
ಲಖನೌ: ಉತ್ತರಪ್ರದೇಶದ ಲಖನೌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2025 ಟೂರ್ನಿಯ 26 ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್, ಲಕ್ನೋಗೆ 181 ರನ್ ಗಳ ಗೆಲುವಿನ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು.
ಆರಂಭಿಕ ಆಟಗಾರರಾದ ಸಾಯಿ ಸುದರ್ಶನ್ 56, ಶುಭ್ ಮನ್ ಗಿಲ್ 60 ರನ್ ಗಳ ಜೊತೆಯಾಟದಿಂದ 100 ರ ಗಡಿದಾಟಿದ ತಂಡಕ್ಕೆ ಜೊಸ್ ಬಟ್ಲರ್ 16, ರುದರ್ ಫೋರ್ಡ್ 22, ಶಾರೂಖ್ ಖಾನ್ 11 ರನ್ ಗಳ ಅಲ್ಪ ಮೊತ್ತದ ಕೊಡುಗೆ ನೀಡಿದರು.
ಲಕ್ನೋ ಪರ ಶಾರ್ದೂಲ್ ಠಾಕೂರ್,ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದರೆ, ದಿಗ್ವೇಶ್ ರಾಥಿ, ಅವೇಶ್ ಖಾನ್ ತಲಾ ಒಂದು ವಿಕೆಟ್ ಕಬಳಿಸಿದರು. ಗುಜರಾತ್ ಟೈಟನ್ಸ್ ನೀಡಿದ 181 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿರುವ ಲಕ್ನೋ ಪರ ಆರಂಭಿಕ ಆಟಗಾರರಾಗಿ ಐಡೆನ್ ಮಾರ್ಕ್ರಾಮ್ ಮತ್ತು ರಿಷಭ್ ಪಂತ್ ಆಡುತ್ತಿದ್ದಾರೆ.
Advertisement