ಕಾನ್ಪುರ: ಶುಕ್ರವಾರ ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಭಾರತದ ಸ್ಪಿನ್ ಕಿಂಗ್ ಆರ್. ಅಶ್ವಿನ್ ಮತ್ತೊಂದು ದಾಖಲೆ ಬರೆದಿದ್ದಾರೆ.
ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಮೊದಲ ದಿನದಾಟದ ಭೋಜನ ವಿರಾಮದ ನಂತರ ಬಾಂಗ್ಲಾದೇಶದ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಲೆಗ್ ಅವರನ್ನು ಎಲ್ ಬಿ ಬಲೆಗೆ ಕೆಡವಿದ ಅಶ್ವಿನ್ ಅನಿಲ್ ಕುಂಬ್ಳೆ ಅವರ ಮತ್ತೊಂದು ದಾಖಲೆಯನ್ನು ಮುರಿದರು.
102 ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಅಶ್ವಿನ್, 23. 69 ಸರಾಸರಿಯಲ್ಲಿ 523 ವಿಕೆಟ್ ಪಡೆದರು. ಅವರು ಏಷ್ಯಾದಲ್ಲಿ ಆಡಿದ 71 ಟೆಸ್ಟ್‌ಗಳಲ್ಲಿ ದಾಖಲೆಯ 420 ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಉಪ ಖಂಡದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡರು. ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ 419 ವಿಕೆಟ್‌ಗಳನ್ನು ಪಡೆದಿದ್ದಾರೆ.
ಟೆಸ್ಟ್ ವೃತ್ತಿಜೀವನದಲ್ಲಿ ನಂಬಲಾಗದಷ್ಟು 800 ವಿಕೆಟ್‌ಗಳನ್ನು ಪಡೆದಿರುವ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 612 ವಿಕೆಟ್‌ಗಳೊಂದಿಗೆ ಏಷ್ಯಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಎಂಬ ಖ್ಯಾತಿ ಪಡೆದಿದ್ದಾರೆ.
Advertisement