ಪಾಕಿಸ್ತಾನದಲ್ಲಿ ಟ್ರೋಫಿ ಟೂರ್ ಆರಂಭಿಸಿದ ICC; ಬಿಸಿಸಿಐ ಆಕ್ಷೇಪ ಹಿನ್ನೆಲೆ PoK ಪ್ರವೇಶಕ್ಕೆ ಬ್ರೇಕ್!

ಪಿಒಕೆ ಪ್ರದೇಶಗಳಾದ ಖೈಬರ್ ಪಖ್ತುನ್ವಾಲಾ ಪ್ರದೇಶದ ಅಬೋಟಾಬಾದ್ ಹೊರತುಪಡಿಸಿ, ಕರಾಚಿ, ರಾವಲ್ ಪಿಂಡಿ ಹಾಗೂ ಇಸ್ಲಾಮಾಬಾದ್ ಪ್ರದೇಶಗಳಲ್ಲಿ ನಡೆಯುತ್ತಿದೆ.
ICC trophy
ಐಸಿಸಿ ಟ್ರೋಫಿonline desk
Updated on

ಇಸ್ಲಾಮಾಬಾದ್: ಚಾಂಪಿಯನ್ಸ್ ಟ್ರೋಫಿಗಾಗಿ ಐಸಿಸಿ ಪಾಕಿಸ್ತಾನದಲ್ಲಿ ಟ್ರೋಫಿ ಟೂರ್ ನ್ನು ಆರಂಭಿಸಿದೆ.

ಇನ್ನು ಪಿಒಕೆ ನಲ್ಲಿಯೂ ಒಂದಷ್ಟು ಪಂದ್ಯಗಳನ್ನಾಡಿಸುವ ಪಾಕ್ ಕ್ರಿಕೆಟ್ ಮಂಡಳಿಯ ಯತ್ನಕ್ಕೆ ಐಸಿಸಿ ಬ್ರೇಕ್ ಹಾಕಿದ್ದು, ಬಿಸಿಸಿಐ ಆಕ್ಷೇಪದ ಹಿನ್ನೆಲೆಯಲ್ಲಿ ಭಾರತಕ್ಕೆ ಸೇರಿದ ಪಾಕ್ ಆಕ್ರಮಿತ ಪ್ರದೇಶವನ್ನು ಟೂರ್ ನಿಂದ ಹೊರಗಿಡಲಾಗಿದೆ.

ಪಿಒಕೆ ಪ್ರದೇಶಗಳಾದ ಖೈಬರ್ ಪಖ್ತುನ್ವಾಲಾ ಪ್ರದೇಶದ ಅಬೋಟಾಬಾದ್ ಹೊರತುಪಡಿಸಿ, ಕರಾಚಿ, ರಾವಲ್ ಪಿಂಡಿ ಹಾಗೂ ಇಸ್ಲಾಮಾಬಾದ್ ಪ್ರದೇಶಗಳಲ್ಲಿ ಟ್ರೋಫಿ ಟೂರ್ ನಡೆಯುತ್ತಿದೆ.

ಟ್ರೋಫಿ ಟೂರ್ ಪಾಕ್ ನ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಆರಂಭಗೊಂಡು ನ.17 ರಂದು ತಕ್ಷಿಲಾ ಮತ್ತು ಖಾನ್ಪುರ್ ಅಬೋಟಾಬಾದ್ (ನವೆಂಬರ್ 18), ಮುರ್ರೆ (ನವೆಂಬರ್ 19) ಮತ್ತು ನಥಿಯಾ ಗಲಿ (ನವೆಂಬರ್ 20) ಕರಾಚಿಯಲ್ಲಿ (ನವೆಂಬರ್ 22-25) ನಡೆಯಲಿದೆ.

ಈ ನಗರಗಳಲ್ಲಿ ಹೆಚ್ಚಿನವು ಪ್ರವಾಸಿ ಆಕರ್ಷಣೆಗಳಾಗಿವೆ, ಇದಕ್ಕೂ ಮೊದಲು, ನವೆಂಬರ್ 14 ರಂದು, ಪಿಸಿಬಿ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದಿತ ಪ್ರದೇಶವಾದ ಪಿಒಕೆ ಪ್ರದೇಶದಲ್ಲಿ ಬರುವ ಸ್ಕರ್ಡು, ಹುಂಜಾ ಮತ್ತು ಮುಜಫರಾಬಾದ್‌ನಂತಹ ನಗರಗಳನ್ನು ಒಳಗೊಂಡ ಟ್ರೋಫಿ ಟೂರ್ ನ್ನು ಘೋಷಿಸಿತ್ತು.

ಆದಾಗ್ಯೂ, ಶನಿವಾರ ಬಹಿರಂಗಪಡಿಸಿದಂತೆ ಆ ನಗರಗಳನ್ನು ಪ್ರವಾಸದಿಂದ ತೆಗೆದುಹಾಕಲು ಜಾಗತಿಕ ಕ್ರಿಕೆಟ್ ಸಂಸ್ಥೆ ತ್ವರಿತ ಕ್ರಮ ಕೈಗೊಂಡಿದೆ.

ICC trophy
BCCI ಆಕ್ಷೇಪ: POK ನಲ್ಲಿ ಚಾಂಪಿಯನ್ಸ್ ಟ್ರೋಫಿ ಪ್ರವಾಸ ರದ್ದುಗೊಳಿಸಿದ ICC

ಪಾಕಿಸ್ತಾನದಲ್ಲಿ ಟ್ರೋಫಿ ಪ್ರವಾಸದ ನಂತರ, ಅಫ್ಘಾನಿಸ್ತಾನ (ನವೆಂಬರ್ 26-28), ನಂತರ ಬಾಂಗ್ಲಾದೇಶ (ಡಿಸೆಂಬರ್ 10-13), ದಕ್ಷಿಣ ಆಫ್ರಿಕಾ (ಡಿಸೆಂಬರ್ 15-22), ಆಸ್ಟ್ರೇಲಿಯಾ (ಡಿಸೆಂಬರ್ 25-ಜನವರಿ 5), ನ್ಯೂಜಿಲೆಂಡ್ (ಜನವರಿ 6-11), ಇಂಗ್ಲೆಂಡ್ (ಜನವರಿ 12-14) ಮತ್ತು ಭಾರತ (ಜನವರಿ 15-26)ಗಳಲ್ಲಿ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com