WPL 2024: RCB ಚಾಂಪಿಯನ್; ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡ ವನಿತೆಯರು!

WPL 2024 ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು 8 ವಿಕೆಟ್ ಗಳಿಂದ ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಆರ್ ಸಿಬಿ ತಂಡ
ಆರ್ ಸಿಬಿ ತಂಡ
Updated on

ನವದೆಹಲಿ: WPL 2024 ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು 8 ವಿಕೆಟ್ ಗಳಿಂದ ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಆರ್ ಸಿಬಿ ಪರ ಸ್ಮೃತಿ ಮಂದಾನ 31 ಮತ್ತು ಸೋಫಿ ಡಿವೈನ್ 32 ರನ್ ಬಾರಿಸಿ ಔಟಾದರು. ನಂತರ ಬಂದ ಎಲ್ಲಿಸ್ ಪೇರಿ ಅಜೇಯ 35 ಮತ್ತು ರಿಚ್ಚ ಘೋಷ್ ಅಜೇಯ 17 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)ತಂಡ 113 ರನ್ ಗಳಿಗೆ ಕಟ್ಟಿಹಾಕಿತ್ತು. 114 ರನ್ ಗಳ ಗುರಿ ಬೆನ್ನಟ್ಟಿದ ಆರ್ ಸಿಬಿ ಮೂರು ಎಸೆತಗಳು ಬಾಕಿ ಇರುವಂತೆ 115 ರನ್ ಪೇರಿಸಿ ಗೆಲುವಿನ ನಗೆ ಬೀರಿತು.

ಆರ್ ಸಿಬಿ ತಂಡ
IPL 2024: ಶೀಘ್ರದಲ್ಲೇ RCB ಅಭ್ಯಾಸ ಶಿಬಿರಕ್ಕೆ ಕಿಂಗ್ ಕೊಹ್ಲಿ!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭ ಪಡೆಯಿತು. ಆದರೆ 11 ಓವರ್ ನಲ್ಲಿ ಶ್ರೇಯಾಂಕ ಪಟೇಲ್ ಅವರು 23 ರನ್ ಗಳಿಸಿದ್ದ ಮೆಗ್ ಲ್ಯಾನಿಂಗ್ ಅವರನ್ನು ಔಟ್ ಮಾಡುವ ಮೂಲಕ ಡೆಲ್ಲಿಗೆ ಮೊದಲ ಆಘಾತ ನೀಡಿದರು. ಈ ಪಂದ್ಯದಲ್ಲಿ ಶ್ರೇಯಾಂಕ ಪಟೇಲ್ ನಾಲ್ಕು ವಿಕೆಟ್ ಪಡೆದರು ಮಾರಕರಾದರು. ಇನ್ನು ಮೊಲಿನೆಕ್ಸ್ ಸಹ ಮೂರು ವಿಕೆಟ್ ಪಡೆದು ಎದುರಾಳಿಗಳಿಗೆ ದುಸ್ವಪ್ನವಾದರು. ಇನ್ನು ಆಶಾ ಶೋಭನ ಸಹ 2 ವಿಕೆಟ್ ಪಡೆದಿದ್ದಾರೆ.

ಡೆಲ್ಲಿ ಪರ ಶಫಾಲಿ ವರ್ಮಾ 44 ರನ್, ರಾಧಾ ಯಾದವ್ 12, ಅನುರಾಧ ರೆಡ್ಡಿ 10 ರನ್ ಬಾರಿಸಿದ್ದು ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 113 ರನ್ ಗಳಿಗೆ ಆಲೌಟ್ ಆಗಿದ್ದು ಆರ್ ಸಿಬಿಗೆ 114 ರನ್ ಗಳ ಗುರಿ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com