RCB ನಾಯಕರಾಗಿದ್ದ ಎಬಿ ಡಿವಿಲಿಯರ್ಸ್ ಕೂಡ ಐಪಿಎಲ್‌ನಲ್ಲಿ ಏನನ್ನೂ ಸಾಧಿಸಿಲ್ಲ; ಹಾರ್ದಿಕ್ ಪಾಂಡ್ಯ ಬೆನ್ನಿಗೆ ನಿಂತ ಗಂಭೀರ್!

ರೋಹಿತ್ ಶರ್ಮಾ ಬದಲಿಗೆ ಹಾರ್ಧಿಕ್ ಪಾಂಡ್ಯ ಅವರನ್ನು ತಂಡದ ನಾಯಕನನ್ನಾಗಿ ನೇಮಿಸುವ ಮುಂಬೈ ಇಂಡಿಯನ್ಸ್ ಆಡಳಿತದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಗೌತಮ್ ಗಂಭೀರ್
ಗೌತಮ್ ಗಂಭೀರ್
Updated on

ಸದ್ಯ ನಡೆಯುತ್ತಿರುವ ಐಪಿಎಲ್ 2024ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕಳಪೆ ಪ್ರದರ್ಶನದಿಂದಾಗಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ರೋಹಿತ್ ಶರ್ಮಾ ಬದಲಿಗೆ ಹಾರ್ಧಿಕ್ ಪಾಂಡ್ಯ ಅವರನ್ನು ತಂಡದ ನಾಯಕನನ್ನಾಗಿ ನೇಮಿಸುವ ಮುಂಬೈ ಇಂಡಿಯನ್ಸ್ ಆಡಳಿತದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮುಂಬೈ ಇಂಡಿಯನ್ಸ್ ತಂಡ ಈ ಆವೃತ್ತಿಯಲ್ಲಿ ಆಡಿರುವ 13 ಪಂದ್ಯಗಳಲ್ಲಿ ಕೇವಲ 4 ರಲ್ಲಿ ಗೆಲುವು ಸಾಧಿಸಿರುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ಇದೀಗ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಪ್ಲೇಯರ್ ಎಬಿ ಡಿವಿಲಿಯರ್ಸ್ ವಿರುದ್ಧ ಕೂಡ ಮಾತುಗಳು ಕೇಳಿಬರುತ್ತಿವೆ.

ಭಾರತದ ಮಾಜಿ ಬ್ಯಾಟರ್ ಮತ್ತು ಸದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ಅವರು ಹಾರ್ದಿಕ್ ಪಾಂಡ್ಯ ಪರ ಬ್ಯಾಟ್ ಬೀಸಿದ್ದಾರೆ. ಹಾರ್ದಿಕ್‌ರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಎಬಿ ಡಿವಿಲಿಯರ್ಸ್ ಮತ್ತು ಪೀಟರ್ಸನ್ ಅವರ ದಾಖಲೆಗಳು ಐಪಿಎಲ್‌ನಲ್ಲಿ ಅಷ್ಟೇನು ಪ್ರಭಾವಶಾಲಿಯಾಗಿಲ್ಲ ಎಂದು ಹೇಳಿದ್ದಾರೆ. ಆರ್‌ಸಿಬಿ ತಂಡಕ್ಕಾಗಿ ಪ್ರಶಸ್ತಿ ಗೆಲ್ಲುವಲ್ಲಿ ಡಿವಿಲಿಯರ್ಸ್ ವಿಫಲವಾಗಿದ್ದಾರೆ ಮತ್ತು ಅವರ ಸ್ವಂತ ಸ್ಕೋರ್‌ಗಳನ್ನು ಹೊರತುಪಡಿಸಿ, ಅವರು ಐಪಿಎಲ್‌ನಲ್ಲಿ ಏನನ್ನೂ ಸಾಧಿಸಿಲ್ಲ ಎಂದು ಗಂಭೀರ್ ಹೇಳಿದ್ದಾರೆ.

'ಅವರು ನಾಯಕರಾಗಿದ್ದಾಗ ಪ್ರದರ್ಶನ ಹೇಗಿತ್ತು? ಕೆವಿನ್ ಪೀಟರ್ಸನ್ ಅಥವಾ ಎಬಿ ಡಿವಿಲಿಯರ್ಸ್ ನಾಯಕರಾಗಿದ್ದಾಗ ಅವರು ತಮ್ಮ ವೃತ್ತಿಜೀವನದಲ್ಲಿ ಯಾವುದೇ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ನೀವು ಅವರ ದಾಖಲೆಗಳನ್ನು ನೋಡಿದರೆ, ಅವರು ಇತರ ಯಾವುದೇ ನಾಯಕರಿಗಿಂತ ಕೆಟ್ಟ ಪ್ರದರ್ಶನ ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಎಬಿ ಡಿವಿಲಿಯರ್ಸ್ ಅವರು ತಮ್ಮ ಸ್ವಂತ ಸ್ಕೋರ್‌ಗಳನ್ನು ಹೊರತುಪಡಿಸಿ ತಂಡದ ದೃಷ್ಟಿಕೋನದಿಂದ ಅವರು ಏನನ್ನೂ ಸಾಧಿಸಿಲ್ಲ ಎಂದು ನಾನು ಭಾವಿಸುತ್ತೇನೆ. ಹಾರ್ದಿಕ್ ಪಾಂಡ್ಯ ಇನ್ನೂ ಐಪಿಎಲ್ ವಿಜೇತ ನಾಯಕ. ಆದ್ದರಿಂದ ನೀವು ಕಿತ್ತಳೆಯನ್ನು ಕಿತ್ತಳೆಗೆ ಮಾತ್ರ ಹೋಲಿಸಬೇಕು. ಸೇಬನ್ನು ಕಿತ್ತಳೆಗೆ ಹೋಲಿಸುವುದು ಸರಿಯಲ್ಲ' ಎಂದಿದ್ದಾರೆ.

ಗೌತಮ್ ಗಂಭೀರ್
ಆರ್ಥಿಕ ಸಂಕಷ್ಟದಿಂದ ಪಾರಾಗಲು ಮುಂಬೈ ಇಂಡಿಯನ್ಸ್ ಸೇರಿದ ಹಾರ್ದಿಕ್ ಪಾಂಡ್ಯ: ವರದಿ

ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2024ರ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡ ಮೊದಲ ತಂಡವಾಗಿದೆ. ಆದರೆ, RCB ಇನ್ನೂ ಅಗ್ರ ನಾಲ್ಕು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಯತ್ನಿಸುತ್ತಿದೆ. ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಬೆಂಗಳೂರು ತಂಡವು ಲೀಗ್ ಹಂತದ ಕೊನೆಯ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲಬೇಕಿರುವ ಅನಿವಾರ್ಯತೆಯಿದ್ದು, ಇತರ ತಂಡಗಳ ಫಲಿತಾಂಶಗಳು ಕೂಡ ತಮ್ಮ ಪರವಾಗಿಯೇ ಬರಬೇಕೆಂದು ಎದುರು ನೋಡುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com