ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ದಿನ ಮಳೆಗಾಹುತಿಯಾಗಿದ್ದು, ಮೊದಲ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ 3 ವಿಕೆಟ್ ನಷ್ಟಕ್ಕೆ 107ರನ್ ಗಳಿಸಿದೆ.
ಕಾನ್ಪುರದ ಗ್ರೀನ್ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ಇಂದು ಆರಂಭವಾದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 3 ವಿಕೆಟ್ ನಷ್ಟಕ್ಕೆ 107ರನ್ ಗಳಿಸಿದ್ದಾಗ ಭಾರಿ ಮಳೆ ಸುರಿಯಲಾರಂಭಿಸಿತು.
ಸುಮಾರು ಗಂಟೆಗಳ ಕಾಲಕಾದರೂ ಮಳೆ ನಿಲ್ಲಲಿಲ್ಲ. ಅಂತಿಮವಾಗಿ ಮಳೆ ನಿಂತಿತಾದರೂ ಮೋಡ ಕವಿದ ವಾತಾವರಣದಿಂದಾಗಿ ಮಂದಬೆಳಕು ಆಟಕ್ಕೆ ಅಡ್ಡಿಯನ್ನುಂಟು ಮಾಡಿತು. ಅಂತಿಮವಾಗಿ ಅಂಪೈರ್ ಗಳು ದಿನದಾಟ ಅಂತ್ಯಗೊಳಿಸಿದರು.
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶಕ್ಕೆ ಭಾರತದ ಉದಯೋನ್ಮುಖ ಬೌಲರ್ ಆಕಾಶ್ ದೀಪ್ ಆರಂಭಿಕ ಆಘಾತ ನೀಡಿದರು. ಕೇವಲ 29 ರನ್ ಗಳ ಅಂತರದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಝಾಕಿರ್ ಹಸನ್ (0) ಮತ್ತು ಶಾದ್ಮನ್ ಇಸ್ಲಾಂ (24)ರನ್ನು ಪೆವಿಲಿಯನ್ ಗೆ ಅಟ್ಟಿದರು.
ಆರಂಭಿಕ ಆಘಾತಕ್ಕೀಡಾದ ಬಾಂಗ್ಲಾದೇಶ ತಂಡಕ್ಕೆ ಈ ಹಂತದಲ್ಲಿ ನಾಯಕ ನಜ್ಮುಲ್ ಹುಸೇನ್ ಶಾಂತೋ (31 ರನ್) ಮತ್ತು ಮೋಮಿನುಲ್ ಹಕ್ (ಅಜೇಯ 40) 49 ರನ್ ಗಳ ಜೊತೆಯಾಟ ನೀಡಿ ನೆರವಾದರೂ, ಈ ಹಂತದಲ್ಲಿ 31 ರನ್ ಗಳಿಸಿದ್ದ ನಾಯಕ ಶಾಂತೋರನ್ನು ಅಶ್ವಿನ್ ಎಲ್ ಬಿ ಬಲೆಗೆ ಕೆಡವಿದರು.
ಬಳಿಕ ಕ್ರೀಸ್ ಗೆ ಮುಶ್ಫಿಕರ್ ರಹೀಂ, ಮೋಮಿನುಲ್ ಹಕ್ ರೊಂದಿಗೆ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
Advertisement