IPL 2025: ವಾಂಖೆಡೆ ಕೋಟೆಗೆ RCB ಲಗ್ಗೆ; 'ಗೆಲ್ಲುವುದು ಒಬ್ಬ ಪಾಂಡ್ಯ ಮಾತ್ರ' ಎಂದ ಕೃನಾಲ್ ಪಾಂಡ್ಯ

ಟೀಂ ಇಂಡಿಯಾದ ಆಟಗಾರ ಮತ್ತು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ಸೋದರ ಕೃನಾಲ್ ಪಾಂಡ್ಯ. ಪಂದ್ಯಕ್ಕೂ ಮುನ್ನ ಸಹೋದರರ ಸವಾಲ್ ಎಂದೇ ಬಿಂಬಿಸಲಾಗಿತ್ತು.
ಕೃನಾಲ್ ಪಾಂಡ್ಯ
ಕೃನಾಲ್ ಪಾಂಡ್ಯ
Updated on

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025ನೇ ಆವೃತ್ತಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮುಂಬೈ ಇಂಡಿಯನ್ಸ್ (MI) ವಿರುದ್ಧ 12 ರನ್‌ಗಳ ರೋಚಕ ಜಯ ಸಾಧಿಸಿದೆ. ಎಂಐ ತಂಡದ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವವು 2025ರ ಐಪಿಎಲ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಲೇ ಸಾಗಿದೆ. ಕಳೆದ ವರ್ಷ ರೋಹಿತ್ ಶರ್ಮಾರನ್ನು ಕೆಳಗಿಳಿಸಿ ತಾವೇ ನಾಯಕರಾಗಿದ್ದು ವಿವಾದಕ್ಕೆ ಕಾರಣವಾಗಿತ್ತು. ತಂಡಕ್ಕೆ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಸೇರ್ಪಡೆಯ ಹೊರತಾಗಿಯೂ, ಮುಂಬೈ ಕಳಪೆ ಫಾರ್ಮ್‌ನಿಂದ ಹೊರಬರಲು ಸಾಧ್ಯವಾಗಿಲ್ಲ. ಇನ್ನೇನು ಪಂದ್ಯ ಮುಂಬೈ ಪರ ತಿರುಗಿತು ಎನ್ನುವಷ್ಟರಲ್ಲಿ ಅಂತಿಮ ಓವರ್‌ನಲ್ಲಿ 3 ವಿಕೆಟ್‌ಗಳನ್ನು ಪಡೆಯುವ ಮೂಲಕ ಕೃನಾಲ್ ಪಾಂಡ್ಯ ಆರ್‌ಸಿಬಿ ಗೆಲುವಿಗೆ ಕಾರಣರಾದರು.

'ಟೀಂ ಇಂಡಿಯಾದ ಆಟಗಾರ ಮತ್ತು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ಸೋದರ ಕೃನಾಲ್ ಪಾಂಡ್ಯ. ಪಂದ್ಯಕ್ಕೂ ಮುನ್ನ ಸಹೋದರರ ಸವಾಲ್ ಎಂದೇ ಬಿಂಬಿಸಲಾಗಿತ್ತು. ಕೆಕೆಆರ್ ವಿರುದ್ಧ ನಡೆದ ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಕೃನಾಲ್ ಪಾಂಡ್ಯ 3 ವಿಕೆಟ್ ಪಡೆದು ಮಿಂಚಿದ್ದರು. ಆಗ್ ಹಾರ್ದಿಕ್ ಪಾಂಡ್ಯ ತಮ್ಮ ಸೋದರನನ್ನು ಶ್ಲಾಘಿಸಿದ್ದರು. ಇದೀಗ ಸೋದರರ ನಡುವಿನ ಕಾಳಗದಲ್ಲಿ ಕೃನಾಲ್ ಪಾಂಡ್ಯ ಅವರು ಗೆಲುವು ಸಾಧಿಸಿದ್ದಾರೆ.

ಕೃನಾಲ್ ಪಾಂಡ್ಯ
IPL 2025: ಪಂದ್ಯ ಶ್ರೇಷ್ಠ ಪ್ರಶಸ್ತಿ 'ಅವರಿಗೇ' ಸೇರಬೇಕು, ನನಗಲ್ಲ; ಅಭಿಮಾನಿಗಳ ಮನಗೆದ್ದ RCB ನಾಯಕ ರಜತ್ ಪಾಟಿದಾರ್

ಪಂದ್ಯದ ನಂತರ ಮಾತನಾಡಿದ ಕೃನಾಲ್, 'ನಮ್ಮ (ಹಾರ್ದಿಕ್ ಮತ್ತು ನಾನು) ನಡುವೆ ಉತ್ತಮ ಬಾಂಧವ್ಯವಿದೆ. ಆದರೆ, ಕೊನೆಯಲ್ಲಿ ಗೆಲ್ಲಬೇಕಾಗಿರುವುದು ಅಥವಾ ಗೆಲ್ಲುವುದು ಒಬ್ಬ ಪಾಂಡ್ಯ ಮಾತ್ರ ಎಂಬುದು ನಮಗೆ ತಿಳಿದಿತ್ತು. ನಾವು ಪರಸ್ಪರ ಹೊಂದಿರುವ ಪ್ರೀತಿ ಮತ್ತು ವಾತ್ಸಲ್ಯ ಬಹಳ ನೈಸರ್ಗಿಕವಾಗಿದೆ. ಹಾರ್ದಿಕ್ ನಿಜವಾಗಿಯೂ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಆದರೆ, ನಾವು (ನಮ್ಮ ತಂಡ) ಗೆದ್ದಿದ್ದೇವೆ ಮತ್ತು ಅದು ಅತ್ಯಂತ ಮುಖ್ಯವಾಗಿದೆ' ಎಂದರು.

'ನಾನು ಬೌಲಿಂಗ್‌ಗೆ ಬಂದಾಗ, ಸ್ಯಾಂಟ್ನರ್ ಬ್ಯಾಟಿಂಗ್ ಮಾಡುತ್ತಿದ್ದರು. ಲೆಗ್ ಸೈಡ್ ಬೌಂಡರಿ ಚಿಕ್ಕದಾಗಿತ್ತು. ಕಳೆದ 10 ವರ್ಷಗಳಲ್ಲಿ ನಾನು ಇಲ್ಲಿ ಹಲವಾರು ಪಂದ್ಯಗಳನ್ನು ಆಡಿದ್ದೇನೆ. ಒಂದು ಹಂತದಲ್ಲಿ ಆ ಅನುಭವ ನೆರವಾಯಿತು. ಬೌಲರ್ ಆಗಿ, ಶೇ 100 ರಷ್ಟು ಬದ್ಧರಾಗಿರುವುದು ಮುಖ್ಯವಾಗಿರುತ್ತದೆ ಮತ್ತು ಅದು ತಂಡದ ಗೆಲುವಿಗೆ ಸಹಾಯ ಮಾಡುತ್ತದೆ' ಎಂದು ಅವರು ಹೇಳಿದರು.

ಟಾಸ್ ಗೆದ್ದ ಮುಂಬೈ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು. ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ಜಿತೇಶ್ ಶರ್ಮಾ ಅವರ ಅದ್ಭುತ ಪ್ರದರ್ಶನ ತಂಡವು ಉತ್ತಮ ರನ್ ಕಲೆಹಾಕುವಲ್ಲಿ ನೆರವಾಯಿತು. 222 ರನ್ ಗುರಿ ಬೆನ್ನತ್ತಿದ ಮುಂಬೈ ಆರಂಭದಲ್ಲಿಯೇ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ನಂತರ ಸೂರ್ಯಕುಮಾರ್ ಯಾದವ್, ರಯಾನ್ ರಿಕಲ್ಟನ್ ಮತ್ತು ವಿಲ್ ಜ್ಯಾಕ್ಸ್ ಅವರ ವಿಕೆಟ್ ಪತನವಾಯಿತು.

ಕೃನಾಲ್ ಪಾಂಡ್ಯ
IPL 2025: ಮುಂಬೈ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ!

ತಿಲಕ್ ವರ್ಮಾ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಸ್ಫೋಟಕ ಜೊತೆಯಾಟ ತಂಡಕ್ಕೆ ಒಂದು ಹಂತದಲ್ಲಿ ತಂಡಕ್ಕೆ ಗೆಲುವಿನ ಲಯಕ್ಕೆ ಕರೆದೊಯ್ದಿತಾದರೂ, ಅದು ಹೆಚ್ಚು ಹೊತ್ತು ಉಳಿಯಲಿಲ್ಲ. ತಿಲಕ್ ವರ್ಮಾ ಅವರ ವೇಗದ ಅರ್ಧಶತಕ ಮತ್ತು ಹಾರ್ದಿಕ್ ಪಾಂಡ್ಯ ಅವರ ಬೌಂಡರಿ ಮತ್ತು ಸಿಕ್ಸರ್‌ಗಳು ಮುಂಬೈ ತಂಡದ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.

ಭುನೇಶ್ವರ್ ಕುಮಾರ್ ತಿಲಕ್ ವರ್ಮಾ ಅವರ ವಿಕೆಟ್ ಕಬಳಿಸಿದರೆ, ಜೋಶ್ ಹೇಜಲ್‌ವುಡ್ ಹಾರ್ದಿಕ್ ಅವರನ್ನು ಔಟ್ ಮಾಡಿದರು. ಇದರಿಂದಾಗಿ ಮುಂಬೈ ತಂಡಕ್ಕೆ ಕೊನೆಯ ಓವರ್‌ನಲ್ಲಿ 19 ರನ್‌ಗಳು ಬೇಕಾಗಿದ್ದವು. ಕೊನೆಯ ಓವರ್‌ನಲ್ಲಿ ಕೃನಾಲ್ ಪಾಂಡ್ಯ ಅವರ ನಿರ್ಣಾಯಕ ಬೌಲಿಂಗ್ ಆರ್‌ಸಿಬಿ ಗೆಲುವಿಗೆ ಕಾರಣವಾಯಿತು. ಡೆತ್ ಓವರ್‌ನಲ್ಲಿ ಮೂರು ವಿಕೆಟ್ ಕಬಳಿಸುವ ಮೂಲಕ ಕೃನಾಲ್ ಪಾಂಡ್ಯ ತಮ್ಮ ತಂಡಕ್ಕೆ ನೆರವಾದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com