ಮಾಜಿ ಕ್ರಿಕೆಟಿಗ ಜಹೀರ್ ಖಾನ್, ಸಾಗರಿಕಾ ಘಾಟ್ಗೆ ದಂಪತಿಗೆ ಗಂಡು ಮಗು ಜನನ

ದಂಪತಿ ಬುಧವಾರ ಇನ್‌ಸ್ಟಾಗ್ರಾಂನಲ್ಲಿ ಜಂಟಿ ಪೋಸ್ಟ್ ಹಂಚಿಕೊಂಡಿದ್ದು, ಮಗು ಜನಿಸಿರುವ ಕುರಿತು ಮಾಹಿತಿ ನೀಡಿದ್ದಾರೆ.
ಕ್ರಿಕೆಟಿಗ ಜಹೀರ್ ಖಾನ್ ಮತ್ತು ನಟಿ ಸಾಗರಿಕಾ
ಕ್ರಿಕೆಟಿಗ ಜಹೀರ್ ಖಾನ್ ಮತ್ತು ನಟಿ ಸಾಗರಿಕಾ
Updated on

ಮುಂಬೈ: ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಮತ್ತು ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ದಂಪತಿಗೆ ಹೆಣ್ಣು ಮಗು ಜನಿಸಿದೆ. ಈ ವಿಚಾರವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಮಗುವಿಗೆ ಫತೇಸಿನ್ ಖಾನ್ ಎಂದು ಹೆಸರಿಟ್ಟಿದ್ದಾರೆ.

ದಂಪತಿ ಬುಧವಾರ ಇನ್‌ಸ್ಟಾಗ್ರಾಂನಲ್ಲಿ ಜಂಟಿ ಪೋಸ್ಟ್ ಹಂಚಿಕೊಂಡಿದ್ದು, ಮಗು ಜನಿಸಿರುವ ಕುರಿತು ಮಾಹಿತಿ ನೀಡಿದ್ದಾರೆ. ಜಹೀರ್ ಖಾನ್ ಮಗುವನ್ನು ಎತ್ತಿಕೊಂಡಿರುವ ಮತ್ತು ಮಗುವಿನ ಕೈ ಇರುವ ಎರಡು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

'ಪ್ರೀತಿ, ಕೃತಜ್ಞತೆ ಮತ್ತು ದೈವಿಕ ಆಶೀರ್ವಾದಗಳೊಂದಿಗೆ ನಾವು ನಮ್ಮ ಅಮೂಲ್ಯವಾದ ಪುಟ್ಟ ಗಂಡು ಮಗು ಫತೇಸಿನ್ ಖಾನ್ ನನ್ನು ಸ್ವಾಗತಿಸಿದ್ದೇವೆ' ಎಂದು ಬರೆದಿದ್ದಾರೆ.

ಅಂಗದ್ ಬೇಡಿ, ಹರ್ಭಜನ್ ಸಿಂಗ್ ಮತ್ತು ಪ್ರಜ್ಞಾ ಕಪೂರ್ ಸೇರಿದಂತೆ ಹಲವರು ದಂಪತಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಇತ್ತೀಚೆಗೆ, ಸಾಗರಿಕಾ ಘಾಟ್ಗೆ ತಮ್ಮ ಪ್ರೀತಿ ಹೇಗೆ ಅರಳಿತು ಎಂಬುದನ್ನು ಬಹಿರಂಗಪಡಿಸಿದರು.

ಜಹೀರ್ ಖಾನ್ ಸಂಭಾಷಣೆ ಆರಂಭಿಸಲು ಸಹ ಹಿಂಜರಿಯುತ್ತಿದ್ದರು. ನಟ ಅಂಗದ್ ಬೇಡಿ ಮಧ್ಯಪ್ರವೇಶಿಸುವವರೆಗೂ ನಮ್ಮ ನಡುವೆ ಗೋಡೆಯಿತ್ತು. ಅಂತಿಮವಾಗಿ 2017ರಲ್ಲಿ ವಿವಾಹವಾದೆವು. ಜಹೀರ್ ಖಾನ್ ಸರಿಯಾಗಿ ಮಾತನಾಡುವ ಮೊದಲೇ ಅವರು ನನ್ನಲ್ಲಿ ಪ್ರೀತಿಯ ಮುದ್ರೆ ಒತ್ತಿದ್ದರು ಎಂದಿದ್ದಾರೆ.

ತಮ್ಮಿಬ್ಬರ ನಡುವಿನ ಸಂಬಂಧವನ್ನು ಬಲಪಡಿಸುವಲ್ಲಿ ಅಂಗದ್ ಬೇಡಿ ವಹಿಸಿದ ಮಹತ್ವದ ಪಾತ್ರಕ್ಕೆ ಸಾಗರಿಕಾ ಘಾಟ್ಗೆ ಕೃತಜ್ಞತೆ ಸಲ್ಲಿಸಿದರು. 'ನಮ್ಮನ್ನು ಒಟ್ಟಿಗೆ ಸೇರಿಸುವಲ್ಲಿ ಅಂಗದ್ ಬೇಡಿ ಕೂಡ ಬಹಳ ಮುಖ್ಯ ಪಾತ್ರ ವಹಿಸಿದ್ದಾರೆ' ಎಂದರು.

2016 ರಲ್ಲಿ ಯುವರಾಜ್ ಸಿಂಗ್ ಮತ್ತು ಹ್ಯಾಝೆಲ್ ಕೀಚ್ ಸಿಂಗ್ ಅವರ ವಿವಾಹದ ಸಂದರ್ಭದಲ್ಲಿ ಸಾಗರಿಕಾ ಘಾಟ್ಗೆ ಮತ್ತು ಜಹೀರ್ ಖಾನ್ ತಮ್ಮ ಸಂಬಂಧದ ಕುರಿತು ಬಹಿರಂಗಪಡಿಸಿದರು. ಸಾಗರಿಕಾ ಘಾಟ್ಗೆ ಮತ್ತು ಜಹೀರ್ ಖಾನ್ 2017 ರಲ್ಲಿ ವಿವಾಹವಾದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com