Rohit Sharma-Raj Angad Bawa
ರೋಹಿತ್ ಶರ್ಮಾ ಮತ್ತು ರಾಜ್ ಅಂಗದ್ ಬಾವಾ

IPL 2025: Rohit Sharma ಗೆ ಗಾಯ, ಅಂಡರ್ 19 ವಿಶ್ವಕಪ್ ಫೈನಲ್ ಹೀರೋ Raj Angad Bawa ಗೆ ಖುಲಾಯಿಸಿದ ಅದೃಷ್ಟ!

ಈ ಹಿಂದೆ ರಾಜ್ ಅಂಗದ್ ಬಾವಾ 2022ರ U19 ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಐದು ವಿಕೆಟ್ ಕಬಳಿಸಿ ಭಾರತ ಗೆಲ್ಲಲು ಕಾರಣರಾಗಿದ್ದರು.
Published on

ಲಖನೌ: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ಭಾರಿ ಆಘಾತ ಎದುರಾಗಿದ್ದು, ತಂಡದ ಸ್ಫೋಟಕ ಬ್ಯಾಟರ್ ರೋಹಿತ್ ಶರ್ಮಾ (Rohit Sharma) ಗಾಯದ ಸಮಸ್ಯೆಗೆ ತುತ್ತಾಗಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ವಿರುದ್ಧದ ಪಂದ್ಯಕ್ಕೆ ಗೈರಾಗಿದ್ದಾರೆ.

ಲಖನೌನ ಏಕಾನಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲೇ ಮುಂಬೈ ಇಂಡಿಯನ್ಸ್ ತಂಡ ಕಣಕ್ಕಿಳಿದಿದೆ.

ಈಗಾಗಲೇ ತಂಡದ ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಕೂಡ ಗಾಯದ ಸಮಸ್ಯೆಗೆ ತುತ್ತಾಗಿ ಇನ್ನೂ ತಂಡ ಸೇರಿಕೊಂಡಿಲ್ಲ. ಹೀಗಿರುವಾಗಲೇ ತಂಡದ ಸ್ಫೋಟಕ ಬ್ಯಾಟರ್ ರೋಹಿತ್ ಶರ್ಮಾ ಕೂಡ ಗಾಯದ ಸಮಸ್ಯೆಗೆ ತುತ್ತಾಗಿರುವುದು ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Rohit Sharma-Raj Angad Bawa
IPL 2025: 'ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇನೆ, ಈಗ ಮಾಡುವುದೇನಿಲ್ಲ'; ಜಹೀರ್ ಖಾನ್ ಜೊತೆಗೆ ರೋಹಿತ್ ಮಾತುಕತೆ ವೈರಲ್

ರೋಹಿತ್ ಶರ್ಮಾಗೆ ಏನಾಯ್ತು?

ಮೂಲಗಳ ಪ್ರಕಾರ LSG ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ವೇಳೆ ರೋಹಿತ್ ಶರ್ಮಾ ತಮ್ಮ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ವಿಚಾರವಾಗಿ ಎಲ್ಎಸ್ ಜಿ ವಿರುದ್ಧದ ಪಂದ್ಯದಲ್ಲಿ ಟಾಸ್ ವೇಳೆ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, 'ರೋಹಿತ್ ನೆಟ್ಸ್‌ನಲ್ಲಿ ಮೊಣಕಾಲಿಗೆ ಪೆಟ್ಟು ಬಿದ್ದಿದ್ದರಿಂದ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಹೇಳಿದರು. ಅಂತೆಯೇ ಬುಮ್ರಾ ಕುರಿತು ಮಾತನಾಡಿದ ಪಾಂಡ್ಯಾ, ಬುಮ್ರಾ ಚೇತರಿಸಿ ಕೊಂಡಿದ್ದಾರೆ. ಶೀಘ್ರದಲ್ಲೇ ತಂಡ ಸೇರಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೋಹಿತ್ ಅನುಪಸ್ಥಿತಿ, Raj Angad Bawa ಖುಲಾಯಿಸಿದ ಅದೃಷ್ಟ!

ಇನ್ನು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ವೇಗದ ಬೌಲಿಂಗ್ ಆಲ್‌ರೌಂಡರ್ ಹಾಗೂ ಉದಯೋನ್ಮುಖ ಆಟಗಾರ ರಾಜ್ ಅಂಗದ್ ಬಾವಾ (Raj Angad Bawa)ಗೆ ಮುಂಬೈ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಈ ಹಿಂದೆ ರಾಜ್ ಅಂಗದ್ ಬಾವಾ 2022ರ U19 ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಐದು ವಿಕೆಟ್ ಕಬಳಿಸಿ ಭಾರತ ಗೆಲ್ಲಲು ಕಾರಣರಾಗಿದ್ದರು.

ಯಾರು Raj Angad Bawa

ಅಂದಹಾಗೆ ಈ Raj Angad Bawa ದೇಶೀಯ ಕ್ರಿಕೆಟ್‌ನಲ್ಲಿ ಚಂಡೀಗಢ ಪರ ಆಡುತ್ತಿದ್ದಾರೆ. 1948 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡಕ್ಕೆ ಚಿನ್ನದ ಪದಕ ಗೆದ್ದ ತ್ರಿಲೋಚನ್ ಸಿಂಗ್ ಅವರ ಮೊಮ್ಮಗನೇ ಈ ರಾಜ್ ಅಂಗದ್ ಬಾವಾ. ಅವರ ತಂದೆ ಸುಖ್ವಿಂದರ್ ಬಾವಾ ಅವರೂ ಕೂಡ ಚಂಡೀಗಢದಲ್ಲಿ ಪ್ರಮುಖ ಕ್ರಿಕೆಟ್ ತರಬೇತುದಾರರಾಗಿದ್ದು, ರಾಜ್‌ಗೆ ಮೊದಲ ಕ್ರಿಕೆಟ್ ಪಾಠಗಳನ್ನು ಅವರೇ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com