
ಬೆಂಗಳೂರು: ತಂಡ ಬದಲಾದರೂ ವಿರಾಟ್ ಮತ್ತು ಆರ್ ಸಿಬಿ ಅಭಿಮಾನಿಗಳೊಂದಿಗೆ ಬಾಂಧವ್ಯ ಸಿರಾಜ್ ಅವರಲ್ಲಿ ಸ್ವಲ್ಪ ಕಡಿಮೆಯಾಗಿಲ್ಲ. ಮಂಗಳವಾರ ವಿರಾಟ್- ಸಿರಾಜ್ ಭೇಟಿ ಇದನ್ನು ಸಾಕ್ಷಿಕರಿಸುವಂತಿತ್ತು.
ಹೌದು. 2018 ರಿಂದ 2024ರವರೆಗೂ RCBಯಲ್ಲಿದ್ದ ಮೊಹಮ್ಮದ್ ಸಿರಾಜ್ ಈ ಬಾರಿ ಗುಜರಾತ್ ಟೈಟನ್ಸ್ ತಂಡದಲ್ಲಿದ್ದು, ಈಗ ಎದುರಾಳಿಯಾಗಿ ಆಡಲು ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿಗೆ ತಮ್ಮ ನೆಚ್ಚಿನ 'ಗುರು' ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಲು ಎದುರು ನೋಡುತ್ತಿದ್ದಾರೆ. ಗುರು- ಶಿಷ್ಯರ ಆಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕೂಡಾ ಕಾತರದಿಂದ ಕಾಯುತ್ತಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಸಿರಾಜ್ ನಡುವೆ ಸ್ನೇಹ ಮಿಲನ ಅಪರೂಪವಾದದ್ದು, ಇದು ಅಭಿಮಾನಿಗಳಿಗೂ ಗೊತ್ತಿದ್ದು, ಬೆಂಗಳೂರಿನಲ್ಲಿ ಇಂದು ನಡೆಯಲಿರುವ RCB V/S ಗುಜರಾತ್ ಟೈಟನ್ಸ್ ನಡುವಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ಮೊಹಮ್ಮದ್ ಸಿರಾಜ್ ಮಂಗಳವಾರ ಆರ್ ಸಿಬಿಯ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ವೇಗಿ ಯಶ್ ದಯಾಲ್, ಮುಖ್ಯ ತರಬೇತುದಾರ ಆಂಡಿ ಫ್ಲವರ್ ಮತ್ತು ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರನ್ನು ಭೇಟಿ ಮಾಡಿದ್ದು, 'ದೇಹ ಮಾತ್ರ ಅಲ್ಲಿ, ಮನಸ್ಸು ಎಂದೆಂದಿಗೂ ಇಲ್ಲಿಯೇ ಎನ್ನುವ ಭಾವ ಮೂಡಿಸಿದ್ದಾರೆ. ಈ ಮಾತಿಗೆ ಫೋಟೋ ಹಾಗೂ ವಿಡಿಯೋ ಪುಷ್ಠಿಕರಿಸುವಂತಿದೆ.
RCB ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ರಾತ್ರಿಗಳು ವೇಗವಾಗಿ ಬದಲಾಗುತ್ತವೆ ಆದರೆ ಬಂಧವು ಹಾಗೇ ಇರುತ್ತದೆ. ಮತ್ತೊಮ್ಮೆ RCBian, ಯಾವಾಗಲೂ RCBian ಎಂದು ಫೋಸ್ಟ್ ಮಾಡಿದೆ.
Advertisement