IPL 2025: BCCI ಗೆ ಸಂಕಷ್ಟ ತಂದ 'Champak', ಎಐ ರೋಬೋ ನಾಯಿ ಕುರಿತು Delhi High Court ನೋಟಿಸ್!

ಐಪಿಎಲ್ 2025 (IPL 2025) ರ ಮಧ್ಯೆ ಬಿಸಿಸಿಐಗೆ ದೆಹಲಿ ಹೈಕೋರ್ಟ್‌ನಿಂದ ನೋಟಿಸ್ ಜಾರಿ ಮಾಡಿದ್ದು, ಈ ಬೆಳವಣಿಗೆ ಕ್ರಿಕೆಟ್ ವಲಯದಲ್ಲಿ ಸುದ್ದಿಗೆ ಗ್ರಾಸವಾಗಿದೆ.
Delhi High Court issues notice to BCCI
ಐಪಿಎಲ್ ನಲ್ಲಿ ರೋಬೋ ಶ್ವಾನ
Updated on

ನವದೆಹಲಿ: ಐಪಿಎಲ್ ನಲ್ಲಿ ಫುಲ್ Busyಯಾಗಿರುವ ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ BCCI ಗೆ ಕಾನೂನು ಸಂಕಷ್ಟ ಎದುರಾಗಿದ್ದು, ಹಾಲಿ ಟೂರ್ನಿಯಲ್ಲಿ ಬಿಸಿಸಿಐ ಪರಿಚಯಿಸಿದ್ದ AI ರೋಬೋ ಡಾಗ್ ಸಂಕಷ್ಟ ತಂದಿಟ್ಟಿದೆ.

ಐಪಿಎಲ್ 2025 (IPL 2025) ರ ಮಧ್ಯೆ ಬಿಸಿಸಿಐಗೆ ದೆಹಲಿ ಹೈಕೋರ್ಟ್‌ನಿಂದ ನೋಟಿಸ್ ಜಾರಿ ಮಾಡಿದ್ದು, ಈ ಬೆಳವಣಿಗೆ ಕ್ರಿಕೆಟ್ ವಲಯದಲ್ಲಿ ಸುದ್ದಿಗೆ ಗ್ರಾಸವಾಗಿದೆ. ಇಷ್ಟಕ್ಕೂ ಬಿಸಿಸಿಐಗೆ ಕಾನೂನು ಸಂಕಷ್ಟ ತಂದಿದ್ದು ಬೇರೇನೂ ಅಲ್ಲ.. ಬಿಸಿಸಿಐ ಇತ್ತೀಚೆಗೆ ಪರಿಚಯಿಸಿದ್ದ AI ರೋಬೋ ಡಾಗ್ 'ಚಂಪಕ್'...

ಈ ಚಂಪಕ್ ಎಂದು ಕರೆಯಲಾಗುತ್ತಿರುವ ರೋಬೋ ಶ್ವಾನವನ್ನು ಐಪಿಎಲ್ ಪಂದ್ಯಗಳ ಟಾಸ್ ಸಮಯದಲ್ಲಿ ಬಳಸಲಾಗುತ್ತದೆ. ಅಲ್ಲದೆ ಈ ಶ್ವಾನ ಆಟಗಾರರ ಅಭ್ಯಾಸದ ಸಮಯದಲ್ಲಿ ಆಟಗಾರರನ್ನು ಸಹ ಕವರ್ ಮಾಡುತ್ತದೆ. ಇದು ಬಹು ಕ್ಯಾಮೆರಾಗಳನ್ನು ಹೊಂದಿದ್ದು ಆಟವನ್ನು ಎಲ್ಲಾ ಆಯಾಮಗಳಲ್ಲು ಸೇರಿ ಹಿಡಿಯುವ ಸಾಮರ್ಥ್ಯ ಹೊಂದಿದೆ. ಇದು ಮಾತ್ರವಲ್ಲದೆ ಆಟಗಾರರ ಕಾರ್ಯಕ್ಷಮತೆಯ ಡೇಟಾವನ್ನು ಸಹ ನಿರ್ವಹಿಸುತ್ತದೆ.

ರೋಬೋ ಶ್ವಾನ ಚಂಪಕ್​ನ ಇನ್ನೊಂದು ದೊಡ್ಡ ವೈಶಿಷ್ಟ್ಯವೆಂದರೆ ಅದನ್ನು ಚಾರ್ಜ್ ಮಾಡುವ ಅಗತ್ಯವಿಲ್ಲ, ಅದು ಸ್ವಯಂಚಾಲಿತವಾಗಿ ಚಾರ್ಜ್ ಆಗುತ್ತದೆ.ಕೆಳಗೆ ಬಿದ್ದರೆ, ಅದು ತಾನಾಗಿಯೇ ಎದ್ದು ನಿಲ್ಲುವ ಸಾಮರ್ಥ್ಯ ಹೊಂದಿದೆ. ಈ ಶ್ವಾನವನ್ನು ಪಂದ್ಯದ ಮೊದಲು, ಆಟಗಾರರ ಅಭ್ಯಾಸದ ಸಮಯದಲ್ಲಿ ಮತ್ತು ಅರ್ಧಾವಧಿಯಲ್ಲಿ ಬಳಸಲಾಗುತ್ತದೆ. ಕೆಲವು ದಿನಗಳ ಹಿಂದೆ ಈ ಶ್ವಾನಕ್ಕೆ ಚಂಪಕ್ ಎಂದು ಹೆಸರಿಡಲಾಗಿತ್ತು. ಇದೀಗ ಈ ಹೆಸರೇ ಬಿಸಿಸಿಐಗೆ ಒಂದು ಕಂಟಕವಾಗಿ ಪರಿಣಮಿಸಿದೆ.

Delhi High Court issues notice to BCCI
IPL 2025: Rinku Singh ಗೆ ಮೈದಾನದಲ್ಲೇ Kuldeep Yadav ಕಪಾಳಮೋಕ್ಷ!

ದೆಹಲಿ ಹೈಕೋರ್ಟ್‌ ನೋಟಿಸ್

ದೆಹಲಿ ಹೈಕೋರ್ಟ್ ಬಿಸಿಸಿಐಗೆ ನೋಟಿಸ್ ಕಳುಹಿಸಿದ್ದು. ಖ್ಯಾತ ಮಕ್ಕಳ ನಿಯತಕಾಲಿಕೆಯೊಂದು ಈ ಚಂಪಕ್ ವಿರುದ್ಧ ದಾವೆ ಹೂಡಿದೆಯಂತೆ. ಈ ಪತ್ರಿಕೆಯ ಹೆಸರು ಕೂಡ ಚಂಪಕ್ ಆಗಿದ್ದು, ತನ್ನ ಪತ್ರಿಕೆಯ ಅಧಿಕೃತ ಹೆಸರನ್ನು ಅನಧಿಕೃತವಾಗಿ ಈ ರೋಬೋ ಡಾಗ್ ಇಡಲಾಗಿದೆ ಎಂದು ಪತ್ರಿಕೆ ಆರೋಪಿಸಿದೆ. ಅದಕ್ಕಾಗಿಯೇ ಈ ಕಂಪನಿಯು ಬಿಸಿಸಿಐ ವಿರುದ್ಧ ಕೋರ್ಟ್​ ಮೆಟ್ಟಿಲೇರಿದೆ.

ಬಿಸಿಸಿಐ ತನ್ನ ರೋಬೋ ಶ್ವಾನಕ್ಕೆ ಚಂಪಕ್ ಎಂದು ಹೆಸರಿಡುವ ಮೂಲಕ ನೋಂದಾಯಿತ ಟ್ರೇಡ್‌ಮಾರ್ಕ್ ನಿಯಮವನ್ನು ಉಲ್ಲಂಘಿಸಿದೆ ಎಂದು ನಿಯತಕಾಲಿಕೆಯ ಆಡಳಿತ ಮಂಡಳಿ ಆರೋಪ ಹೊರಿಸಿದೆ.

ದೂರಿನನ್ವಯ ದೆಹಲಿ ಕೋರ್ಟ್​ ಬಿಸಿಸಿಐಗೆ ನೋಟಿಸ್ ಕಳುಹಿಸಿದ್ದು, ರೋಬೋ ಶ್ವಾನಕ್ಕೆ ಚಂಪಕ್ ಎಂದು ಹೆಸರಿಟ್ಟಿರುವ ಬಗ್ಗೆ ಉತ್ತರ ಕೇಳಿದೆ. ಹೈಕೋರ್ಟ್​ ಆದೇಶಿಸಿರುವಂತೆ ಮುಂದಿನ ನಾಲ್ಕು ವಾರಗಳಲ್ಲಿ ಬಿಸಿಸಿಐ ತನ್ನ ಲಿಖಿತ ಉತ್ತರವನ್ನು ನೀಡಬೇಕಾಗಿದ್ದು, ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 9 ರಂದು ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com