IPL 2025: MI ಗೆ ಮತ್ತೆ ಆಘಾತ; ನಿರ್ಣಾಯಕ ಘಟ್ಟದಲ್ಲೇ ಮೈದಾನ ತೊರೆದ Tilak Varma! ಐಪಿಎಲ್ ಇತಿಹಾಸದ 4ನೇ ಆಟಗಾರ

ಮುಂಬೈ ಇಂಡಿಯನ್ಸ್ ತಂಡದಲ್ಲಿ ಈಗಾಗಲೇ ಇಬ್ಬರು ಸ್ಟಾರ್ ಆಟಗಾರರು ಗಾಯಗೊಂಡು ತಂಡದಿಂದ ಹೊರಗುಳಿದಿದ್ದು, ಇದೀಗ ಮೂರನೇ ಆಟಗಾರನ ರೂಪದಲ್ಲಿ ತಿಲಕ್ ವರ್ಮಾ ಕೂಡ ಮೈದಾನ ತೊರೆದಿದ್ದಾರೆ.
Tilak varma retired out
ಮೈದಾನ ತೊರೆದ ತಿಲಕ್ ವರ್ಮಾ
Updated on

ಲಖನೌ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಗೆ ಇದೀಗ ಗಾಯದ ಸಮಸ್ಯೆ ಕೂಡ ತಲೆನೋವಾಗಿ ಕಾಡುತ್ತಿದೆ.

ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್ ತಿಲಕ್ ವರ್ಮಾ ಆಟದ ನಡುವೆಯೇ ಮೈದಾನ ತೊರೆದ ಘಟನೆ ನಡೆದಿದೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಈಗಾಗಲೇ ಇಬ್ಬರು ಸ್ಟಾರ್ ಆಟಗಾರರು ಗಾಯಗೊಂಡು ತಂಡದಿಂದ ಹೊರಗುಳಿದಿದ್ದು, ಇದೀಗ ಮೂರನೇ ಆಟಗಾರನ ರೂಪದಲ್ಲಿ ತಿಲಕ್ ವರ್ಮಾ ಕೂಡ ಮೈದಾನ ತೊರೆದಿದ್ದಾರೆ.

Tilak varma retired out
IPL 2025: MI ವಿರುದ್ಧ LSG 12 ರನ್ ರೋಚಕ ಜಯ, Hardik Pandya ಪಡೆಗೆ ಮತ್ತೊಂದು ಮುಖಭಂಗ!

ನಿರ್ಣಾಯಕ ಘಟ್ಟದಲ್ಲೇ ಮೈದಾನ ತೊರೆದ ಬ್ಯಾಟರ್!

ಮುಂಬೈ ತಂಡ ನಿರ್ಣಾಯಕ ಘಟ್ಟದಲ್ಲಿರುವಾಗ 23 ಎಸೆತಗಳಲ್ಲಿ 25 ರನ್ ಗಳಿಸಿದ್ದರು. ಈ ವೇಳೆ ಮುಂಬೈ ಇಂಡಿಯನ್ಸ್ ತಂಡ 19 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿತ್ತು. ಗೆಲ್ಲಲು 6 ಎಸೆತಗಳಲ್ಲಿ 22 ರನ್ ಬೇಕಿತ್ತು.

ತಿಲಕ್ ವರ್ಮಾ ಬ್ಯಾಟ್ ಮಾಡಲು ಸಾಧ್ಯವಾಗದೇ ಮೈದಾನ ತೊರೆದರು. ಬಳಿಕ ಸ್ಯಾಂಥನರ್ ಕ್ರೀಸ್ ಗೆ ಬಂದ ಹಾರ್ದಿಕ್ ಪಾಂಡ್ಯಾ ಜೊತೆಗೂಡಿ ಅಂತಿಮ ಓವರ್ ನಲ್ಲಿ 9 ರನ್ ಗಳಷ್ಟೇ ಗಳಿಸಲು ಶಕ್ತವಾಯಿತು. ಅಂತಿಮವಾಗಿ ಲಕ್ನೋ ತಂಡ 12 ರನ್ ಗಳ ಅಂತರದ ಗೆಲುವು ಸಾಧಿಸಿತು.

ಐಪಿಎಲ್ ಇತಿಹಾಸದ 4ನೇ ಆಟಗಾರ

ಇನ್ನು ಪಂದ್ಯ ನಡೆಯುತ್ತಿರುವಾಗಲೇ ಮೈದಾನ ತೊರೆದ ತಿಲಕ್ ವರ್ಮಾ ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆಗೆ ಪಾತ್ರರಾದರು. ಪಂದ್ಯದ ನಡುವೆ ಮೈದಾನ ತೊರೆಯುವ ಮೂಲಕ ಈ ರೀತಿ ಮೈದಾನ ತೊರೆದ 4ನೇ ಆಟಗಾರ ಎಂಬ ದಾಖಲೆ ಬರೆದರು.

ಈ ಹಿಂದೆ 2022ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಇದೇ ಎಲ್ ಎಸ್ ಜಿ ತಂಡದ ವಿರುದ್ಧ ಆರ್ ಅಶ್ವಿನ್ ಮೈದಾನ ತೊರೆದಿದ್ದರು. ಬಳಿಕ 2023ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಅಥರ್ವಾ ಟೈದ್ ಕೂಡ ಮೈದಾನ ತೊರೆದಿದ್ದರು. ಇದೇ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಾಯಿ ಸುದರ್ಶನ್ ಕೂಡ ಮೈದಾನ ತೊರೆದಿದ್ದರು. ಇದೀಗ ಈ ಪಟ್ಟಿಗೆ ತಿಲಕ್ ವರ್ಮಾ ಕೂಡ ಸೇರಿದ್ದಾರೆ.

Retired out in the IPL

  • R Ashwin vs LSG, Wankhede, 2022

  • Atharva Taide vs DC, Dharamshala, 2023

  • Sai Sudharsan vs MI, Ahmedabad, 2023

  • Tilak Varma vs LSG, Lucknow, 2025*

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com