IPL 2024: ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ, ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದ RCB

ಶನಿವಾರ ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಆವೃತ್ತಿಯ ಪಂದ್ಯದಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ 23 ಎಸೆತಗಳಲ್ಲಿ 64 ರನ್ ಗಳಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ನಾಲ್ಕು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಆರ್‌ಸಿಬಿ 7ನೇ ಸ್ಥಾನದಲ್ಲಿದೆ.
ಆರ್‌ಸಿಬಿ ಆಟಗಾರರು
ಆರ್‌ಸಿಬಿ ಆಟಗಾರರು

ಬೆಂಗಳೂರು: ಶನಿವಾರ ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಆವೃತ್ತಿಯ ಪಂದ್ಯದಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ 23 ಎಸೆತಗಳಲ್ಲಿ 64 ರನ್ ಗಳಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ನಾಲ್ಕು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. 148 ರನ್‌ಗಳ ಗುರಿ ಬೆನ್ನಟ್ಟಿದ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ (27 ಎಸೆತಗಳಲ್ಲಿ 42) ಜೋಡಿ ಕೇವಲ 35 ಎಸೆತಗಳಲ್ಲಿ 92 ರನ್‌ಗಳನ್ನು ಗಳಿಸುವ ಮೂಲಕ ತಂಡದ ಗೆಲುವಿಗೆ ನೆರವಾದರು.

ಇನ್ನು 38 (13.4 ಓವರ್‌) ಬಾಲ್‌ಗಳು ಬಾಕಿ ಇರುವಾಗಲೇ ಆರ್‌ಸಿಬಿ ಜಯ ಸಾಧಿಸಿತು. ಜೋಶ್ ಲಿಟಲ್ (4/45) ಜಿಟಿ ಪರವಾಗಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರೂ, ತಂಡದ ಗೆಲುವಿಗೆ ಸಾಧ್ಯವಾಗಲಿಲ್ಲ. ಇದಕ್ಕೂ ಮೊದಲು, ಆರ್‌ಸಿಬಿಯ ಶಿಸ್ತಿನ ಬೌಲಿಂಗ್ ಪ್ರಯತ್ನದಿಂದಾಗಿ ಗುಜರಾತ್ ಟೈಟಾನ್ಸ್ ಅನ್ನು ಸಾಧಾರಣ 147 ರನ್‌ಗಳಿಗೆ ಆಲೌಟ್ ಮಾಡಿತು.

ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದ ಆರ್‌ಸಿಬಿ ಬೌಲರ್‌ಗಳು ವಿಕೆಟ್ ಕೀಳುವುದರೊಂದಿಗೆ ಕಡಿಮೆ ರನ್‌ಗಳಿಗೆ ಜಿಟಿಯನ್ನು ಕಟ್ಟಿಹಾಕಿದ್ದರು. ವೃದ್ಧಿಮಾನ್ ಸಾಹಾ (1), ಶುಭಮನ್ ಗಿಲ್ (2), ಸಾಯಿ ಸುದರ್ಶನ್ (6), ಎಂ ಶಾರುಖ್ ಖಾನ್ (37), ಡೇವಿಡ್ ಮಿಲ್ಲರ್ (30), ರಾಹುಲ್ ತೆವಾಟಿಯಾ (35), ರಶೀದ್ ಖಾನ್ (18), ವಿಜಯ್ ಶಂಕರ್ (10), ಮಾನವ್ ಸುತಾರ್ (1), ಮೋಹಿತ್ ಶರ್ಮಾ ಮತ್ತು ನೂರ್ ಅಹ್ಮದ್ ಶೂನ್ಯಕ್ಕೆ ನಿರ್ಗಮಿಸುವ ಮೂಲಕ ತೆನ್ನೆಲ್ಲಾ ವಿಕೆಟ್ ಕಳೆದುಕೊಂಡ ಜಿಟಿ ಕೇವಲ 147 ರನ್ ಗಳಿಸಿತು.

ಆರ್‌ಸಿಬಿ ಆಟಗಾರರು
ಐಪಿಎಲ್ 2024: ಗುಜರಾತ್ ವಿರುದ್ಧ ಆರ್ ಸಿಬಿ ಗೆಲುವು; ಪ್ಲೇ ಆಫ್ ಕನಸು ಜೀವಂತ

ಆರ್‌ಸಿಪಿ ಪರವಾಗಿ ಮೊಹಮ್ಮದ್ ಸಿರಾಜ್ (2/29), ಯಶ್ ದಯಾಳ್ (2/21), ಕ್ಯಾಮರೂನ್ ಗ್ರೀನ್ 1, ವೈಶಾಖ್ ವಿಜಯ್‌ಕುಮಾರ್ (2/23) ಮತ್ತು ಕರ್ಣ್ ಶರ್ಮಾ ಒಂದು ವಿಕೆಟ್ ಪಡೆದು ಮಿಂಚಿದರು. ವಿರಾಟ್ ಕೊಹ್ಲಿ ಮತ್ತು ವೈಶಾಖ್ ತಲಾ ಒಬ್ಬರನ್ನು ರನೌಟ್ ಮಾಡಿದರು.

ಈ ಗೆಲುವಿನಿಂದ ಆರ್‌ಸಿಬಿ ಅಂಕಪಟ್ಟಿಯಲ್ಲಿ 10ನೇ ಸ್ಥಾನದಿಂದ ಏರಿ 7ನೇ ಸ್ಥಾನಕ್ಕೇರಿದೆ. ಈ ಬದಲಾವಣೆಯಿಂದಾಗಿ ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ತಲಾ ಒಂದು ಸ್ಥಾನವನ್ನು ಕಳೆದುಕೊಂಡು ಕ್ರಮವಾಗಿ 8, 9 ಮತ್ತು 10 ನೇ ಸ್ಥಾನದಲ್ಲಿವೆ. ಇದನ್ನು ಹೊರತುಪಡಿಸಿ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಆರ್‌ಸಿಬಿ ಆಟಗಾರರು
IPL 2024: RCB ಬೌಲಿಂಗ್ ಬಗ್ಗೆ ಗೇಲಿ ಮಾಡಿ ನಕ್ಕ KKR ಬ್ಯಾಟ್ಸಮನ್, ವಿಡಿಯೋ ವೈರಲ್

ಆರ್‌ಸಿಬಿಯ ವಿರಾಟ್ ಕೊಹ್ಲಿ 11 ಪಂದ್ಯಗಳಿಂದ 67.75 ಸರಾಸರಿಯಲ್ಲಿ 148.08 ಸ್ಟ್ರೈಕ್ ರೇಟ್‌ನಲ್ಲಿ 542 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಅನ್ನು ಮರಳಿ ಪಡೆದಿದ್ದಾರೆ. ಈಮಧ್ಯೆ, ಮುಂಬೈ ಇಂಡಿಯನ್ಸ್ ತಂಡದ ಜಸ್ಪ್ರೀತ್ ಬುಮ್ರಾ ಅವರು 11 ಪಂದ್ಯಗಳಲ್ಲಿ 17 ವಿಕೆಟ್ ಪಡೆಯುವುದರೊಂದಿಗೆ ಪರ್ಪಲ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com