IPL 2025: ಹಾರ್ದಿಕ್ ಪಾಂಡ್ಯ 'ವಿವಾದಾತ್ಮಾಕ' ದಿಟ್ಟ ನಿರ್ಧಾರ ಚರ್ಚೆಗೆ ಗ್ರಾಸ!

ಮುಂಬೈ ಇಂಡಿಯನ್ಸ್ ತಂಡ 19 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿತ್ತು. ಗೆಲ್ಲಲು 6 ಎಸೆತಗಳಲ್ಲಿ 22 ರನ್ ಬೇಕಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ ಕೈಗೊಂಡ ನಿರ್ಧಾರದಿಂದ ತಿಲಕ್ ವರ್ಮಾ ಬ್ಯಾಟ್ ಮಾಡಲು ಸಾಧ್ಯವಾಗದೇ ಮೈದಾನ ತೊರೆದರು.
Hardik Pandya
ಹಾರ್ದಿಕ್ ಪಾಂಡ್ಯ
Updated on

ಲಖನೌ: ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2025 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟರ್ ತಿಲಕ್ ವರ್ಮಾ ಅವರನ್ನು ಆಟದ ನಡುವೆಯೇ ಮೈದಾನ ತೊರೆಯುವ ವಿವಾದಾತ್ಮಕ ನಿರ್ಧಾರ ಕೈಗೊಂಡರು.

ಮುಂಬೈ ಇಂಡಿಯನ್ಸ್ ತಂಡ 19 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿತ್ತು. ಗೆಲ್ಲಲು 6 ಎಸೆತಗಳಲ್ಲಿ 22 ರನ್ ಬೇಕಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ ಕೈಗೊಂಡ ನಿರ್ಧಾರದಿಂದ ತಿಲಕ್ ವರ್ಮಾ ಬ್ಯಾಟ್ ಮಾಡಲು ಸಾಧ್ಯವಾಗದೇ ಮೈದಾನ ತೊರೆದರು.

ಈ ತಂತ್ರಗಾರಿಕೆ ಅಭಿಮಾನಿಗಳು ಮತ್ತು ಕ್ರಿಕೆಟ್ ವಿಶ್ಲೇಷಕರಿಗೆ ವ್ಯಾಪಕ ಟೀಕೆ ಮತ್ತು ಚರ್ಚೆಯನ್ನು ಹುಟ್ಟು ಹಾಕಿದೆ. ಇದನ್ನು ಹಿಂದಿನ ನಾಯಕ ರೋಹಿತ್ ಶರ್ಮಾ ಅವರ ಯಶಸ್ವಿ ಅವಧಿಯೊಂದಿಗೆ ಪ್ರತಿಕೂಲವಾಗಿ ಹೋಲಿಸಿ ಹಲವರು ಪಾಂಡ್ಯ ನಾಯಕತ್ವವನ್ನು ಪ್ರಶ್ನಿಸುತ್ತಿದ್ದಾರೆ.

Hardik Pandya
IPL 2025: MI ಗೆ ಮತ್ತೆ ಆಘಾತ; ನಿರ್ಣಾಯಕ ಘಟ್ಟದಲ್ಲೇ ಮೈದಾನ ತೊರೆದ Tilak Varma! ಐಪಿಎಲ್ ಇತಿಹಾಸದ 4ನೇ ಆಟಗಾರ

ಈ ನಿರ್ಧಾರವು ತಂಡದ ಕಾರ್ಯತಂತ್ರ, ಆಟಗಾರರ ಗೌರವ ಮತ್ತು ಅದರ ಹೊಸ ನಾಯಕತ್ವದಲ್ಲಿ ತಂಡದ ಒಟ್ಟಾರೆ ನಿರ್ವಹಣೆಯ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಭಿಮಾನಿಗಳು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ, ಕೆಲವರು ವರ್ಮಾಗೆ ಅನ್ಯಾಯವಾಗಿದೆ ಎಂದು ಭಾವಿಸಿದರೆ ಮತ್ತೆ ಕೆಲವರು ಪಾಂಡ್ಯ ಅವರ ನಾಯಕತ್ವದ ಪರಿಣಾಮಕಾರಿತ್ವ, ತಂಡದ ನೈತಿಕತೆ ಮತ್ತು ಪ್ರದರ್ಶನದ ಮೇಲಿನ ಪ್ರಭಾವ ಕುರಿತು ಚರ್ಚಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com