IPL 2025: DC ಆಘಾತ; ನಾಯಕ Axar Patelಗೆ ಗಾಯ, KKR ವಿರುದ್ಧದ ಪಂದ್ಯ ನಡುವೆಯೇ ಮೈದಾನ ತೊರೆದ 'ಬಾಪು'

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
Axar Patel Grimaces In Pain
ಅಕ್ಸರ್ ಪಟೇಲ್ ಗೆ ಗಾಯ
Updated on

ನವದೆಹಲಿ: ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಘಾತ ಎದುರಾಗಿದ್ದು, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಸರ್ ಪಟೇಲ್ (Axar Patel) ಗಾಯಕ್ಕೆ ತುತ್ತಾಗಿದ್ದಾರೆ.

ಇದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಅಂಗ್‌ಕ್ರಿಶ್ ರಘುವಂಶಿ (44 ರನ್), ರಿಂಕು ಸಿಂಗ್ (36 ರನ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 204 ರನ್ ಪೇರಿಸಿ ಡಿಸಿಗೆ ಗೆಲ್ಲಲು 205ರನ್ ಗುರಿ ನೀಡಿತು.

Axar Patel Grimaces In Pain
ಕ್ರಿಕೆಟಿಗ Vaibhav Suryavanshi ಕುರಿತು ಅಶ್ಲೀಲ ಹೇಳಿಕೆ; ಮಹಿಳಾ Influencer ಮೇಲೆ POCSO ತೂಗುಗತ್ತಿ!

ಫೀಲ್ಡಿಂಗ್ ವೇಳೆ ಅಕ್ಸರ್ ಪಟೇಲ್ ಗೆ ಗಾಯ

ಇನ್ನು ಕೆಕೆಆರ್ ಬ್ಯಾಟಿಂಗ್ ವೇಳೆ 18ನೇ ಓವರ್ ವೇಳೆ ಫೀಲ್ಡಿಂಗ್ ಮಾಡುವಾಗ ಚೆಂಡು ತಡೆಯುವ ಪ್ರಯತ್ನದಲ್ಲಿ ಅಕ್ಸರ್ ಪಟೇಲ್ ಗಾಯಗೊಂಡರು. ಕೂಡಲೇ ಫಿಸಿಯೋ ತಜ್ಞರು ಆಗಮಿಸಿ ಅಕ್ಸರ್ ಪಟೇಲ್ ರನ್ನು ಪರೀಕ್ಷಿಸಿದರು. ಬಳಿಕ ಅಕ್ಸರ್ ಪಟೇಲ್ ಮೈದಾನ ತೊರೆದು ವಿಶ್ರಾಂತಿ ಪಡೆದರು.

ಮೈದಾನದಿಂದ ಹೊರ ಹೋಗುವ ವೇಳೆ ಅಕ್ಸರ್ ಪಟೇಲ್ ನೋವಿನಲ್ಲಿದ್ದರು. ಬಳಿಕ ವಿಶ್ರಾಂತಿ ಪಡೆದು ಬಳಿಕ ಬ್ಯಾಟಿಂಗ್ ಆಗಮಿಸಿ 23 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 43 ರನ್ ಗಳಿಸಿ ಸುನಿಲ್ ನರೈನ್ ಬೌಲಿಂಗ್ ನಲ್ಲಿ ಔಟಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com