
ನವದೆಹಲಿ: ಐಪಿಎಲ್ 2024 ರ ಟೂರ್ನಿ ನಿರ್ಣಾಯಕ ಘಟ್ಟ ತಲುಪಿದ್ದು, ಈ ಹಂತದಲ್ಲಿ ಲಕ್ನೋ ತಂಡದ ವಿರುದ್ದ 98 ರನ್ ಗಳ ಬೃಹತ್ ಜಯ ಗಳಿಸಿರುವ ಕೋಲ್ಕತ್ತ ತಂಡ ಅಂಕಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದೆ.
ಪ್ಲೇ ಆಫ್ ಗೆ ಪ್ರವೇಶ ಪಡೆಯುವುದಕ್ಕೆ ಪೈಪೋಟಿ ತೀವ್ರಗೊಂಡಿದ್ದು, ಏ.05 ರಂದು ನಡೆದ 2 ಪಂದ್ಯಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ, ಲಖನೌ ತಂಡವನ್ನು 98 ರನ್ ಗಳಿಂದ ಮಣಿಸಿದ ಕೆಕೆಆರ್ ಗೆದ್ದಿದೆ.
ಈ ಎರಡೂ ಪಂದ್ಯಗಳ ಗೆಲುವಿನ ಪರಿಣಾಮವಾಗಿ ಐಪಿಎಲ್ 2024 ಟೂರ್ನಿಯ ಅಂಕಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ.
16 ಅಂಕಗಳೊಂದಿಗೆ ಕೆಕೆಆರ್ ಮೊದಲ ಸ್ಥಾನದಲ್ಲಿದ್ದರೆ, ಅಗ್ರಸ್ಥಾನದಲ್ಲಿದ್ದ ರಾಜಸ್ಥಾನ್ ತಂಡ 2ನೇ ಸ್ಥಾನಕ್ಕೆ ಕುಸಿದಿದೆ. ಉಭಯ ತಂಡಗಳಿಗೂ 16 ಅಂಕ ಇದ್ದರೂ ಕೆಕೆಆರ್ ರನ್ ರೇಟ್ ಉತ್ತಮವಾಗಿರುಬ ಹಿನ್ನೆಲೆಯಲ್ಲಿ ಮೊದಲ ಸ್ಥಾನಕ್ಕೇರಿದೆ. ಲಕ್ನೋ 5ನೇ ಸ್ಥಾನಕ್ಕೆ ಕುಸಿದಿದ್ದರೆ, ಪಂಜಾಬ್ ವಿರುದ್ಧ 28 ರನ್ ಅಂತರದ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್ ಚೆನ್ನೈ 5ರಿಂದ 3ನೇ ಸ್ಥಾನಕ್ಕೇರಿದೆ. ಪಂಜಾಬ್ 8ನೇ ಸ್ಥಾನದಲ್ಲಿದೆ.
ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ವಿರುದ್ಧ ಸೋಲು ಕಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತು. ರನ್ ಗುರಿ ತಲುಪಲು ವಿಫಲವಾಗಿ ಸೋಲು ಎದುರಿಸಿರುವ ಪಂಜಾಬ್ ಪ್ಲೇ ಆಫ್ ಹಾದಿ ಕಠಿಣವಾಗಿದೆ.
Advertisement