RCB ವಿಕೆಟ್- ಕೀಪರ್ ಸ್ಥಾನದ ಮೇಲೆ ಅನುಜ್ ರಾವತ್ ಕಣ್ಣು!

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ನಿವೃತ್ತಿಯ ಸುಳಿವು ಬಿಟ್ಟಿಕೊಟ್ಟ ನಂತರ ಆರ್ ಸಿಬಿಯ ದೀರ್ಘಾವಧಿಯ ವಿಕೆಟ್ ಕೀಪರ್ ಬ್ಯಾಟರ್ ಆಗಲು ಅನುಜ್ ರಾವತ್ ಆಶಿಸಿದ್ದಾರೆ.
ಅನುಜ್ ರಾವತ್
ಅನುಜ್ ರಾವತ್

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ನಿವೃತ್ತಿಯ ಸುಳಿವು ಬಿಟ್ಟಿಕೊಟ್ಟ ನಂತರ ಆರ್ ಸಿಬಿಯ ದೀರ್ಘಾವಧಿಯ ವಿಕೆಟ್ ಕೀಪರ್ ಬ್ಯಾಟರ್ ಸ್ಥಾನದ ಮೇಲೆ ಅನುಜ್ ರಾವತ್ ಕಣ್ಣಿಟ್ಟಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರೊಂದಿಗೆ 24 ವರ್ಷದ ಅನುಜ್ ರಾವತ್ ಉತ್ತಮ ಇನ್ನಿಂಗ್ಸ್ ಆಡಿದರು. 25 ಎಸೆತಗಳಲ್ಲಿ 48 ರನ್‌ಗಳೊಂದಿಗೆ ಸ್ಪರ್ಧಾತ್ಮಕ 173 ರನ್ ಗಳಿಸುವಲ್ಲಿ ನೆರವಾದರು. ದಿನೇಶ್ ಕಾರ್ತಿಕ್ ಕಳೆದ ಕೆಲವು ಆವೃತ್ತಿಗಳಿಂದಲೂ RCB ಪರ ವಿಕೆಟ್ ಕೀಪರ್-ಬ್ಯಾಟರ್ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

ಅನುಜ್ ರಾವತ್
IPL 2024: ಚೆನ್ನೈ ವಿರುದ್ಧ ಪಂದ್ಯ ಸೋತ ಬೆನ್ನಲ್ಲೇ ನಿವೃತ್ತಿಯ ಸುಳಿವು ನೀಡಿದ RCB ಆಟಗಾರ

ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನುಜ್ ರಾವತ್, ತಂಡದಲ್ಲಿ ತಮ್ಮ ಹೊಸ ಪಾತ್ರದ ಬಗ್ಗೆ ಮ್ಯಾನೇಜ್‌ಮೆಂಟ್ ಸ್ಪಷ್ಟವಾಗಿ ತಿಳಿಸಿದೆ. ಯಾರಾದರೂ ವಿಕೆಟ್ ಕೀಪಿಂಗ್ ಮಾಡುವುದರಿಂದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸೂಚಿಸಲಾಗಿದೆ. ಐಪಿಎಲ್ 2023 ರ ಸಮಯದಲ್ಲಿ ಕೆಲವು ಪಂದ್ಯಗಳಲ್ಲಿ RCB ಪರ ವಿಕೆಟ್ ಕೀಪ್ ಮಾಡಿದ ಅನುಭವದಿಂದ ಆತ್ಮವಿಶ್ವಾಸದ ಮಟ್ಟ ಸುಧಾರಿಸಿದೆ. ಈ ಆವೃತ್ತಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಹೆಚ್ಚಿನ ಕೊಡುಗೆ ನೀಡಲು ಎದುರು ನೋಡುತ್ತಿದ್ದೇನೆ ಎಂದರು.

ಪಂಜಾಬ್ ಹೊರತಾಗಿ, ರಾಯಲ್ ಚಾಲೆಂಜರ್ಸ್ ಮಾರ್ಚ್ 29 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಏಪ್ರಿಲ್ 2 ರಂದು ಲಕ್ನೋ ಸೂಪರ್ ಜೈಂಟ್ಸ್ ಅನ್ನು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಸಿಎಸ್‌ಕೆ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತ ನಂತರ ಮುಂಬರುವ ಎಲ್ಲಾ ತವರಿನ ಪಂದ್ಯಗಳನ್ನು ಗೆಲ್ಲಲು ಎದುರು ನೋಡುತ್ತಿದ್ದೇನೆ ಎಂದು ರಾವತ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com