'ಕ್ರಿಕೆಟ್ ಹೇಳಿಕೊಟ್ಟ ತಂದೆಯೇ ಅದನ್ನು ತ್ಯಜಿಸುವಂತೆ ಹೇಳಿದರು': ಮಾಜಿ ಕ್ರಿಕೆಟಿಗ Sanjay Bangar ಪುತ್ರಿ (ತ್ರ) Anaya ಭಾವುಕ!

ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಲಿಂಗ ಬದಲಾವಣೆ ಕುರಿತು ಬಹಿರಂಗವಾದಾಗಿನಿಂದ ನಾನು ಹಲವು ರೀತಿಯ ಏಳು ಬೀಳುಗಳನ್ನು ಕಂಡಿದ್ದೇನೆ. ನಾನು ಪ್ರೀತಿಸಿ ಆಡುತ್ತಿದ್ದ ಕ್ರಿಕೆಟ್ ನಿಂದಲೇ ನಾನು ದೂರಾಗಬೇಕಾಯಿತು...
Anaya Bangar
ಅನಯಾ ಬಂಗಾರ್
Updated on

ನವದೆಹಲಿ: ಯಾವ ತಂದೆ ನನಗೆ ಕ್ರಿಕೆಟ್ ಹೇಳಿಕೊಟ್ಟರೋ ಅವರೇ ಆ ಕ್ರೀಡೆಯನ್ನು ತ್ಯಜಿಸುವಂತೆ ಹೇಳಿದರು ಎಂದು ಖ್ಯಾತ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ (ತ್ರ) ಅನಯಾ ಬಂಗಾರ್ ಭಾವುಕರಾಗಿ ಹೇಳಿದ್ದಾರೆ.

ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿರುವ ಅನಯಾ, "ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಲಿಂಗ ಬದಲಾವಣೆ ಕುರಿತು ಬಹಿರಂಗವಾದಾಗಿನಿಂದ ನಾನು ಹಲವು ರೀತಿಯ ಏಳು ಬೀಳುಗಳನ್ನು ಕಂಡಿದ್ದೇನೆ. ಪ್ರಮುಖವಾಗಿ ನಾನು ಪ್ರೀತಿಸಿ ಆಡುತ್ತಿದ್ದ ಕ್ರಿಕೆಟ್ ನಿಂದಲೇ ನಾನು ದೂರಾಗಬೇಕಾಯಿತು ಎಂದು ಭಾವುಕರಾಗಿದ್ದಾರೆ.

'ನನ್ನ ದೇಹ ಬದಲಾವಣೆಯಿಂದ ನಾನು ದೊಡ್ಡ ಬೆಲೆ ತೆರಬೇಕಾಯಿತು. ಕ್ರಿಕೆಟ್ ಕಲಿಸಿದ ತಂದೆಯೇ ಕ್ರಿಕೆಟ್ ತ್ಯಜಿಸುವಂತೆ ಹೇಳಿದರು. ಕ್ರಿಕೆಟ್‌ನಲ್ಲಿ ಇನ್ನು ಮುಂದೆ ನಿನಗೆ ಜಾಗವಿಲ್ಲ.. ಎಂದು ಹೇಳಿದ್ದರು. ಕುಟುಂಬದ ದೃಷ್ಟಿಕೋನದಿಂದ ನನಗೆ ಇನ್ನೂ ಸ್ಥಳವಿತ್ತು. ಆದರೆ ಸಮಾಜ, ಕ್ರಿಕೆಟ್ ಅಥವಾ ಬಾಹ್ಯ ಪ್ರಪಂಚದಲ್ಲಿ ಅದು ಇರಲಿಲ್ಲ' ಎಂದು ಅನಯಾ ಹೇಳಿದ್ದಾರೆ.

Anaya Bangar
ಮಾಜಿ ಕ್ರಿಕೆಟಿಗ Sanjay Bangar ಪುತ್ರಿ(ತ್ರ) Anaya Bangarಗೆ 'ನಗ್ನ ಚಿತ್ರ ಕಳುಹಿಸಿ' ಕಿರುಕುಳ ನೀಡಿದ ಕ್ರಿಕೆಟಿಗ!

ಆತ್ಮಹತ್ಯೆ ಆಲೋಚನೆಗಳು ಬಂದಿತ್ತು

ಇದೇ ವೇಳೆ ಸಮಾಜದ ವಿರುದ್ಧದ ಹೋರಾಟದಲ್ಲಿ, ಮನಸ್ಸಿನ ಸಂಘರ್ಷ ಮತ್ತು ಬಾಹ್ಯ ಪ್ರಪಂಚದ ರಾಕ್ಷಸರೊಂದಿಗೆ ಹೋರಾಡುತ್ತಿದ್ದ ನಾನು ಸಾಕಷ್ಟು ಜರ್ಜಿರಿತಳಾಗಿದ್ದೆ. ನಾನು ನನ್ನ ಪರವಾಗಿ ನಿಲ್ಲಬೇಕಾಯಿತು. ಇಡೀ ಜಗತ್ತು ನನ್ನ ವಿರುದ್ಧವಾಗಿದೆ ಎಂದು ಭಾವಿಸಿ ನನಗೆ ಆತ್ಮಹತ್ಯೆಯ ಆಲೋಚನೆಗಳು ಬಂದಿದ್ದವು. ಈಗ ಈ ವ್ಯವಸ್ಥೆಯಲ್ಲಿ ನನಗೆ ಯಾವುದೇ ಸ್ಥಾನವಿಲ್ಲ. ಮೂಲಭೂತ ಅವಕಾಶಗಳು ಮತ್ತು ಹಕ್ಕುಗಳು ಸಹ ನನಗೆ ಇನ್ನು ಮುಂದೆ ಇಲ್ಲ ಎಂದು ಅನಯಾ ಹೇಳಿದ್ದಾರೆ.

ನನ್ನ ತಂದೆ ಪ್ರಸಿದ್ಧ ವ್ಯಕ್ತಿಯಾಗಿರುವುದರಿಂದ ನಾನು ನನ್ನ ಬಗ್ಗೆ ರಹಸ್ಯವನ್ನು ಕಾಪಾಡಿಕೊಳ್ಳಬೇಕಾಯಿತು. ಇಲ್ಲಿ ನನಗೆ ಬೆಂಬಲವಿದೆ ಅಂತೆಯೇ ಕಿರುಕುಳಗಳೂ ಇವೆ ಎಂದು ಅನಯಾ ಹೇಳಿದ್ದಾರೆ.

Anaya Bangar
ನಾನು ಅವನಲ್ಲ, ಅವಳು: ಹಾರ್ಮೋನ್ ಬದಲಾವಣೆಯಿಂದ Team India ಮಾಜಿ ಕ್ರಿಕೆಟಿಗನ ಪುತ್ರನ ಕ್ರಿಕೆಟ್ ಜೀವನ ಅಂತ್ಯ, ವಿಡಿಯೋ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com