
ನವದೆಹಲಿ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸ್ಥಿರವಾದ ಪ್ರದರ್ಶನ ನೀಡುತ್ತಿರುವ ಸ್ಪಿನ್ನರ್ ಸಾಯಿ ಕಿಶೋರ್ ಅವರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಭಾರತದ ಮಾಜಿ ಬ್ಯಾಟರ್ ಅಂಬಟಿ ರಾಯುಡು ಹೇಳಿದ್ದಾರೆ.
28 ವರ್ಷದ ರಾಯುಡು ಗುಜರಾತ್ ಟೈಟನ್ಸ್ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಎಲ್ಲಾ ಸ್ಪೀನ್ನರ್ ಗಳಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. 7.06ರ ಸರಾಸರಿಯಲ್ಲಿ ನಾಲ್ಕು ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. ಅವರ ಒಟ್ಟಾರೆ ಪ್ರದರ್ಶನ ಸಾಕಷ್ಟು ಗಮನಾರ್ಹವಾಗಿದೆ.
ಸಾಯಿ ಕಿಶೋರ್ ಭಾರತದ ಪರ ಮೂರು ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. 2023 ಅಕ್ಟೋಬರ್ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಆಡಿದ್ದರು. ಅಂದಿನಿಂದ, ಅವರು ಯಾವುದೇ ಸ್ವರೂಪದಲ್ಲಿ ಭಾರತವನ್ನು ಪ್ರತಿನಿಧಿಸಿಲ್ಲ.
ಈಗ ಟೀಂ ಇಂಡಿಯಾ ಪರ ಆಡುತ್ತಿರುವ ಆಟಗಾರರಂತೆ ಸಾಯಿ ಕಿಶೋರ್ ಕೂಡಾ ಚೆನ್ನಾಗಿ ಆಡುತ್ತಿದ್ದು, ಭಾರತೀಯ ತಂಡ ಸೇರಿದರೆ ಅತ್ಯುತ್ತಮವಾಗಿರುತ್ತದೆ ಎಂದು ರಾಯುಡು ESPNcricinfo ನ ಟೈಮ್‌ಔಟ್ ಶೋನಲ್ಲಿ ಹೇಳಿದರು.
ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಏಳು ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು.
ಸಾಯಿ ಕಿಶೋರ್ 24 ರನ್ ನೀಡಿ 2 ವಿಕೆಟ್ ಗಳಿಸಿದ್ದರು. ಸಾಯಿ ಕಿಶೋರ್ ದಿನದಿಂದ ದಿನಕ್ಕೆ ಸುಧಾರಿಸುತ್ತಿದ್ದು, ನೆಟ್ಸ್‌ನಲ್ಲಿ ಸಾಕಷ್ಟು ಅಭ್ಯಾಸ ಮಾಡುತ್ತಿದ್ದರು. ಅವರು ಪ್ರತಿ ಬ್ಯಾಟ್ಸ್‌ಮನ್‌ಗೆ ಬೌಲಿಂಗ್ ಮಾಡುತ್ತಿದ್ದರು. ಪ್ರತಿಕ್ರಿಯೆ ಕೂಡಾ ಪಡೆಯುತ್ತಿದ್ದರು. ಅವರು ನಿರಂತರವಾಗಿ ಕಲಿಯುತ್ತಿದ್ದರು ಎಂದು ರಾಯುಡು ಹೇಳಿದರು.
Advertisement