Sun Risers Hyderabad beat Chennai Super kings
ಸನ್ ರೈಸರ್ಸ್ ಹೈದರಾಬಾದ್ ಗೆ ಜಯ

IPL 2025: CSK ವಿರುದ್ಧ SRH ಭರ್ಜರಿ ಜಯ; MS Dhoni ಪಡೆ ಬಹುತೇಕ ಟೂರ್ನಿಯಿಂದ ಹೊರಕ್ಕೆ!

ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಚೆನ್ನೈ ನೀಡಿದ 155 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಹೈದರಾಬಾದ್ ತಂಡ 18.4 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ 5 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದೆ.
Published on

ಚೆನ್ನೈ: ಐಪಿಎಲ್ ಟೂರ್ನಿಯ ಇಂದಿನ ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ.

ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಚೆನ್ನೈ ನೀಡಿದ 155 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಹೈದರಾಬಾದ್ ತಂಡ 18.4 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ 5 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದೆ.

ಹೈದರಾಬಾದ್ ಪರ ಇಶಾನ್ ಕಿಶನ್ 44 ರನ್ ಗಳಿಸಿದರೆ, ಟ್ರಾವಿಸ್ ಹೆಡ್ 19ರನ್, ಅನಿಕೇತ್ ವರ್ಮಾ 19ರನ್, ನಿತೀಶ್ ಕುಮಾರ್ ರೆಡ್ಡಿ ಅಜೇಯ 19ರನ್ ಮತ್ತು ಕಮಿಂಡು ಮೆಂಡಿಲ್ ಅಜೇಯ 32 ರನ್ ಗಳಿಸಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಗೆಲುವಿನ ದಡ ಸೇರಿಸಿದರು.

Sun Risers Hyderabad beat Chennai Super kings
IPL 2025: MS Dhoni ಐತಿಹಾಸಿಕ ದಾಖಲೆ; ದಿನೇಶ್ ಕಾರ್ತಿಕ್, ರೋಹಿತ್ ಶರ್ಮಾ, ಕೊಹ್ಲಿ ಜೊತೆ Elite group ಸೇರ್ಪಡೆ

ಚೆನ್ನೈ ಮತ್ತೆ ವೈಫಲ್ಯ

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಆರಂಭದ ಹೊರತಾಗಿಯೂ ಬೃಹತ್ ಮೊತ್ತ ಪೇರಿಸುವಲ್ಲಿ ವಿಫಲವಾಯಿತು. ಮೊದಲ ಎಸೆತದಲ್ಲೇ ಶಮಿ ಚೆನ್ನೈಗೆ ಆಘಾತ ನೀಡಿದರು. ಶೇಖ್ ರಶೀದ್ ಶೂನ್ಯಕ್ಕೆ ಔಟಾದರು. ಸ್ಯಾಮ್ ಕರ್ರನ್ 9ರನ್ ಗಳಿಸಿ ಹರ್ಷಲ್ ಪಟೇಲ್ ಗೆ ವಿಕೆಟ್ ಒಪ್ಪಿಸಿದರು. ಚೆನ್ನೈ ಪರ ಆಯುಶ್ ಮಾಟ್ರೆ 30, ರವೀಂದ್ರ ಜಡೇಜಾ 21 ರನ್, ಡಿವಾಲ್ಡ್ ಬ್ರೆವಿಸ್ 42 ರನ್, ದೀಪಕ್ ಹೂಡಾ 22 ರನ್ ಗಳಿಸಿ ಚೆನ್ನೈ ತಂಡದ ಮೊತ್ತ 150 ಗಡಿ ದಾಟುವಂತೆ ಮಾಡಿದರು.

ಮಾಡು ಇಲ್ಲವೇ ಮಡಿ ಪಂದ್ಯ

ಇನ್ನು ಹಾಲಿ ಟೂರ್ನಿಯಲ್ಲಿ ತಲಾ 6 ಪಂದ್ಯಗಳ ಸೋಲು ಮತ್ತು 2 ಪಂದ್ಯಗಳ ಗೆಲುವಿನೊಂದಿಗೆ ತಲಾ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ 2 ಸ್ಥಾನಗಳಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇಂದು ಟೂರ್ನಿಯಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಹೊರಾಡುತ್ತಿವೆ. ಹೀಗಾಗಿ ಇಂದಿನ ಪಂದ್ಯ ಉಭಯ ತಂಡಗಳಿಗೂ ಮಾಡುಲ ಇಲ್ಲವೇ ಮಡಿ ಪಂದ್ಯವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com