IPL 2025: MS Dhoni ಐತಿಹಾಸಿಕ ದಾಖಲೆ; ದಿನೇಶ್ ಕಾರ್ತಿಕ್, ರೋಹಿತ್ ಶರ್ಮಾ, ಕೊಹ್ಲಿ ಜೊತೆ Elite group ಸೇರ್ಪಡೆ

ಇಂದು ತವರು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ ಧೋನಿ ಅವರ ಐತಿಹಾಸಿಕ ದಾಖಲೆಗೆ ವೇದಿಕೆಯಾಗಿದ್ದು, ಇದು ಮಾಹಿಯ 400ನೇ ಐಪಿಎಲ್ ಪಂದ್ಯವಾಗಿದೆ.
MS Dhoni Scripts IPL History
ಎಂಎಸ್ ಧೋನಿ
Updated on

ಚೆನ್ನೈ: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಹಾಗೂ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಐತಿಹಾಸಿಕ ದಾಖಲೆ ಬರೆದಿದ್ದು, ದಿನೇಶ್ ಕಾರ್ತಿಕ್, ರೋಹಿತ್ ಶರ್ಮಾ, ಕೊಹ್ಲಿ ಜೊತೆ Elite group ಸೇರ್ಪಡೆಯಾಗಿದ್ದಾರೆ.

ಹೌದು.. ಇಂದು ತವರು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ ಧೋನಿ ಅವರ ಐತಿಹಾಸಿಕ ದಾಖಲೆಗೆ ವೇದಿಕೆಯಾಗಿದ್ದು, ಇದು ಮಾಹಿಯ 400ನೇ ಐಪಿಎಲ್ ಪಂದ್ಯವಾಗಿದೆ.

ಗಾಯದ ಸಮಸ್ಯೆಯಿಂದಾಗಿ ಚೆನ್ನೈ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಟೂರ್ನಿಯಿಂದಲೇ ಹೊರಬಿದ್ದ ಹಿನ್ನಲೆಯಲ್ಲಿ ಮತ್ತೆ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾರಥ್ಯವಹಿಸಿದ್ದಾರೆ.

ಇಂತಹ ಸಂದರ್ಭದಲ್ಲೇ ಧೋನಿ 400ನೇ ಪಂದ್ಯವನ್ನಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ. ಅದೂ ಕೂಡ ಈ ಪಂದ್ಯ ತವರು ಮೈದಾನದಲ್ಲಿ ನಡೆಯುತ್ತಿರುವುದು ಅಭಿಮಾನಿಗಳ ಖುಷಿ ಇಮ್ಮಡಿಗೊಳಿಸಿದೆ.

MS Dhoni Scripts IPL History
IPL 2025: ಮತ್ತೊಂದು ಸೋಲಿನ ಆಘಾತ; ಬೆಂಗಳೂರಿನ ಮದ್ಯದಂಗಡಿಯತ್ತ ಹೋದ ರಾಜಸ್ಥಾನ್ ರಾಯಲ್ಸ್ CEO!

Elite group ಸೇರ್ಪಡೆ

ಈ ಪಂದ್ಯದ ಮೂಲಕ ಧೋನಿ ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಮತ್ತು ವಿರಾಟ್ ಕೊಹ್ಲಿ ಇರುವ Elite group ಸೇರ್ಪಡೆಯಾಗಿದ್ದಾರೆ. ಈ ಮೂರೂ ಆಟಗಾರರು ಐಪಿಎಲ್ ನಲ್ಲಿ ಈಗಾಗಲೇ 400 ಪಂದ್ಯಗಳನ್ನಾಡಿರುವ ದಾಖಲೆ ಮಾಡಿದ್ದಾರೆ.

ಇದೀಗ ಈ ದಾಖಲೆ ಪಟ್ಟಿಗೆ ಧೋನಿ ಸೇರ್ಪಡೆಯಾಗಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರೋಹಿತ್ ಶರ್ಮಾ ಒಟ್ಟು 456 ಪಂದ್ಯಗಳನ್ನಾಡಿದ್ದು, ಆ ಮೂಲಕ ಗರಿಷ್ಠ ಐಪಿಎಲ್ ಪಂದ್ಯಗಳನ್ನಾಡಿರುವ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

2ನೇ ಸ್ಥಾನದಲ್ಲಿರುವ ದಿನೇಶ್ ಕಾರ್ತಿಕ್ 412 ಪಂದ್ಯಗಳನ್ನಾಡಿದ್ದು, ವಿರಾಟ್ ಕೊಹ್ಲಿ 408 ಪಂದ್ಯಗಳನ್ನಾಡಿದ್ದಾರೆ. ಧೋನಿ ಇಂದಿನ ಪಂದ್ಯದೊಂದಿಗೆ 400 ಪಂದ್ಯಗಳನ್ನಾಡಿದ್ದಾರೆ.

ಚೆನ್ನೈ-ಹೈದರಾಬಾದ್ ಗೆ ಮಾಡು ಇಲ್ಲವೇ ಮಡಿ ಪಂದ್ಯ

ಇನ್ನು ತಲಾ 6 ಪಂದ್ಯಗಳ ಸೋಲು ಮತ್ತು 2 ಪಂದ್ಯಗಳ ಗೆಲುವಿನೊಂದಿಗೆ ತಲಾ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ 2 ಸ್ಥಾನಗಳಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇಂದು ಟೂರ್ನಿಯಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಹೊರಾಡುತ್ತಿವೆ.

ಇಂದು ಯಾವುದೇ ತಂಡ ಸೋತರೂ ಅದು ಟೂರ್ನಿಯಿಂದ ಬಹುತೇಕ ಹೊರಬಿದ್ದಂತಾಗುತ್ತದೆ. ಹೀಗಾಗಿ ಇಂದಿನ ಪಂದ್ಯ ಉಭಯ ತಂಡಗಳಿಗೂ ಮಾಡುಲ ಇಲ್ಲವೇ ಮಡಿ ಪಂದ್ಯವಾಗಿದೆ.

5 ಬಾರಿ ಐಪಿಎಲ್ ಟ್ರೋಫಿ ಎತ್ತಿಹಿಡಿದಿರುವ ಚೆನ್ನೈಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಒಂದು ಬಾರಿ ಚಾಂಪಿಯನ್ ಆಗಿರುವ ಸನ್ ರೈಸರ್ಸ್ ಹೈದರಾಬಾದ್ ಗೂ ಇದು ಪ್ರಮುಖವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com