
ಕೋಲ್ಕತ್ತಾ: ಐಪಿಎಲ್ ನಲ್ಲಿ ತಮ್ಮ ಪರಿಣಾಮಕಾರಿ ಬ್ಯಾಟಿಂಗ್ ಕೌಶಲ್ಯದಿಂದ ಹೆಸರಾಗಿರುವ ಕೆಕೆಆರ್ ನ ಬ್ಯಾಟರ್ ರಿಂಕು ಸಿಂಗ್, Knight Bite ಎಪಿಸೋಡ್‌ನಲ್ಲಿ ತಮ್ಮ ಕ್ರಿಕೆಟ್ ಪ್ರಯಾಣದ ನೆನೆಪು ಬಿಚ್ಚಿಟ್ಟಿದ್ದಾರೆ.
ಬಾಣಸಿಗ ಕುನಾಲ್ ಕಪೂರ್ ಅವರೊಂದಿಗೆ ತನ್ನ ಆರಂಭಿಕ ಗಲ್ಲಿ ಕ್ರಿಕೆಟ್ ಬಗ್ಗೆ ಮಾತನಾಡಿದ ರಿಂಕು ಸಿಂಗ್, ನಾನು ಮಾರ್ಡನ್ ಸ್ಕೂಲ್ ನಲ್ಲಿ ಓದುತ್ತಿದ್ದಾಗ ಅಂತರ ಶಾಲಾ ಟೂರ್ನಮೆಂಟ್ ಇತ್ತು. ನನ್ನ ಪ್ರದರ್ಶನವನ್ನು ನೋಡಿದ ಕೆಲವರು, ಟೆನಿಸ್ ಬಾಲ್ ನಲ್ಲಿ ಎಷ್ಟು ಚೆನ್ನಾಗಿ ಆಡುತ್ತೇನೆ ಎಂಬುದು ನೋಡಿದ್ದರಿಂದ ನನ್ನನ್ನು ಆಡಲು ಕರೆದರು ಎಂದು ಹೇಳುವುದರೊಂದಿಗೆ ತನ್ನ ಮೊದಲ ಕ್ರಿಕೆಟ್ ಪಂದ್ಯವನ್ನು ನೆನಪಿಸಿಕೊಂಡರು.
ಬ್ಯಾಟಿಂಗ್ ಮಾಡಲು ಹೋಗಿ ಪಂದ್ಯ ಮುಗಿಸಿದಾಗ 32 ಎಸೆತಗಳಲ್ಲಿ 54 ರನ್ ಗಳಿಸಿದ್ದೆ. ಅಲ್ಲಿಂದ ನನ್ನ ಕ್ರಿಕೆಟ್ ಪ್ರಯಾಣ ಪ್ರಾರಂಭವಾಯಿತು ಎಂದು ಅವರು ತಿಳಿಸಿದರು. ಭಾರತ ಪರ ಆಡಿದ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯದ ಬಗ್ಗೆ ಮೆಲುಕು ಹಾಕಿದ ರಿಂಕು ಸಿಂಗ್, ನನ್ನ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಕೇವಲ ಫೀಲ್ಡಿಂಗ್ ಮಾತ್ರ ಮಾಡಿದ್ದೆ. ತುಂಬಾ ಮಳೆ ಬಂದಿತ್ತು. ಹೀಗಾಗಿ ಸ್ವಲ್ಪ ಚಿಂತಿತನಾಗಿದ್ದೆ. ಆದರೆ ಸ್ವಲ್ಪ ಸಮಯದ ನಂತರ ಎಲ್ಲವೂ ಸಾಮಾನ್ಯವಾಯಿತು ಎಂದು ಹೇಳಿದರು
ಟ್ಯಾಟೊ ಗುಟ್ಟು ಬಿಚ್ಚಿಟ್ಟ ರಿಂಕು ಸಿಂಗ್: ತನ್ನ ಕೈ ಮೇಲೆ ಬರೆದಿರುವ 2:20 "God's Plan, Beautifully Done' ಎಂಬ ಟ್ಯಾಟೊ ಕುರಿತು ಮಾತನಾಡಿದ ರಿಂಕು ಸಿಂಗ್, 2018ರಲ್ಲಿ ಕೆಕೆಆರ್ ರೂ. 80 ಲಕ್ಷ ನನ್ನನ್ನು ಆಯ್ಕೆ ಮಾಡಿದದ್ದು ನನ್ನ ಜೀವನ ಬದಲಾಯಿಸಿದ ನಿಖರವಾದ ಕ್ಷಣವಾಗಿದೆ. ಆ ಹಣ ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳ ದೊಡ್ಡ ಹಣವಾಗಿತ್ತು. ಅದಕ್ಕೂ ಮೊದಲು ಅಷ್ಟೊಂದು ಹಣವನ್ನು ನಾವು ಹೊಂದಿರಲಿಲ್ಲ. ನನ್ನ ಕುಟುಂಬದ ಜೀವನ ಸಂಪೂರ್ಣವಾಗಿ ಬದಲಾಯಿತು. ಸುಲಭವಾಗಿ ನನ್ನ ಒಡಹುಟ್ಟಿದವರ ಮದುವೆಯಾಯಿತು. ಆ ಹಣದಲ್ಲಿ ಮನೆಯೊಂದನ್ನು ಕೊಂಡುಕೊಂಡೇವು ಎಂದು ಹೇಳುವುದರೊಂದಿಗೆ ಭಾವೋದ್ವೇಗಕ್ಕೆ ಒಳಗಾದರು.
"ಅದಕ್ಕಾಗಿಯೇ ನಾನು ಈ ಟ್ಯಾಟೊ ಹಾಕಿಸಿಕೊಂಡಿದ್ದೇನೆ. ನನ್ನನ್ನು ಆಯ್ಕೆ ಮಾಡಿದಾಗ ನಿಖರವಾಗಿ ಸಮಯ 2:21 ಅಥವಾ 2:20 ಆಗಿತ್ತು. ಆ ಕ್ಷಣದಿಂದ ಎಲ್ಲವೂ ಬದಲಾಯಿತು ಎಂದು ಹೇಳುವ ಮೂಲಕ ಕೆಕೆಆರ್ ಜೊತೆಗೆ ಅವರು ಹೊಂದಿರುವ ವಿಶೇಷ ಬಾಂಧವ್ಯದ ಸಂಕೇತವಾಗಿ ಟ್ಯಾಟೊ ಹಾಕಿಸಿಕೊಂಡಿರುವ ಮಾಹಿತಿ ತಿಳಿಸಿದರು.
Advertisement