IPL 2024: ನಿನ್ನ ಸ್ಟ್ರೈಕ್ ರೇಟ್ ಗೆ ಚಪ್ಪಾಳೆ ಹೊಡೆಯಬೇಕಾ? ಕಿಂಗ್ ಕೊಹ್ಲಿ ವಿರುದ್ಧ ಸುನಿಲ್ ಗವಾಸ್ಕರ್ ಗರಂ

ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಯನ್ನು ಟಾರ್ಗೆಟ್ ಮಾಡಿದ್ದಾರೆ. ಕಳೆದ ಪಂದ್ಯದ ನಂತರ ಕೊಹ್ಲಿ ತಮ್ಮ ಸ್ಟ್ರೈಕ್ ರೇಟ್ ಟೀಕಾಕಾರರನ್ನು ಗುರಿಯಾಗಿಸಿಕೊಂಡಿದ್ದರು.
IPL 2024: ನಿನ್ನ ಸ್ಟ್ರೈಕ್ ರೇಟ್ ಗೆ ಚಪ್ಪಾಳೆ ಹೊಡೆಯಬೇಕಾ? ಕಿಂಗ್ ಕೊಹ್ಲಿ ವಿರುದ್ಧ ಸುನಿಲ್ ಗವಾಸ್ಕರ್ ಗರಂ

ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಯನ್ನು ಟಾರ್ಗೆಟ್ ಮಾಡಿದ್ದಾರೆ. ಕಳೆದ ಪಂದ್ಯದ ನಂತರ ಕೊಹ್ಲಿ ತಮ್ಮ ಸ್ಟ್ರೈಕ್ ರೇಟ್ ಟೀಕಾಕಾರರನ್ನು ಗುರಿಯಾಗಿಸಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗವಾಸ್ಕರ್, ಪಂದ್ಯಗಳ ವೇಳೆ ಕಾಮೆಂಟೇಟರ್‌ಗಳು ತಮ್ಮ ಮುಂದೆ ಏನನ್ನು ನೋಡುತ್ತಾರೋ ಅದಕ್ಕೆ ಮಾತ್ರ ಪ್ರತಿಕ್ರಿಯಿಸುತ್ತಿದ್ದರು. ಕೊಹ್ಲಿಯ ಸ್ಟ್ರೈಕ್ ರೇಟ್ ಇತ್ತೀಚೆಗೆ ಚರ್ಚೆಯ ವಿಷಯವಾಗಿದೆ. ಪವರ್‌ಪ್ಲೇ ಓವರ್‌ಗಳ ನಂತರ ಸ್ಟ್ರೈಕ್ ರೇಟ್ ಅನ್ನು ನಿಧಾನಗೊಳಿಸಿದ್ದಕ್ಕಾಗಿ ಅವರು ಟೀಕಿಸಿದ್ದಾರೆ.

ಏಪ್ರಿಲ್ 28 ರಂದು ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಕೊಹ್ಲಿ 44 ಎಸೆತಗಳಲ್ಲಿ 70 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದಾದ ನಂತರ ತಮ್ಮ ಸ್ಟ್ರೈಕ್ ರೇಟ್‌ ಬಗ್ಗೆ ಟೀಕೆ ಮಾಡಿದ್ದವರ ವಿರುದ್ಧ ಕೊಹ್ಲಿ ಕೋಪಗೊಂಡಿದ್ದರು. 118 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿ ನಂತರ 14 ಅಥವಾ 15ನೇ ಓವರ್‌ನಲ್ಲಿ ಔಟಾದ ಕಾರಣಕ್ಕಾಗಿ ಟೀಕಾಕಾರರು ಕೊಹ್ಲಿ ಮೇಲೆ ಪ್ರಶ್ನೆಗಳನ್ನು ಎತ್ತುತ್ತಿದ್ದರು. ಅಲ್ಲದೆ ಸುನಿಲ್ ಗವಾಸ್ಕರ್ ನಿಮ್ಮ ಸ್ಟ್ರೈಕ್ ರೇಟ್ ಗೆ ಚಪ್ಪಾಳೆ ತಟ್ಟಬೇಕಾ ಎಂದು ವ್ಯಂಗ್ಯವಾಡಿದ್ದಾರೆ.

IPL 2024: ನಿನ್ನ ಸ್ಟ್ರೈಕ್ ರೇಟ್ ಗೆ ಚಪ್ಪಾಳೆ ಹೊಡೆಯಬೇಕಾ? ಕಿಂಗ್ ಕೊಹ್ಲಿ ವಿರುದ್ಧ ಸುನಿಲ್ ಗವಾಸ್ಕರ್ ಗರಂ
IPL 2024: ಗುಜರಾತ್ ವಿರುದ್ಧ ಸ್ಫೋಟಕ ಬ್ಯಾಟಿಂಗ್, ಐಪಿಎಲ್ ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ Virat Kohli

ಬಾಹ್ಯ ಶಬ್ದಗಳ ಬಗ್ಗೆ ನಿಮಗ್ಯಾಗೆ ಚಿಂತೆ. ಅದಕ್ಕೆಲ್ಲಾ ಕೊಹ್ಲಿ ಏಕೆ ಪ್ರತಿಕ್ರಿಯಿಸುತ್ತಿದ್ದಾರೆ? ಕಾಮೆಂಟೇಟರ್‌ಗಳು ಯಾರ ವಿರುದ್ಧವೂ ಯಾವುದೇ ಅಜೆಂಡಾ ಹೊಂದಿಲ್ಲ. ಅವರು ಅವರ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಭಾರತೀಯ ಕ್ರಿಕೆಟ್ ದಂತಕಥೆ ಹೇಳಿದ್ದಾರೆ. ಅಲ್ಲದೆ ಇದೆಲ್ಲ ಮಾತಾಡುವಾಗ ಕೊಹ್ಲಿ ನಮಗೆ ಹೊರಗಿನ ಗಲಾಟೆ ಬೇಡ, ಓಕೆ. ಹಾಗಾದರೆ ನೀವು ಯಾವುದೇ ಬಾಹ್ಯ ಶಬ್ದಕ್ಕೆ ಏಕೆ ಪ್ರತಿಕ್ರಿಯಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ನಾವೆಲ್ಲರೂ ಸ್ವಲ್ಪ ಕ್ರಿಕೆಟ್ ಆಡಿದ್ದೇವೆ. ನಮಗೆ ಯಾವುದೇ ಅಜೆಂಡಾ ಇಲ್ಲ. ನಾವು ನೋಡುವ ಬಗ್ಗೆ ನಾವು ಮಾತನಾಡುತ್ತೇವೆ. ನಾವು ಯಾವುದೇ ಇಷ್ಟ ಕಷ್ಟಗಳು ಅನಿವಾರ್ಯವಲ್ಲ. ನಾವು ನಿಜವಾಗಿ ಏನು ನಡೆಯುತ್ತಿದೆ ಎಂಬುದರ ಕುರಿತು ಮಾತನಾಡುತ್ತೇವೆ ಎಂದು ಸುನಿಲ್ ಗವಾಸ್ಕರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com