IPL 2024: 12 ವರ್ಷಗಳ ನಂತರ ವಾಂಖೆಡೆಯಲ್ಲಿ ಮುಂಬೈ ವಿರುದ್ಧ ಕೆಕೆಆರ್ ಗೆ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 2024ನೇ ಆವೃತ್ತಿಯಲ್ಲಿ ಶುಕ್ರವಾರ ಮುಂಬೈ ಇಂಡಿಯನ್ಸ್(ಎಂಐ) ವಿರುದ್ಧ ಕೋಲ್ಕತ್ತಾ ನೈಟ್‌‌ ರೈಡರ್ಸ್(ಕೆಕೆಆರ್) 24 ರನ್​ ಗಳಿಂದ ಗೆಲುವು ಸಾಧಿಸಿದೆ.
ವೆಂಕಟೇಶ್​ ಅಯ್ಯರ್ - ಮನೀಶ್ ಪಾಂಡೆ
ವೆಂಕಟೇಶ್​ ಅಯ್ಯರ್ - ಮನೀಶ್ ಪಾಂಡೆ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 2024ನೇ ಆವೃತ್ತಿಯಲ್ಲಿ ಶುಕ್ರವಾರ ಮುಂಬೈ ಇಂಡಿಯನ್ಸ್(ಎಂಐ) ವಿರುದ್ಧ ಕೋಲ್ಕತ್ತಾ ನೈಟ್‌‌ ರೈಡರ್ಸ್(ಕೆಕೆಆರ್) 24 ರನ್​ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಕೆಕೆಆರ್ 12 ವರ್ಷಗಳ ನಂತರ ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಬಾರಿ ಗೆಲುವು ದಾಖಲಿಸಿದೆ.

ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಭರ್ಜರಿಯಾಗಿ ಬ್ಯಾಟ್ ಮಾಡಿದ ಕೆಕೆಆರ್ 19.5 ಓವರ್‌ಗೆ 10 ವಿಕೆಟ್ ಕಳೆದುಕೊಂಡು 169 ರನ್‌ ಸೇರಿಸಿತು.

ಗೆಲುವಿಗೆ 170 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ ತಂಡ, 18,5 ಓವರ್‌ಗೆ 145 ರನ್‌ ಗಳಿಗೆ ಆಲೌಟ್ ಆಗುವ ಮೂಲಕ ಕೆಕೆಆರ್ ವಿರುದ್ಧ 24 ರನ್‌ ಗಳಿಂದ ಸೋಲು ಅನುಭವಿಸಿತು. ಈ ಮೂಲಕ ಮುಂಬೈ ಬಹುತೇಕ ಪ್ಲೇಆಫ್‌ ರೇಸ್‌‌ನಿಂದ ಹೊರಬಿದ್ದಿದೆ ಮತ್ತು ಇದು ಪಾಂಡ್ಯ ನೇತೃತ್ವದ ಮುಂಬೈಗೆ ಹಾಲಿ ಆವೃತ್ತಿಯ ಎದುರಾದ ಸತತ ನಾಲ್ಕನೇ ಹಾಗೂ ಒಟ್ಟು ಎಂಟನೇ ಸೋಲಾಗಿದೆ.

ವೆಂಕಟೇಶ್​ ಅಯ್ಯರ್ - ಮನೀಶ್ ಪಾಂಡೆ
IPL 2024: ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ 'ಚೇಸ್ ಮಾಸ್ಟರ್' ವಿರಾಟ್ ಕೊಹ್ಲಿ!

ಮುಂಬೈ ಇಂಡಿಯನ್ಸ್ ಒಟ್ಟು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದು, ಕೆಕೆಆರ್ 14 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಕೆಕೆಅರ್​ ಪರ ಉತ್ತಮ ಬ್ಯಾಟಿಂಗ್ ಮಾಡಿದ ವೆಂಕಟೇಶ್​ ಅಯ್ಯರ್​ (70) ಅರ್ಧ ಶತಕ ಬಾರಿಸಿ ಮಿಂಚಿದರೆ ಬೌಲಿಂಗ್​ನಲ್ಲಿ ಮಿಚೆಲ್ ಸ್ಟಾರ್ಕ್​ 4 ವಿಕೆಟ್ ತಮ್ಮದಾಗಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com