
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿ ಆರಂಭಿಕವಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ತಂಡಗಳು ಮುಖಾಮುಖಿಯಾಗಿವೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದ್ದು, ಕೆಕೆಆರ್ ಮುಗ್ಗರಿಸಿದೆ.
ಈ ಆವೃತ್ತಿಯ ಆರಂಭಿಕ ಪಂದ್ಯಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಹಾಗೂ ಕೆಕೆಆರ್ ತಂಡದ ಮಾಲೀಕ ಶಾರುಖ್ ಖಾನ್ ಅವರು ಕೆಕೆಆರ್ ತಂಡದ ರಿಂಕು ಸಿಂಗ್ ಮತ್ತು ಆರ್‌ಸಿಬಿಯ ವಿರಾಟ್ ಕೊಹ್ಲಿ ಅವರನ್ನು ವೇದಿಕೆಗೆ ಕರೆಯುತ್ತಾರೆ. ಕೊಹ್ಲಿ ವೇದಿಕೆಯಲ್ಲಿದ್ದ ವೇಳೆ ಬರುವ ರಿಂಕು ಸಿಂಗ್ ನಡವಳಿಕೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಂತರ್ಜಾಲದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ, ವಿರಾಟ್ ಕೊಹ್ಲಿ ಅವರು ರಿಂಕು ಸಿಂಗ್ ಅವರ ಕೈ ಕುಲುಕಲು ಯತ್ನಿಸುತ್ತಾರೆ ಆದರೆ, ಕೆಕೆಆರ್ ತಾರೆ ಅದನ್ನು ಲೆಕ್ಕಿಸದೆ ಹೋಗುವ ವಿಚಾರ ಇದೀಗ ಅಭಿಮಾನಿಗಳಿಗೆ ಆಶ್ಯರ್ಯ ಉಂಟುಮಾಡಿದೆ.
ಈ ಹಿಂದೆ ಕೊಹ್ಲಿ ಮತ್ತು ರಿಂಕು ಸಿಂಗ್ ನಡುವೆ ಉತ್ತಮ ಸ್ನೇಹ ಕಂಡುಬಂದಿತ್ತು. ಕಳೆದ ವರ್ಷ, ಕೊಹ್ಲಿ ತಮ್ಮ ಬ್ಯಾಟ್‌ಗಳಲ್ಲಿ ಒಂದನ್ನು ರಿಂಕುಗೆ ಉಡುಗೊರೆಯಾಗಿ ನೀಡಿದ್ದರು. ಆದರೆ, ಈ ಬಾರಿ ರಿಂಕು ವಿರಾಟ್ ಅವರನ್ನು ಕಡೆಗಣಿಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳನ್ನು ಕೆರಳುವಂತೆ ಮಾಡಿದೆ.
ಉದ್ಘಾಟನಾ ಸಮಾರಂಭದ ಮಾತುಕತೆಯ ಸಮಯದಲ್ಲಿ, ಶಾರುಖ್ ಖಾನ್ ವಿರಾಟ್ ಕೊಹ್ಲಿ ಅವರನ್ನು ಹೊಗಳಿದರು. ಕೊಹ್ಲಿ ತನಗೆ ಮತ್ತು ಲಕ್ಷಾಂತರ ಜನರಿಗೆ ಪ್ರತಿದಿನ ಸ್ಫೂರ್ತಿ ನೀಡುವ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
'2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ತಂಡಕ್ಕಾಗಿ ಮಾತ್ರ ಆಡಿದ್ದಾರೆ. ಅವರು ಐಪಿಎಲ್‌ನ ಓಜಿ ಜನರಲ್ ಓಲ್ಡ್. ಅವರು ತುಂಬಾ ದೊಡ್ಡ ಸ್ಫೂರ್ತಿ; ಅವರ 19 ವರ್ಷದೊಳಗಿನ ದಿನಗಳಲ್ಲಿ ನಾನು ಅವರ ಬ್ಯಾಟಿಂಗ್ ವೀಕ್ಷಿಸಲು ತಡರಾತ್ರಿಯವರೆಗೆ ಎಚ್ಚರವಾಗಿರುತ್ತಿದ್ದೆ. ನಾನು ಅವರೊಂದಿಗೆ ಇರುವುದು ಅದೃಷ್ಟ. ಐಪಿಎಲ್ ಇನ್ನೂ ಅದ್ಭುತವಾಗಿ ಮುಂದುವರಿಯುತ್ತದೆಯೇ ಹಾಗೂ ಅನುಭವಿ ಆಟಗಾರರು ಪ್ರಾಬಲ್ಯ ಸಾಧಿಸುವುದನ್ನು ಮುಂದುವರಿಸುತ್ತಾರೆಯೇ ಅಥವಾ ಹೊಸ, ಯುವ ಆಟಗಾರರು ಪ್ರಭಾವ ಬೀರಲು ಮುಂದಾಗುತ್ತಾರೆಯೇ ಎಂದು ಕೊಹ್ಲಿಯನ್ನು ಪ್ರಶ್ನಿಸಿದರು. ಎಂದು ಶಾರುಖ್ ಕೊಹ್ಲಿ ಬಗ್ಗೆ ಕೇಳಿದರು.
'ಕಿರಿಯ, ದಿಟ್ಟ ಆಟಗಾರರು ಹೊರಹೊಮ್ಮುತ್ತಿದ್ದು, ಆಟದಲ್ಲಿ ಬಲವಾದ ಪ್ರಭಾವ ಬೀರುತ್ತಿದ್ದಾರೆ. ಆದರೆ, ಹಳೆಯ ತಲೆಮಾರಿನ ಆಟಗಾರರು ಇನ್ನೂ ಸಕ್ರಿಯರಾಗಿದ್ದಾರೆ ಮತ್ತು ಕೊಡುಗೆ ನೀಡಲು ಉತ್ಸುಕರಾಗಿದ್ದಾರೆ. ಅವರು ಉನ್ನತ ಮಟ್ಟದಲ್ಲಿ ಆಟವಾಡುವುದನ್ನು ಮುಂದುವರಿಸಲು ಮತ್ತು ಮುಂದಿನ ವರ್ಷಗಳಲ್ಲಿ ಅಭಿಮಾನಿಗಳಿಗೆ ಶಾಶ್ವತವಾದ ನೆನಪುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ ಎಂದು ಆಶಿಸುತ್ತೇವೆ' ಎಂದು ಹೇಳಿದರು.
Advertisement