
ನವದೆಹಲಿ: WPL 2024 ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)ತಂಡ 113 ರನ್ ಗಳಿಗೆ ಕಟ್ಟಿಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭ ಪಡೆಯಿತು. ಆದರೆ 11 ಓವರ್ ನಲ್ಲಿ ಶ್ರೇಯಾಂಕ ಪಟೇಲ್ ಅವರು 23 ರನ್ ಗಳಿಸಿದ್ದ ಮೆಗ್ ಲ್ಯಾನಿಂಗ್ ಅವರನ್ನು ಔಟ್ ಮಾಡುವ ಮೂಲಕ ಡೆಲ್ಲಿಗೆ ಮೊದಲ ಆಘಾತ ನೀಡಿದರು.
ಈ ಪಂದ್ಯದಲ್ಲಿ ಶ್ರೇಯಾಂಕ ಪಟೇಲ್ ನಾಲ್ಕು ವಿಕೆಟ್ ಪಡೆದರು ಮಾರಕರಾದರು. ಇನ್ನು ಮೊಲಿನೆಕ್ಸ್ ಸಹ ಮೂರು ವಿಕೆಟ್ ಪಡೆದು ಎದುರಾಳಿಗಳಿಗೆ ದುಸ್ವಪ್ನವಾದರು. ಇನ್ನು ಆಶಾ ಶೋಭನ ಸಹ 2 ವಿಕೆಟ್ ಪಡೆದಿದ್ದಾರೆ.
ಡೆಲ್ಲಿ ಪರ ಶಫಾಲಿ ವರ್ಮಾ 44 ರನ್, ರಾಧಾ ಯಾದವ್ 12, ಅನುರಾಧ ರೆಡ್ಡಿ 10 ರನ್ ಬಾರಿಸಿದ್ದು ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 113 ರನ್ ಗಳಿಗೆ ಆಲೌಟ್ ಆಗಿದ್ದು ಆರ್ ಸಿಬಿಗೆ 114 ರನ್ ಗಳ ಗುರಿ ನೀಡಿದೆ.
Advertisement