CSK vs PBKS: IPLನಲ್ಲಿ ಅತಿ ವೇಗದ ಶತಕ ಬಾರಿಸಿದ 4ನೇ ಬ್ಯಾಟರ್ ಪ್ರಿಯಾಂಶ್; ಮೊದಲ ಸ್ಥಾನದಲ್ಲಿ RCB ಆಟಗಾರ, Video!

ಚೆನ್ನೈ ವಿರುದ್ಧ ಪ್ರಿಯಾಂಶ್ ಆರ್ಯ ಬ್ಯಾಟ್ ಅಬ್ಬರಿಸಿತು. ಅವರು ಕೇವಲ 39 ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ಶತಕ ಗಳಿಸಿದರು. ಇದು ಪ್ರಿಯಾಂಶ್ ಅವರ ಐಪಿಎಲ್‌ನಲ್ಲಿ ಮೊದಲ ಶತಕವಾಗಿದೆ.
ಪ್ರಿಯಾಂಶ್ ಆರ್ಯ-ಕ್ರಿಸ್ ಗೇಯ್ಲ್
ಪ್ರಿಯಾಂಶ್ ಆರ್ಯ-ಕ್ರಿಸ್ ಗೇಯ್ಲ್
Updated on

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ 39 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. ಇದರೊಂದಿಗೆ ಪ್ರಿಯಾಂಶ್ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸಿದ ಜಂಟಿ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ವಿಷಯದಲ್ಲಿ ಪ್ರಿಯಾಂಶ್, ಕಳೆದ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಅದೇ ಸಂಖ್ಯೆಯ ಎಸೆತಗಳಲ್ಲಿ ಶತಕ ಗಳಿಸಿದ್ದ ಸನ್‌ರೈಸರ್ಸ್ ಹೈದರಾಬಾದ್‌ನ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್‌ರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಚೆನ್ನೈ ವಿರುದ್ಧ ಪ್ರಿಯಾಂಶ್ ಆರ್ಯ ಬ್ಯಾಟ್ ಅಬ್ಬರಿಸಿತು. ಅವರು ಕೇವಲ 39 ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ಶತಕ ಗಳಿಸಿದರು. ಇದು ಪ್ರಿಯಾಂಶ್ ಅವರ ಐಪಿಎಲ್‌ನಲ್ಲಿ ಮೊದಲ ಶತಕವಾಗಿದೆ. ಅವರು 42 ಎಸೆತಗಳಲ್ಲಿ 103 ರನ್ ಗಳಿಸಿ ಔಟಾದರು. ಎಡಗೈ ಬ್ಯಾಟ್ಸ್‌ಮನ್ ಶಶಾಂಕ್ ಸಿಂಗ್ ಅವರೊಂದಿಗೆ ಆರನೇ ವಿಕೆಟ್‌ಗೆ 71 ರನ್‌ಗಳ ಜೊತೆಯಾಟವಾಡಿದರು.

ಐಪಿಎಲ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ಬ್ಯಾಟರ್ಸ್

* 30 ಕ್ರಿಸ್ ಗೇಲ್ (ಆರ್‌ಸಿಬಿ) ಪುಣೆ ವಾರಿಯರ್ಸ್ ವಿರುದ್ಧ ಬೆಂಗಳೂರು 2013

* 37 ಯೂಸುಫ್ ಪಠಾಣ್ ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ ಮುಂಬೈ 2010

* 38 ಡೇವಿಡ್ ಮಿಲ್ಲರ್ ಕಿಂಗ್ಸ್ ಇಲೆವೆನ್ ಪಂಜಾಬ್, ಆರ್‌ಸಿಬಿ ವಿರುದ್ಧ ಮೊಹಾಲಿ 2013

* 39 ಟ್ರಾವಿಸ್ ಹೆಡ್ ಸನ್‌ರೈಸರ್ಸ್ ಹೈದರಾಬಾದ್, ಆರ್‌ಸಿಬಿ ವಿರುದ್ಧ ಬೆಂಗಳೂರು 2024

* 39 ಪ್ರಿಯಾಂಶ್ ಆರ್ಯ ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 2025

ಪ್ರಿಯಾಂಶ್ ಆರ್ಯ-ಕ್ರಿಸ್ ಗೇಯ್ಲ್
IPL 2025: 239 ರನ್ ಟಾರ್ಗೆಟ್; ರೋಚಕ ಪಂದ್ಯದಲ್ಲಿ ಲಖನೌ ವಿರುದ್ಧ KKR ಗೆ 4 ರನ್ ಸೋಲು!

ಕಳೆದ ವರ್ಷ ಐಪಿಎಲ್ 18ನೇ ಸೀಸನ್‌ಗಾಗಿ ನಡೆದ ಮೆಗಾ ಹರಾಜಿನಲ್ಲಿ ಪ್ರಿಯಾಂಶ್ ಅವರ ಮೂಲ ಬೆಲೆ 30 ಲಕ್ಷ ರೂ.ಗಳಾಗಿದ್ದು, ಪಂಜಾಬ್ 3.80 ಕೋಟಿ ರೂ.ಗಳಿಗೆ ಪ್ರಿಯಾಂಶ್ ಅವರನ್ನು ಖರೀದಿಸಿತು. ಅಂದರೆ ಅವರ ಮೌಲ್ಯ ಸುಮಾರು 13 ಪಟ್ಟು ಹೆಚ್ಚಾಗಿದೆ. ಪ್ರಿಯಾಂಶ್ ದೇಶೀಯ ಸರ್ಕ್ಯೂಟ್‌ನಲ್ಲಿ ಪರಿಚಿತ ಹೆಸರು. ಆಗಸ್ಟ್ 2024 ರಲ್ಲಿ ಅವರು ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಬೆಳಕಿಗೆ ಬಂದರು. ಅವರ ಪವರ್ ಹಿಟ್ಟಿಂಗ್ ನಿಂದ ಇಡೀ ಜಗತ್ತು ಪ್ರಭಾವಿತವಾಯಿತು. ಅಂದಿನಿಂದ, ಅವರು ಐಪಿಎಲ್ ಹರಾಜಿನಲ್ಲಿ ಅತ್ಯಧಿಕ ಬೆಲೆಗೆ ಮಾರಾಟವಾಗಬಹುದು ಎಂಬ ಊಹಾಪೋಹಗಳು ಹರಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com