ಪರ್ತ್ ಟೆಸ್ಟ್‌ನಲ್ಲಿ ಐದು ವಿಕೆಟ್ ಗೊಂಚಲು ಬಳಿಕ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಆ್ಯಕ್ಷನ್ ಆಸ್ಟ್ರೇಲಿಯಾ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬುಮ್ರಾ 11ನೇ ಐದು ವಿಕೆಟ್‌ಗಳ ಗೊಂಚಲು ಸಾಧನೆ ಮಾಡಿದ ನಂತರ ಆಸ್ಟ್ರೇಲಿಯಾದ ಅಭಿಮಾನಿಗಳು X ಕುಚೋಧ್ಯ ಶುರು ಮಾಡಿದ್ದಾರೆ.
ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ದಾಖಲೆಯ 295 ರನ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಈ ಹಿಂದೆ 1977ರ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾದ MCG ಅಂಗಳದಲ್ಲಿ 222 ರನ್ ಗಳಿಂದ ಭಾರತ ಗೆಲುವು ಸಾಧಿಸಿ ದಾಖಲೆ ಮಾಡಿತ್ತು. ಆ ದಾಖಲೆಯನ್ನು ಈಗ ಮುರಿದಿದೆ. ಒಟ್ಟಾರೇ ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರೀ ರನ್ ಗಳಿಂದ ಜಯ ಗಳಿಸಿದ ಒಂಬತ್ತನೇ ಅತಿದೊಡ್ಡ ವಿಜಯವಾಗಿದೆ.
ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲುತ್ತಿದ್ದಂತೆ ಆಸೀಸ್ ಅಭಿಮಾನಿಗಳು ಟೀಂ ಇಂಡಿಯಾದ ಸ್ಟಾರ್ ಬೌಲರ್ ಮತ್ತು ನಾಯಕ ಜಸ್ ಪ್ರೀತ್ ಬುಮ್ರಾ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಕೈಯಲ್ಲಿ ಆಗದವರು ಮೈ ಪರಚಿಕೊಂಡರು ಎಂಬಂತೆ ಆಸ್ಟ್ರೇಲಿಯಾ ಅಭಿಮಾನಿಗಳು ಇದೀಗ ಬುಮ್ರಾ ಬೌಲಿಂಗ್ ಆ್ಯಕ್ಷನ್ ಕುರಿತಂತೆ ಟೀಕೆ ಮಾಡುತ್ತಿದ್ದಾರೆ. ಅವರ ಬೌಲಿಂಗ್ ಆ್ಯಕ್ಷನ್ ಥ್ರೋ ಎಸೆಯುವಂತೆ ಇದೆ. ಈ ಬಗ್ಗೆ ಐಸಿಸಿ ಕ್ರಮಕೈಗೊಳ್ಳಬೇಕು ಎಂದು ಟ್ವೀಟರ್ ನಲ್ಲಿ ಆಗ್ರಹಿಸುತ್ತಿದ್ದಾರೆ.
ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್ ಆದ ನಂತರ ನಂಬಲಾಗದ ರೀತಿಯಲ್ಲಿ ಕಂಬ್ಯಾಕ್ ಮಾಡಿತು. ನಾಯಕ ಜಸ್ಪ್ರೀತ್ ಬುಮ್ರಾ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಕಬಳಿಸಿ ಆಸ್ಟ್ರೇಲಿಯಾವನ್ನು 104 ರನ್‌ಗಳಿಗೆ ಆಲೌಟ್ ಮಾಡಿದರು. ಎರಡನೇ ಇನ್ನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ (161) ಮತ್ತು ವಿರಾಟ್ ಕೊಹ್ಲಿ (100) ರನ್ ಗಳ ಬ್ಯಾಟಿಂಗ್‌ನೊಂದಿಗೆ ಭಾರತ ಉತ್ತಮ ರನ್ ಕಲೆಹಾಕಿತು. ಮೊಹಮ್ಮದ್ ಸಿರಾಜ್ ಅವರು ಟೆಸ್ಟ್‌ನಲ್ಲಿ ಐದು ವಿಕೆಟ್‌ಗಳೊಂದಿಗೆ ಫಾರ್ಮ್‌ಗೆ ಮರಳಿದರು. ರಾಣಾ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಸ್ಮರಣೀಯ ಚೊಚ್ಚಲ ಪಂದ್ಯವನ್ನು ಸಂಭ್ರಮಿಸಿದರು.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ 487 ರನ್ ಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು, ಪ್ಯಾಟ್ ಕಮಿನ್ಸ್ ಪಡೆಗೆ ಗೆಲ್ಲಲು 533 ರನ್ ಬೃಹತ್ ಗುರಿ ನೀಡಿತ್ತು. ಎಂಟು ವಿಕೆಟ್ ಪಡೆದ ಜಸ್ಪ್ರೀತ್ ಬೂಮ್ರಾ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
Advertisement