ಭ ಪರ ಅಮೋಘ ಶತಕ ಗಳಿಸಿದ ಅಕ್ಷಯ್ ವಾಡ್ಕರ್ (102) ಹೋರಾಟವು ವ್ಯರ್ಥವಾಯಿತು.

ರಣಜಿಟ್ರೋಫಿ ಗೆದ್ದ ಮುಂಬೈ
ರಣಜಿ ಟ್ರೋಫಿ: ಕ್ರಿಕೆಟ್ ನಲ್ಲೂ ರಾಜಕೀಯ, ನಾಯಕತ್ವ ತೊರೆಯಲು ಒತ್ತಡ.. ಆಂಧ್ರದ ಪರ ಇನ್ನೆಂದೂ ಆಡಲ್ಲ: ಹನುಮ ವಿಹಾರಿ ಆಕ್ರೋಶ!

ಹರ್ಷ್ ದುಬೆ 65 ರನ್ ಗಳಿಸಿದರೆ, ಈ ಇಬ್ಬರು ಆಟಗಾರರು ಆರನೇ ವಿಕೆಟ್‌ಗೆ 130 ರನ್‌ಗಳ ಜೊತೆಯಾಟವಾಡಿ ದಿಟ್ಟ ಹೋರಾಟ ನೀಡಿದರು. ಆದರೆ ಈ ವಿಕೆಟ್ ಪತನದೊಂದಿಗೆ ದಿಢೀರ್ ಕುಸಿತ ಕಂಡ ವಿದರ್ಭ, 14 ರನ್ ಅಂತರದಲ್ಲಿ ಕೊನೆಯ ಐದು ವಿಕೆಟ್‌ಗಳನ್ನು ಕಳೆದುಕೊಂಡು ವಿರೋಚಿತ ಸೋಲು ಕಂಡಿತು.

ಮುಂಬೈ ಪರ ತನುಷ್ ಕೋಟಿಯನ್ ನಾಲ್ಕು, ಮುಷೀರ್ ಖಾನ್ ಹಾಗೂ ತುಷಾರ್ ದೇಶಪಾಂಡೆ ತಲಾ ಎರಡು ವಿಕೆಟ್ ಗಳಿಸಿದರು.

ಮುಂಬೈಗೆ ಶುಭಾಶಯಗಳ ಸುರಿಮಳೆ

ಇನ್ನು ದಾಖಲೆಯ 42ನೇ ಬಾರಿಗೆ ರಣಜಿ ಟ್ರೋಫಿ ಪ್ರಶಸ್ತಿ ಜಯಿಸಿದ ಮುಂಬೈ ತಂಡಕ್ಕೆ ಶುಭಾಶಯಗಳ ಸುರಿಮಳೆ ಸುರಿಯುತ್ತಿದ್ದು, ಬಿಸಿಸಿಐ, ಜಯ್ ಶಾ ಸೇರಿದಂತೆ ಖ್ಯಾತನಾಮ ಕ್ರಿಕೆಟಿಗರು ಮುಂಬೈ ತಂಡಕ್ಕೆ ಶುಭ ಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್, '42ನೇ ರಣಜಿ ಟ್ರೋಫಿ ಗೆದ್ದ ಮುಂಬೈ ರಣಜಿ ತಂಡಕ್ಕೆ ಅನೇಕ ಅಭಿನಂದನೆಗಳು. ಅತ್ಯಂತ ವಿರೋಚಿತ ಹೋರಾಟ ನೀಡಿದ ವಿದರ್ಭದ ಪ್ರದರ್ಶನವೂ ಚಮತ್ಕಾರಯುತವಾಗಿತ್ತು. ವಿಶೇಷವಾಗಿ ಕರುಣ್, ಅಕ್ಷಯ್ ಮತ್ತು ಹರ್ಷ್, ಅವರು ಅತ್ಯಂತ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು ಮತ್ತು ಪಂದ್ಯವನ್ನು ತುಂಬಾ ಆಸಕ್ತಿದಾಯಕವಾಗಿಸಿದರು. ಮುಂಬೈನ ಬೌಲರ್‌ಗಳು ಪಟ್ಟುಬಿಡದೆ ಬೌಲಿಂಗ್ ಮಾಡಿದರು ಮತ್ತು ಅಂತಿಮವಾಗಿ 4ನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದ ತನುಷ್ ಅವರು ಮುಂಬೈ ತಂಡಕ್ಕೆ ನಿರ್ಣಾಯಕ ಮುನ್ನಡೆ ನೀಡಿದರು. ನಮ್ಮೆಲ್ಲರನ್ನು ಆಕರ್ಷಿಸಿದ ಕ್ರಿಕೆಟ್‌ನ ಅದ್ಭುತ ಪ್ರದರ್ಶನ ಇದಾಗಿತ್ತು. ಇದು ದೇಶೀಯ ಕ್ರಿಕೆಟ್‌ಗೆ ತುಂಬಾ ಮಹತ್ವ ನೀಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಜಯ್ ಶಾ ಟ್ವೀಟ್

ಇದೇ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಟ್ವೀಟ್ ಮಾಡಿದ್ದು, 2024 ರ ರಣಜಿ ಟ್ರೋಫಿಯನ್ನು ತನ್ನ 42 ನೇ ಪ್ರಶಸ್ತಿಯನ್ನು ಪಡೆದುಕೊಂಡಿದ್ದಕ್ಕಾಗಿ ಮುಂಬೈಗೆ ದೊಡ್ಡ ಅಭಿನಂದನೆಗಳು! ಕ್ಯಾಪ್ಟನ್ ಅಜಿಂಕ್ಯಾ ರಹಾನೆ ಅವರ ನಾಯಕತ್ವ, ಮುಶೀರ್‌ಖಾನ್ ಅವರ ಅದ್ಭುತ ಬ್ಯಾಟಿಂಗ್, ಶಾರ್ದೂಲ್ ಠಾಕೂರ್ ಅವರ ಆಲ್-ರೌಂಡ್ ಪ್ರತಿಭೆ, ಶಮ್ಸ್ ಮುಲಾನಿ ಅವರ ಗುಣಮಟ್ಟದ ಎಡಗೈ ಸ್ಪಿನ್ ಮತ್ತು ಬ್ಯಾಟ್‌ನೊಂದಿಗೆ ಭುಪೇನ್‌ಲಾಲ್ವಾನಿ ಅವರ ಸ್ಥಿರತೆಯು ಇದನ್ನು ಅದ್ಭುತವಾದ ಕೆಂಪು-ಬಾಲ್ ಋತುವನ್ನಾಗಿ ಮಾಡಿತು. ಋತುವಿನ ಉದ್ದಕ್ಕೂ ಅತ್ಯುತ್ತಮ ಕ್ರಿಕೆಟ್ ಆಡಿದ ರನ್ನರ್ ಅಪ್ ವಿದರ್ಭಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com