ಡರ್ಬನ್: ಭಾರತ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ರೋಚಕ ಜಯ ದಾಖಲಿಸಿದ್ದು, ಆ ಮೂಲಕ 4 ಪಂದ್ಯಗಳ T20 ಸರಣಿಯಲ್ಲಿ ಮರ್ಕ್ರಾಮ್ ಪಡೆ ಸಮಬಲ ಸಾಧಿಸಿದೆ.
ಗ್ಕೆಬರ್ಹಾದಲ್ಲಿ ಸೇಂಟ್ ಜಾರ್ಜ್ ಪಾರ್ಕ್ ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತ್ತು.
125 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 19 ಓವರ್ ನಲ್ಲೇ 7 ವಿಕೆಟ್ ಕಳೆದುಕೊಂಡು 128 ರನ್ ಗಳಿಸಿ 3 ವಿಕೆಟ್ ಅಂತರದಲ್ಲಿ ರೋಚಕ ಜಯ ಸಾಧಿಸಿತು.
ದಕ್ಷಿಣ ಆಫ್ರಿಕಾ ಪರ ಟ್ರಿಸ್ಟನ್ ಸ್ಟಬ್ಸ್ ಅಜೇಯ 47 ರನ್ ಗಳಿಸಿ ಗೆಲುವಿನ ರೂವಾರಿಯಾದರು. ಅವರಿಗೆ ಗೆರಾಲ್ಡ್ ಕೊಯಿಟ್ಜಿ ಅಜೇಯ 19 ರನ್ ಗಳಿಸಿ ಅಂತಿಮ ಹಂತದಲ್ಲಿ ಉತ್ತಮ ಸಾಥ್ ನೀಡಿದರು.
ಇನ್ನು ಭಾರತದ ಪರ ವರಣ್ ಚಕ್ರವರ್ತಿ 5 ವಿಕೆಟ್ ಪಡೆದರೆ, ರವಿ ಬಿಷ್ಣೋಯ್ ಮತ್ತು ಅರ್ಶ್ ದೀಪ್ ಸಿಂಗ್ ತಲಾ 1 ವಿಕೆಟ್ ಪಡೆದರು.
Advertisement