IPL 2025: ಅವಹೇಳನಕಾರಿ ಯುಟ್ಯೂಬ್ ಜಾಹೀರಾತು; Uber ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ RCB!

ಆರ್ ಸಿಬಿಯ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಸೌರಬ್ ಬ್ಯಾನರ್ಜಿ ಆದೇಶವನ್ನು ಕಾಯ್ದಿರಿಸಿದ್ದಾರೆ.
Travis Head
ಟ್ರಾವಿಸ್ ಹೆಡ್
Updated on

ನವದೆಹಲಿ: ಉಬರ್ ನ ಯುಟ್ಯೂಬ್ ಜಾಹೀರಾತುವೊಂದರಲ್ಲಿ ತನ್ನ ತಂಡದ ಹೆಸರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ RCB ಗುರುವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.

ಆರ್ ಸಿಬಿಯ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಸೌರಬ್ ಬ್ಯಾನರ್ಜಿ ಆದೇಶವನ್ನು ಕಾಯ್ದಿರಿಸಿದ್ದಾರೆ.

ಏನಿದು ಜಾಹೀರಾತು? Uber Moto ನ Baddies in Bengaluru ಎಂಬ ಯೂಟ್ಯೂಬ್ ಜಾಹೀರಾತಿನಲ್ಲಿ ಅಭಿನಯಿಸಿರುವ ಹೈದರಾಬಾದ್ ತಂಡದ ಸ್ಪೋಟಕ ಬ್ಯಾಟರ್ ಟ್ರಾವಿಸ್ ಹೆಡ್, ಕಳ್ಳ ಹೆಜ್ಜೆಯೊಂದಿಗೆ ಕ್ರೀಡಾಂಗಣದೊಳಗೆ ಕಾಲಿಟ್ಟು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹೈದರಾಬಾದ್ ತಂಡದ ನಡುವಿನ ಪಂದ್ಯದ ಫಲಕದಲ್ಲಿ ಸ್ಪ್ರೇ ಪೇಯಿಂಟ್ ಬಳಸಿ ' ರಾಯಲಿ ಜಾಲೆಂಜ್ಡ್ ಬೆಂಗಳೂರು' ಎಂದು ಬದಲಿಸುತ್ತಾರೆ.

ಈ ವೇಳೆ ಭದ್ರತಾ ಸಿಬ್ಬಂದಿ ಬೆನ್ನಟ್ಟಿದ್ದಾಗ ಮೂರು ನಿಮಿಷಗಳಲ್ಲಿ ಉಬರ್ ವಾಹನ ಸೌಲಭ್ಯ ಪಡೆದು ಬೈಕ್ ನಲ್ಲಿ ಹೆಡ್ ಪರಾರಿಯಾಗುತ್ತಾರೆ.

ಮೂರು ನಿಮಿಷಗಳಲ್ಲಿ ತನ್ನ ಸೇವೆ ಲಭ್ಯ ಎಂಬ ಜಾಹೀರಾತು ಸಿದ್ದಪಡಿಸುವಾಗ ತನ್ನ ತಂಡದ ಹೆಸರನ್ನು ಅವಹೇಳನ ಮಾಡಲಾಗಿದೆ. ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಆರ್ ಸಿಬಿ ಪರ ವಕೀಲರು ವಾದಿಸಿದ್ದಾರೆ.

Travis Head
IPL 2025: RCB vs CSK ಪಂದ್ಯಕ್ಕೆ ಫುಲ್ ಡಿಮ್ಯಾಂಡ್; ಕೆಲವೇ ನಿಮಿಷಗಳಲ್ಲಿ ಟಿಕೆಟ್ ಸೋಲ್ಡ್ ಔಟ್!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com