

ಚೆನ್ನೈ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತೀವ್ರ ಕಳಪೆ ಪ್ರದರ್ಶನ ತೋರುತ್ತಿದ್ದು, ಏಳನೇ ಬಾರಿಗೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿದೆ.
ಚೆಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಐದು ವಿಕೆಟ್‌ಗಳಿಂದ ಸೋತ ನಂತರ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಂಡದ ಮುಖ್ಯ ಕೋಚ್, ಸ್ಟೀಫನ್ ಫ್ಲೆಮಿಂಗ್ ತಂಡದ ಐಪಿಎಲ್ ಹರಾಜು ಪ್ರಕ್ರಿಯೆ ಸರಿಯಾಗಿಲ್ಲ ಎಂದರು.
ನಾವು ತೋರುತ್ತಿರುವ ಪ್ರದರ್ಶನದೊಂದಿಗೆ ಸರಿಯಾದ ಆಟಗಾರರನ್ನು ಹರಾಜಿನಲ್ಲಿ ಪಡೆದುಕೊಂಡಿದ್ದೇವೆ ಎಂದು ಹೇಳುವುದು ಕಷ್ಟ. ಹಾಗಾಗಿ, ನಮ್ಮ ಆಟದ ಶೈಲಿಯತ್ತ ನೋಡುತ್ತಿದ್ದೇವೆ ಎಂದು ತಿಳಿಸಿದರು.
ನಮ್ಮ ದಾಖಲೆಯ ಬಗ್ಗೆ ಹೆಮ್ಮೆಯಿದೆ. ಧೀರ್ಘ ಕಾಲ ಸ್ಥಿರವಾಗಿದ್ದೇವು. ಆದರೆ ಈ ಬಾರಿ ಇತರ ತಂಡಗಳು ಉತ್ತಮವಾಗಿವೆ. ನಾವು ಹರಾಜಿನಲ್ಲಿ ಉತ್ತಮ ಆಟಗಾರರನ್ನು ಪಡೆಯಲು ಸಾಧ್ಯವಾಗಿಲ್ಲ. ಪರಿಸ್ಥಿತಿಯು ಆಟಗಾರರಿಂದ ಉತ್ತಮ ತಿಳುವಳಿಕೆ ಮತ್ತು ಪ್ರಯತ್ನವನ್ನು ಬಯಸುತ್ತದೆ. ಆದ್ದರಿಂದ ಎಲ್ಲಾ ಆಟಗಾರರು ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ನಾವು ಬಯಸಿದಂತೆ ಆಟಗಾರರನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಹೇಳಬೇಕು. ಇದು 25 ಗಂಟೆ ಗೆ ಖರೀದಿಸಿದಂತಿದೆ ಮತ್ತು ಅದರ ಕೊನೆಯಲ್ಲಿ ಮಾನಸಿಕವಾಗಿ ಮತ್ತು ಕೆಲವೊಮ್ಮೆ ದೈಹಿಕವಾಗಿ ದಣಿದಿರುತ್ತೇವೆ. ಕೆಲವರಿಗೆ ಗಾಯದ ಸಮಸ್ಯೆ, ಕೆಲವರಿಗೆ ಫಾರ್ಮ್ ಕೊರತೆ ಹೊರತುಪಡಿಸಿದರೆ ನಾವು ಅತ್ಯುತ್ತಮ ತಂಡವನ್ನೇ ಹೊಂದಿದ್ದು, ನಿಜವಾಗಿಯೂ ನಾವು ಹೋರಾಟ ನಡೆಸಿದ್ದೇವೆ. ಆದರೆ ಕೆಲವೊಂದು ಜವಾಬ್ದಾರಿ ಮತ್ತು ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ. ಅದು ಖಂಡಿತವಾಗಿಯೂ ನನ್ನಿಂದಲೇ ಆರಂಭವಾಗಬೇಕಿದೆ ಎಂಬುದನ್ನು ಫ್ಲೆಮಿಂಗ್ ಒಪ್ಪಿಕೊಂಡರು.
Advertisement