ಮುಂದಿನ ಪಂದ್ಯ ಗೆಲ್ಬೇಕು ಅಂದ್ರೆ RCB ಪ್ಲೇಯಿಂಗ್ XI ನಿಂದ ಇವರನ್ನು ಕೈಬಿಡಿ; ಮಾಜಿ ಆಟಗಾರನ ಸಲಹೆ

ಐಪಿಎಲ್ 2024ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋಲು ಕಂಡಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತ ನಂತರ ಆರ್‌ಸಿಬಿ ಪ್ಲೇಯಿಂಗ್ XI ನಲ್ಲಿ ಭಾರಿ ಬದಲಾವಣೆ ಮಾಡಿಕೊಳ್ಳಬೇಕೆಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ಕೃಷ್ಣಮಾಚಾರಿ ಶ್ರೀಕಾಂತ್ ಸೂಚಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು

ಐಪಿಎಲ್ 2024ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋಲು ಕಂಡಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತ ನಂತರ ಆರ್‌ಸಿಬಿ ಪ್ಲೇಯಿಂಗ್ XI ನಲ್ಲಿ ಭಾರಿ ಬದಲಾವಣೆ ಮಾಡಿಕೊಳ್ಳಬೇಕೆಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ಕೃಷ್ಣಮಾಚಾರಿ ಶ್ರೀಕಾಂತ್ ಸೂಚಿಸಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ವಿರಾಟ್ ಕೊಹ್ಲಿಯೊಂದಿಗೆ ವಿಲ್ ಜಾಕ್ಸ್‌ಗೆ ಆರಂಭಿಕರಾಗಿ ಅವಕಾಶ ನೀಡಬೇಕು ಮತ್ತು ಫಾಫ್ ಡು ಪ್ಲೆಸಿಸ್ ನಂ.3 ರಲ್ಲಿ ಆಡಬೇಕು. ಇದಲ್ಲದೆ ಅಲ್ಜಾರಿ ಜೋಸೆಫ್ ಮತ್ತು ರಜತ್ ಪಾಟಿದಾರ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಡಬೇಕು. ಭಾರತೀಯ ವೇಗದ ಬೌಲರ್ ಆಕಾಶ್ ದೀಪ್ ಅವರಿಗೆ ತಂಡದಲ್ಲಿ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

'ವಿಲ್ ಜಾಕ್ಸ್ ಅದ್ಭುತ ಆಫ್ ಸ್ಪಿನ್ನರ್, ನಾವು ಅವರಿಂದ 2 ಓವರ್‌ ಬೌಲಿಂಗ್ ಮಾಡಿಸಿಕೊಳ್ಳಬಹುದೆಂದು ನಾನು ಭಾವಿಸುತ್ತೇನೆ. ನಾನು ಆರ್‌ಸಿಬಿ ನಾಯಕನಾಗಿದ್ದರೆ ನನ್ನ ಪ್ರಕಾರ, ಲೈನ್-ಅಪ್ ಇರಬೇಕು. ವಿಲ್ ಜಾಕ್ಸ್, ವಿರಾಟ್ ಕೊಹ್ಲಿ ಓಪನಿಂಗ್. ಫಾಫ್ ಡು ಪ್ಲೆಸಿಸ್ ನಂ. 3 ರಲ್ಲಿ , ಕ್ಯಾಮರೂನ್ ಗ್ರೀನ್ 4 ರಲ್ಲಿ ನಂತರ ಗ್ಲೆನ್ ಮ್ಯಾಕ್ಸ್‌ವೆಲ್ ಬರಬೇಕು. ಇದಲ್ಲದೆ, ಅಲ್ಜಾರಿ ಜೋಸೆಫ್ ಮತ್ತು ರಜತ್ ಪಾಟಿದಾರ್ ಅವರನ್ನು ಕೈಬಿಡಬೇಕು. ಆಕಾಶ್ ದೀಪ್ ಅವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಿಸಬೇಕು' ಎಂದಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
IPL 2024, RCB vs KKR: ವಿರಾಟ್ ಕೊಹ್ಲಿ ಒಬ್ಬರೇ ಆಡಿದ್ರೆ ಸಾಕಾ?; ಸುನೀಲ್ ಗವಾಸ್ಕರ್ ಕಿಡಿ!

ತಂಡದಲ್ಲಿ ಈ ರೀತಿ ಬದಲಾವಣೆ ಮಾಡಿದಾಗ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಸಮತೋಲನ ಸಾಧಿಸಬಹುದು. ಇಲ್ಲದಿದ್ದರೆ, ನೀವು ಬೌಲಿಂಗ್ ಮಾಡುವಾಗ ಹೆಣಗಾಡುತ್ತೀರಿ. ಕಳೆದ ಪಂದ್ಯದಲ್ಲಿ RCB ಬೌಲರ್‌ಗಳು ಒಂದೇ ಒಂದು ಬೌನ್ಸರ್ ಮಾಡದಿರುವುದು ನನಗೆ ಆಶ್ಚರ್ಯವಾಯಿತು. ಈ ಮೂಲಕ ನೀವು ಸುನಿಲ್ ನರೈನ್ ಅವರು ಅತ್ಯುತ್ತಮ ಸ್ಕೋರ್ (22 ಎಸೆತಗಳಲ್ಲಿ 47) ಕಲೆಹಾಕಲು ಬಿಟ್ಟಿದ್ದೀರಿ ಎಂದು ಶ್ರೀಕಾಂತ್ ಹೇಳಿದರು.

ಇದೀಗ ನಡೆದಿರುವುದು ಕೇವಲ ಮೂರು ಪಂದ್ಯಗಳಷ್ಟೇ ಎಂದೆನಿಸಬಹುದು. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ದಾಳಿಯಲ್ಲಿ ಕಂಡುಬರುವ ವೈವಿಧ್ಯತೆಯ ಕೊರತೆಯಿಂದಾಗಿ, ಅವರು ಈ ವರ್ಷವೂ ಮುಂದಿನ ಐಪಿಎಲ್ ಆವೃತ್ತಿಯತ್ತ ನೋಡುವಂತಾಗಬಹುದು. ಶುಕ್ರವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯವು ತಂಡದಲ್ಲಿನ ನಿರ್ದಿಷ್ಟ ದೌರ್ಬಲ್ಯವನ್ನು ಎತ್ತಿ ತೋರಿಸಿತು. RCB ಬೌಲರ್‌ಗಳು 183 ರನ್‌ಗಳನ್ನು ಡಿಫೆಂಡ್ ಮಾಡಿಕೊಳ್ಳುವ ಸಂದರ್ಭದಲ್ಲಿ ತುಂಬಾ ಕಷ್ಟಪಟ್ಟರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು
IPL 2024: RCB ವಿರುದ್ಧ KKR ಗೆ 7 ವಿಕೆಟ್ ಭರ್ಜರಿ ಜಯ

ಈ ಪಂದ್ಯದಲ್ಲಿ ಆರ್‌ಸಿಬಿ ಪರ ಆಡಿದ ವೈಶಾಖ್ ವಿಜಯಕುಮಾರ್ ಅವರು ಅತ್ಯುತ್ತಮ ಬೌಲಿಂಗ್ ಮೂಲಕ ತಂಡಕ್ಕೆ ನೆರವಾದರು. ಆದರೆ, ಅದು ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಈಮಧ್ಯೆ, RCB ಬೌಲರ್‌ಗಳು 120 ಕಿಮೀ ವೇಗದಲ್ಲಿ 19 ಎಸೆತಗಳನ್ನು ಬೌಲಿಂಗ್ ಮಾಡಿದರು, ಆದರೆ 40 ರನ್ ನೀಡಿದರು ಮತ್ತು ಕೇವಲ ಒಂದು ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com