World Championship Of Legends: ರೋಚಕ ಹಣಾಹಣಿ; ಆಸ್ಟ್ರೇಲಿಯಾ ಸೋಲಿಸಿ ದಕ್ಷಿಣ ಆಫ್ರಿಕಾವನ್ನು ಫೈನಲ್‌ಗೆ ಕೊಂಡೊಯ್ದ ಎಬಿಡಿ!

ಇದೀಗ ದಕ್ಷಿಣ ಆಫ್ರಿಕಾ ತಂಡವು ಫೈನಲ್‌ನಲ್ಲಿ ಪಾಕಿಸ್ತಾನ ಚಾಂಪಿಯನ್‌ಗಳನ್ನು ಎದುರಿಸಲಿದೆ.
AB De Villiers
ಎಬಿ ಡಿವಿಲಿಯರ್ಸ್
Updated on

ಗುರುವಾರ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವನ್ನು ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ನಲ್ಲಿ ಮತ್ತೊಂದು ರೋಮಾಂಚಕ ಗೆಲುವು ಸಾಧಿಸಿತು. 187 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾಕ್ಕೆ ಕೊನೆಯ ಎಸೆತದಲ್ಲಿ ಮೂರು ರನ್‌ಗಳು ಬೇಕಾಗಿದ್ದಾಗ, ಪ್ರೋಟಿಯಸ್ ದಿಗ್ಗಜ ಎಬಿ ಡಿವಿಲಿಯರ್ಸ್ ಮ್ಯಾಜಿಕ್ ಥ್ರೋ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟರು. ವೇಯ್ನ್ ಪಾರ್ನೆಲ್ ಯಾರ್ಕರ್ ಎಸೆದರು. ಆದರೆ, ಡಾನ್ ಕ್ರಿಶ್ಚಿಯನ್ ಅದನ್ನು ಫುಲ್ ಟಾಸ್ ಆಗಿ ಪರಿವರ್ತಿಸಿ ಲಾಂಗ್-ಆನ್‌ನಲ್ಲಿ ಡಿವಿಲಿಯರ್ಸ್ ಕಡೆಗೆ ನೆಲಕ್ಕೆ ಹೊಡೆದರು.

ಆಗ ಕ್ರಿಶ್ಚಿಯನ್ ಮತ್ತು ನಾಥನ್ ಕೌಲ್ಟರ್-ನೈಲ್ ಎರಡು ರನ್ ಓಡಲು ಯತ್ನಿಸಿದರು. ಇದು ಸ್ಕೋರ್‌ಗಳನ್ನು ಸಮಬಲಗೊಳಿಸಿ ಪಂದ್ಯವನ್ನು ಬೌಲ್ ಔಟ್‌ಗೆ ಕೊಂಡೊಯ್ಯುತ್ತಿತ್ತು. ಆದರೆ, ಡಿವಿಲಿಯರ್ಸ್ ಡೀಪ್‌ನಿಂದ ಎಸೆದ ಬಾಲ್ ಹಿಡಿದುಕೊಂಡ ಪಾರ್ನೆಲ್, ರನ್-ಔಟ್‌ ಮಾಡಿದರು.

ಇದೀಗ ದಕ್ಷಿಣ ಆಫ್ರಿಕಾ ತಂಡವು ಫೈನಲ್‌ನಲ್ಲಿ ಪಾಕಿಸ್ತಾನ ಚಾಂಪಿಯನ್‌ಗಳನ್ನು ಎದುರಿಸಲಿದೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆಯಿಂದಾಗಿ ಇಂಡಿಯಾ ಚಾಂಪಿಯನ್ಸ್ ಸೆಮಿಫೈನಲ್ ಆಡಲು ನಿರಾಕರಿಸಿದ ನಂತರ ಪಾಕಿಸ್ತಾನ ಫೈನಲ್ ತಲುಪಿತು.

ಶಿಖರ್ ಧವನ್, ಯುವರಾಜ್ ಸಿಂಗ್, ಸುರೇಶ್ ರೈನಾ, ಹರ್ಭಜನ್ ಸಿಂಗ್, ರಾಬಿನ್ ಉತ್ತಪ್ಪ, ಯೂಸುಫ್ ಪಠಾಣ್ ಮುಂತಾದವರನ್ನು ಒಳಗೊಂಡ ಭಾರತ ಚಾಂಪಿಯನ್ಸ್ ತಂಡವು ಈ ಹಿಂದೆಯೂ ಗುಂಪು ಹಂತದಲ್ಲಿ ಪಾಕ್ ವಿರುದ್ಧ ಆಡಲು ನಿರಾಕರಿಸಿತ್ತು.

ಈ ವರ್ಷದ ಏಪ್ರಿಲ್ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಎರಡೂ ದೇಶಗಳ ನಡುವಿನ ಕ್ರೀಡಾ ಸಂಬಂಧಗಳು ಮತ್ತೊಮ್ಮೆ ಹದಗೆಟ್ಟಿವೆ.

ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲವೂ ಸಾಮಾನ್ಯವಾಗಿ ಕಾಣುತ್ತಿದ್ದು, ಎರಡೂ ತಂಡಗಳು ಸೆಪ್ಟೆಂಬರ್ 14 ರಂದು ಯುಎಇಯಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಲಿವೆ. ಭಾರತೀಯ ಮಹಿಳಾ ತಂಡವು ಅಕ್ಟೋಬರ್ 6 ರಂದು ಕೊಲಂಬೊದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯವನ್ನು ಆಡಲಿದೆ.

AB De Villiers
World Championship of Legends: ಮಿಸ್ಟರ್ 360 ಎಬಿಡಿ ಅಬ್ಬರ; ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ ಭರ್ಜರಿ ಗೆಲುವು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com