
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏ.10 ರಂದು ನಡೆದ DV vs RCB ನಡುವಿನ ಪಂದ್ಯದಲ್ಲಿ ಆರ್ ಸಿಬಿ ತಂಡ ಸೋಲು ಕಂಡಿತು.
ಈ ಸೋಲಿಗೆ ಆರ್ ಸಿಬಿಯ ಬ್ಯಾಟಿಂಗ್ ಹಾಗೂ ಬೌಲಿಂಗ್ ವೈಫಲ್ಯ ಕಾರಣವಾಯಿತು. ಕೆಎಲ್ ರಾಹುಲ್ ನ ಪೆವಿಲಿಯನ್ ಗೆ ಕಳುಹಿಸುವ ಅವಕಾಶ ಸಿಕ್ಕಿತ್ತಾದರೂ ಅದನ್ನು ತಪ್ಪಿಸಿಕೊಂಡಿದ್ದು ಆರ್ ಸಿಬಿಗೆ ದುಬಾರಿಯಾಗಿ ಪರಿಣಮಿಸಿತು.
ಇತ್ತ ವಿರಾಟ್ ಕೊಹ್ಲಿ ಸೋಲಿನ ನಡುವೆಯೂ ಬ್ಯಾಟಿಂಗ್ ವಿಭಾಗದಲ್ಲಿ ತಂಡಕ್ಕೆ ಹೊರೆಯಾಗುವಂತಹ ನಕಾರಾತ್ಮಕ ದಾಖಲೆ ನಿರ್ಮಿಸಿದ್ದಾರೆ. ಉತ್ತಮ ಆರಂಭದ ಹೊರತಾಗಿಯೂ ಕೊಹ್ಲಿ (Virat Kohli) ಮಾಡಿದ ತಪ್ಪು ತಂಡದ ಸೋಲಿಗೆ ಮುಖ ಕಾರಣವಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಉತ್ತಮ ಆರಂಭ ನೀಡಿದ್ದರು. ಈ ಇಬ್ಬರು ಮೊದಲು 3 ಓವರ್ಗಳಲ್ಲಿ ಬರೋಬ್ಬರಿ 53 ರನ್ ಕಲೆಹಾಕಿದರು. ಇದರ ಆಧಾರದಲ್ಲಿ ಆರ್‌ಸಿಬಿ 200 ಕ್ಕಿಂತ ಹೆಚ್ಚು ರನ್ ತಲುಪಬಹುದು ಎಂಬ ನಿರೀಕ್ಷೆ ಇತ್ತು ಆದರೆ 4ನೇ ಓವರ್ ನಲ್ಲಿ
ಕೊಹ್ಲಿ ಆತುರಕ್ಕೆ ಇನ್ನೆಷ್ಟು ಬಲಿ ಸ್ಟ್ರೈಕ್ ನಲ್ಲಿದ್ದ ಸಾಲ್ಟ್ ಕವರ್ನತ್ತ ಆಡಿದರು ಅಲ್ಲಿ ಫಿಲ್ಡರ್ ಇದ್ದರೂ ಸಹ ನಾನ್ ಸ್ಟ್ರೈಕ್ನಲ್ಲಿದ್ದ ವಿರಾಟ್ ಕೊಹ್ಲಿ ರನ್ಗಾಗಿ ಓಡಲು ಆರಂಭಿಸಿದರು. ಹೀಗಾಗಿ ಸಾಲ್ಟ್ ಕೂಡ ನಾನ್ ಸ್ಟ್ರೈಕ್ ತುದಿಯತ್ತ ಓಡಲಾರಂಭಿಸಿದರು. ಈ ವೇಳೆ ಫಿಲ್ಡರ್ ಅಲ್ಲೇ ಇರುವುದನ್ನು ಗಮನಿಸಿದ ಕೊಹ್ಲಿ ಅರ್ಧಕ್ಕೆ ಓಡಿದ ಬಳಿಕ ರನ್ಗೆ ನಿರಾಕರಿಸಿದರು. ಹೀಗಾಗಿ ಕೂಡಲೇ ರಾಹುಲ್ ಸ್ಟಂಪ್ ಔಟ್ ಮಾಡಿದರು. ಇದು ತಂಡಕ್ಕೆ ದುಬಾರಿಯಾಯಿತು.
ಹೆಚ್ಚಿನ ರನ್ ಗಳಿಸಲು ಹೋಗಿ ಕೊಹ್ಲಿ ತನ್ನ ಸಹ ಆಟಗಾರನನ್ನು ರನೌಟ್ ಮಾಡಿಸಿದ್ದು ಇದೇ ಮೊದಲಲ್ಲ. ಅಥವಾ ಕೊಹ್ಲಿಯೇ ರನೌಟ್ ಆಗಿರುವುದು ಕೂಡ ಇದೇ ಮೊದಲಲ್ಲ. ಇದಕ್ಕೂ ಮೊದಲು ಐಪಿಎಲ್‌ನಲ್ಲಿ ಬರೋಬ್ಬರಿ 32 ಬಾರಿ ಈ ತಪ್ಪನ್ನು ಕೊಹ್ಲಿ ಎಸಗಿದ್ದಾರೆ.
ಐಪಿಎಲ್ ಆರಂಭದಿಂದಲೂ ಆರ್‌ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ 32 ರನ್ ಔಟ್‌ಗಳಿಗೆ ಕಾರಣರಾಗಿದ್ದಾರೆ. ಈ ಪೈಕಿ ಅವರು ಸ್ವತಃ 8 ಬಾರಿ ಔಟ್ ಆಗಿದ್ದರೆ, ತಮ್ಮ ಸಹ ಆಟಗಾರನನ್ನು 24 ಬಾರಿ ಔಟ್ ಮಾಡಿಸಿದ್ದಾರೆ. ತಾವಷ್ಟೇ ಅಲ್ಲದೇ ತಮ್ಮ ಸಹ ಆಟಗಾರನನ್ನು ತಮ್ಮ ಆತುರದ ನಿರ್ಧಾರದಿಂದ ಕೊಹ್ಲಿ ಬಲಿಪಶು ಮಾಡಿದ್ದಾರೆ.
Advertisement