
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2025ರ 17ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ (CSK)ಗೆ ಮತ್ತೊಂದು ನಿರಾಶೆಯನ್ನುಂಟು ಮಾಡಿತು. CSK ಪಂದ್ಯವನ್ನು 25 ರನ್‌ಗಳಿಂದ ಸೋತಿದೆ. ಗುರಿಯನ್ನು ಬೆನ್ನಟ್ಟುವಾಗ ಕೇವಲ ಐದು ವಿಕೆಟ್ ಕಳೆದುಕೊಂಡರೂ ಗುರಿಯನ್ನು ತಲುಪುವ ಸ್ಥಿತಿಯಲ್ಲಿ ಚೆನ್ನೈ ಎಂದಿಗೂ ಕಾಣಲಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 183 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ 11ನೇ ಓವರ್ ವೇಳೆಗೆ 5 ವಿಕೆಟ್ ಕಳೆದುಕೊಂಡು 74 ರನ್ ಗಳಿಸಿತ್ತು. ತಂಡಕ್ಕೆ ಗುರಿ ತಲುಪಲು ಅವಕಾಶವಿತ್ತು. ಆದರೆ ಧೋನಿ ಮತ್ತು ವಿಜಯ್ ಶಂಕರ್ ನಿಧಾನಗತಿಯ ಬ್ಯಾಟಿಂಗ್ ಸೋಲಿಗೆ ಕಾರಣವಾಯಿತು. ಎಂಎಸ್ ಧೋನಿ ತಮ್ಮ ಮೊದಲ ಬೌಂಡರಿ ಬಾರಿಸಲು 19 ಎಸೆತಗಳನ್ನು ತೆಗೆದುಕೊಂಡರು, 18ನೇ ಓವರ್‌ನಲ್ಲಿ ಮುಖೇಶ್ ಕುಮಾರ್ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.
ಐಪಿಎಲ್ 2025 ರಲ್ಲಿ ಬ್ಯಾಟ್ಸ್‌ಮನ್ ತನ್ನ ಮೊದಲ ಬೌಂಡರಿ ಬಾರಿಸಲು ತೆಗೆದುಕೊಂಡ ಅತಿ ಹೆಚ್ಚು ಎಸೆತಗಳು ಇದಾಗಿದ್ದು, ಅಂತಿಮವಾಗಿ ಅವರು 26 ಎಸೆತಗಳಲ್ಲಿ ಕೇವಲ 30 ರನ್‌ಗಳಿಗೆ ಔಟಾದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ಸಿಕ್ಸ್ ಮತ್ತು ಒಂದು ಬೌಂಡರಿ ಬಾರಿಸಿದರು. ಇದು ಬೆಸ್ಟ್ ಫಿನಿಷರ್ ಧೋನಿಗೆ ಆಟಕ್ಕೆ ತದ್ವಿರುದ್ಧವಾಗಿತ್ತು. ಮತ್ತೊಂದೆಡೆ ವಿಜಯ್ ಶಂಕರ್ 54 ಎಸೆತಗಳಲ್ಲಿ 69 ರನ್ ಗಳಿಸಿದರು. ಇನ್ನು ಸಿಎಸ್‌ಕೆ ಆಟದ ಬಗ್ಗೆ ಎಲ್ಲಾ ಕಡೆಯಿಂದ ಟೀಕೆ ವ್ಯಕ್ತವಾಗುತ್ತಿದೆ.
ಒಟ್ಟಾರೆಯಾಗಿ, CSK ತಂಡವು ತನ್ನ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಸೋತಿದೆ. IPL 2025ರಲ್ಲಿ ಪ್ಲೇಆಫ್‌ಗೆ ತಲುಪಬೇಕಾದರೆ ತನ್ನ ತಂಡದವನ್ನು ತ್ವರಿತವಾಗಿ ಸರಿಪಡಿಸಿಕೊಳ್ಳಬೇಕಾಗಿದೆ. ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ ಮತ್ತು ಹೊಸ ನಾಯಕ ಅಕ್ಷರ್ ಪಟೇಲ್ ನೇತೃತ್ವದಲ್ಲಿ ಉತ್ತಮ ಆರಂಭದ ನಿರೀಕ್ಷೆಯಲ್ಲಿದೆ.
Advertisement