ಪರ್ತ್: ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಭಾರತ ಕೇವಲ 104ರನ್ ಗಳಿಗೆ ಆಲೌಟ್ ಆಗಿದ್ದು, ಭಾರತ 46ರನ್ ಮುನ್ನಡೆ ಸಾಧಿಸಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವು ಪರ್ತ್ನಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 150 ರನ್ಗಳಿಗೆ ಆಲೌಟ್ ಆಗಿತ್ತು.
ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ್ದ ಆಸ್ಟ್ರೇಲಿಯಾ ಕೂಡ ಭಾರತೀಯ ಬೌಲರ್ ಗಳ ಆರ್ಭಟಕ್ಕೆ ತತ್ತರಿಸಿ ಹೋಗಿದ್ದು, ಕೇವಲ 104 ರನ್ ಗಳಿಗೇ ಆಲೌಟ್ ಆಗಿದೆ.
ಆಸ್ಟ್ರೇಲಿಯಾ ಪರ ಮೆಕ್ ಸ್ವೀನಿ 10, ಟ್ರಾವಿಸ್ ಹೆಡ್ 11, ಅಲೆಕ್ಸ್ ಕೆರ್ರಿ 21 ಮತ್ತು ಮಿಚೆಲ್ ಸ್ಟಾರ್ಕ್ 26ರನ್ ಗಳಿಸಿದ್ದು ಬಿಟ್ಟರೆ ಉಳಿದಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಟಲಿಲ್ಲ. ಪರಿಣಾಮ ಆಸ್ಟ್ರೇಲಿಯಾ ಕೇವಲ 104ರನ್ ಗಳಿಗೆ ಆಲೌಟ್ ಆಯಿತು.
ಇನ್ನು ಭಾರತದ ಪರ ಜಸ್ ಪ್ರೀತ್ ಬುಮ್ರಾ 5 ವಿಕೆಟ್ ಪಡೆದರೆ, ಹರ್ಶಿತ್ ರಾಣಾ 3, ಮಹಮದ್ ಸಿರಾದಜ್ 2 ವಿಕೆಟ್ ಪಡೆದರು.
ಶತಕ ಮುನ್ನಡೆಯಲ್ಲಿ ಭಾರತ
ಇನ್ನು 2ನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡ ವಿಕೆಟ್ ನಷ್ಟ ವಿಲ್ಲದೇ 75 ರನ್ ಗಳಿಸಿದ್ದು, ಒಟ್ಟು 121ರನ್ ಗಳ ಮುನ್ನಡೆಯಲ್ಲಿದೆ. 38ರನ್ ಗಳಿಸಿರುವ ಜೈಸ್ವಾಲ್ ಮತ್ತು 29ರನ್ ಗಳಿಸಿರುವ ಕೆಎಲ್ ರಾಹುಲ್ ಕ್ರೀಸ್ ನಲ್ಲಿದ್ದಾರೆ.
Advertisement