3rd T20I: ತಿಲಕ್ ವರ್ಮಾ ದಾಖಲೆ ಶತಕ, ಭಾರತಕ್ಕೆ ರೋಚಕ ಜಯ, ಸರಣಿ 2-1 ಮುನ್ನಡೆ

ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ ರೋಚಕ ಜಯ ದಾಖಲಿಸಿದ್ದು, 4 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
India beat South Africa
ಭಾರತಕ್ಕೆ ರೋಚಕ ಜಯ
Updated on

ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ ರೋಚಕ ಜಯ ದಾಖಲಿಸಿದ್ದು, 4 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

ಸೆಂಚುರಿಯನ್ ನ ಸೂಪರ್ ಸ್ಪೋರ್ಟ್ ಪಾರ್ಕ್ ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಭಾರತ ನೀಡಿದ್ದ 220ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 7 ವಿಕೆಟ್ ನಷ್ಟಕ್ಕೆ 208 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿ, 11 ರನ್ ಗಳ ಅಂತರದಲ್ಲಿ ಸೋಲು ಕಂಡಿತು. ಆ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ.

ದಕ್ಷಿಣ ಆಫ್ರಿಕಾ ಪರ ಹೆನ್ರಿಚ್ ಕ್ಲಾಸೆನ್ 41 ರನ್ ಸಿಡಿಸಿದರೆ, ರಯಾನ್ ರಿಕೆಲ್ಟನ್ 20, ರೀಜಾ ಹೆಂಡ್ರಿಕ್ಸ್ 21, ಎಡನ್ ಮರ್ಕ್ರಾಮ್ 29, ಡೇವಿಡ್ ಮಿಲ್ಲರ್ 18, ಟ್ರಿಸ್ಟಾನ್ ಸ್ಟಬ್ಸ್ 12, ಮಾರ್ಕೋ ಜೇನ್ಸನ್ 54 ರನ್ ಗಳಿಸಿದರು.

ಭಾರತದ ಪರ ವರಣ್ ಚಕ್ರವರ್ತಿ 2 ಮತ್ತು ಅರ್ಶ್ ದೀಪ್ ಸಿಂಗ್ 3 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯಾ ಮತ್ತು ಅಕ್ಸರ್ ಪಟೇಲ್ ತಲಾ 1 ವಿಕೆಟ್ ಪಡೆದರು.

India beat South Africa
'ದ್ರಾವಿಡ್, ಧೋನಿ, Kohli, ರೋಹಿತ್ ನನ್ನ ಮಗನ 10 ವರ್ಷ ಕ್ರಿಕೆಟ್ ಜೀವನ ಹಾಳು ಮಾಡಿದರು': Sanju Samson ತಂದೆ ಆಕ್ರೋಶ!

ದಾಖಲೆಯ ಚೊಚ್ಚಲ ಟಿ20 ಶತಕ ಸಿಡಿಸಿದ ತಿಲಕ್ ವರ್ಮಾ

ಇನ್ನು ಇಂದಿನ ಪಂದ್ಯದಲ್ಲಿ ಭಾರತದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಕೇವಲ 51 ಎಸೆತಗಳಲ್ಲಿ ಶತಕ ಸಿಡಿಸಿ ತಮ್ಮ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. ಇಂದಿನಿಂದ ಪಂದ್ಯದಲ್ಲಿ ವಿಶೇಷವಾಗಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯುತ್ತಿದ್ದ 2ನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದ ತಿಲಕ್, ಕೊನೆಯವರೆಗೂ ಅಜೇಯರಾಗಿ ಉಳಿದು ತಂಡವನ್ನು 219 ರನ್​ಗಳಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು.

51 ಎಸೆತಗಳಲ್ಲಿ ಶತಕ

ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 51 ಎಸೆತಗಳನ್ನು ಎದುರಿಸಿದ ತಿಲಕ್, 196.07 ಸ್ಟ್ರೈಕ್ ರೇಟ್‌ನಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್​ಗಳ ನೆರವಿನಿಂದ ಬಾರಿಸಿ ಶತಕ ಪೂರೈಸಿದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಭಾರತದ 11ನೇ ಆಟಗಾರ ಎಂಬ ಹೆಗ್ಗಳಿಕೆಗೆ ತಿಲಕ್ ವರ್ಮಾ ಪಾತ್ರರಾದರು. ಹಾಗೆಯೇ ದಕ್ಷಿಣ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ ಭಾರತದ 5 ನೇ ಆಟಗಾರ ಎಂಬ ದಾಖಲೆ ತಿಲಕ್ ಪಾಲಾಯಿತು.

ತಿಲಕ್​ಗೂ ಮುನ್ನ ಸುರೇಶ್ ರೈನಾ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಇನಿಂಗ್ಸ್ ಆಡಿದ್ದಾರೆ. ಇದರ ಜೊತೆಗೆ ಟಿ20ಯಲ್ಲಿ ಶತಕ ಸಿಡಿಸಿದ ಭಾರತದ ಎರಡನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅವರು 22 ವರ್ಷ ಮತ್ತು 5 ದಿನಗಳ ವಯಸ್ಸಿನಲ್ಲಿ ಈ ಶತಕವನ್ನು ಸಿಡಿಸಿದ್ದಾರೆ. ಕೇವಲ 21 ವರ್ಷ ಮತ್ತು 279 ದಿನಗಳಲ್ಲಿ ಚೊಚ್ಚಲ ಟಿ20 ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಭಾರತ ಭರ್ಜರಿ ಬ್ಯಾಟಿಂಗ್

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ತಿಲಕ್ ವರ್ಮಾ ಅವರ ಈ ಶತಕದ ಇನ್ನಿಂಗ್ಸ್‌ನಿಂದಾಗಿ ಭಾರತ ತಂಡ ತನ್ನ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಪೇರಿಸಿತು. ಸಂಜು ಸ್ಯಾಮ್ಸನ್ ಮತ್ತೆ ಶೂನ್ಯ ಸುತ್ತಿ ನಿರಾಶೆ ಮೂಡಿಸಿದರು. ಇದಾದ ಬಳಿಕ ಕ್ರೀಸ್​ಗೆ ಬಂದ ತಿಲಕ್ ವರ್ಮಾ ಅಜೇಯರಾಗಿ ಡಗೌಟ್​ಗೆ ಮರಳಿದರು.

ಅಂತಿಮವಾಗಿ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿದೆ. ಈ ಪಂದ್ಯದಲ್ಲಿ ತಿಲಕ್ ಹೊರತಾಗಿ ಅಭಿಷೇಕ್ ಶರ್ಮಾ ಕೂಡ 25 ಎಸೆತಗಳಲ್ಲಿ 50 ರನ್​ಗಳ ಇನ್ನಿಂಗ್ಸ್ ಆಡಿದರೆ, ಹಾರ್ದಿಕ್ ಪಾಂಡ್ಯ 18 ರನ್ ಮತ್ತು ರಮಣದೀಪ್ ಸಿಂಗ್ 15 ರನ್ ಕೊಡುಗೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com