England vs India: ನಾಯಕನಾಗಿ ಚೊಚ್ಚಲ ಸರಣಿಯಲ್ಲೇ 46 ವರ್ಷಗಳ ಸುನೀಲ್ ಗವಾಸ್ಕರ್ ದಾಖಲೆ ಮುರಿದ ಶುಭಮನ್ ಗಿಲ್!

ಶುಭಮನ್ ಗಿಲ್ ಪಾಲಿಗೆ ಇಂಗ್ಲೆಂಡ್ ಪ್ರವಾಸ ಯಶಸ್ವಿಯಾಗಿದೆ. ಗುರುವಾರ ಭಾರತದ ನಾಯಕ ಮತ್ತೊಂದು ಅದ್ಭುತ ಪ್ರದರ್ಶನದೊಂದಿಗೆ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.
Shubman Gill
ಶುಭಮನ್ ಗಿಲ್
Updated on

ಭಾರತ vs ಇಂಗ್ಲೆಂಡ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದರು. ಸರಣಿಯೊಂದರಲ್ಲಿ ಭಾರತೀಯ ನಾಯಕನೊಬ್ಬ ಅತಿ ಹೆಚ್ಚು ರನ್ ಗಳಿಸಿದ್ದಕ್ಕಾಗಿ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರನ್ನು ಭಾರತದ ನಾಯಕ ಶುಭ್‌ಮನ್ ಗಿಲ್ ಹಿಂದಿಕ್ಕಿದ್ದಾರೆ. 1978/79 ರಲ್ಲಿ ಗವಾಸ್ಕರ್ ಈ ದಾಖಲೆಯನ್ನು ಬರೆದಿದ್ದರು. ಗಿಲ್ ನಾಯಕನಾಗಿ ತಮ್ಮ ಚೊಚ್ಚಲ ಸರಣಿಯಲ್ಲಿಯೇ ದಾಖಲೆಯನ್ನು ಮುರಿದಿದ್ದಾರೆ.

ಶುಭಮನ್ ಗಿಲ್ ಪಾಲಿಗೆ ಇಂಗ್ಲೆಂಡ್ ಪ್ರವಾಸ ಯಶಸ್ವಿಯಾಗಿದೆ. ಗುರುವಾರ ಭಾರತದ ನಾಯಕ ಮತ್ತೊಂದು ಅದ್ಭುತ ಪ್ರದರ್ಶನದೊಂದಿಗೆ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಊಟದ ವಿರಾಮಕ್ಕೂ ಮುನ್ನ ಗಿಲ್ ತಮ್ಮ ರನ್ ಅನ್ನು 733 ಕ್ಕೆ ಏರಿಸಿದರು. ಈ ಹಿಂದೆ ಸುನೀಲ್ ಗವಾಸ್ಕರ್ ನಾಯಕನಾಗಿ ವೆಸ್ಟ್ ಇಂಡೀಸ್ ವಿರುದ್ಧ 732 ರನ್ ಗಳಿಸಿದ್ದರು. ಗಿಲ್ ಈ ದಾಖಲೆ ಮುರಿದಿದ್ದಾರೆ. ಆದರೆ, ಭಾರತದ ಮಾಜಿ ನಾಯಕ ವೆಸ್ಟ್ ಇಂಡೀಸ್ ವಿರುದ್ಧ 774 ರನ್ ಗಳಿಸುವುದರೊಂದಿಗೆ ಸರಣಿಯಲ್ಲಿ ಭಾರತೀಯನೊಬ್ಬ ಗಳಿಸಿದ ಅತಿ ಹೆಚ್ಚು ರನ್ ದಾಖಲೆಯನ್ನು ಇನ್ನೂ ಹೊಂದಿದ್ದಾರೆ.

ಓವಲ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದಲ್ಲಿ ಗಿಲ್ ಆ ದಾಖಲೆಯನ್ನು ಮೀರುವ ಅವಕಾಶವನ್ನು ಹೊಂದಿದ್ದಾರೆ. ಭಾರತದ ನಾಯಕ 8 ಇನಿಂಗ್ಸ್‌ಗಳಲ್ಲಿ 4 ಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ ವೃತ್ತಿಜೀವನದ ಅತ್ಯುತ್ತಮ 269 ರನ್‌ಗಳು ಸೇರಿವೆ. ಸರಣಿಯನ್ನು ಸಮಬಲಗೊಳಿಸುವ ಗುರಿಯನ್ನು ಭಾರತ ಹೊಂದಿದ್ದು, ಭಾರತದ ಬ್ಯಾಟಿಂಗ್ ಅನ್ನು ಮುನ್ನಡೆಸುವ ಜವಾಬ್ದಾರಿ ಗಿಲ್ ಮೇಲಿದೆ.

Shubman Gill
ಲಾರ್ಡ್ಸ್‌ನಲ್ಲಿ ಝಾಕ್ ಕ್ರಾಲಿ-ಬೆನ್ ಡಕೆಟ್ ಮಾತಿನ ಚಕಮಕಿ; ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಹೇಳಿದ್ದೇನು?

ಭಾರತೀಯ ನಾಯಕನಿಂದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳು

733* – ಶುಭಮನ್ ಗಿಲ್ vs ಇಂಗ್ಲೆಂಡ್, 2025

732 – ಸುನೀಲ್ ಗವಾಸ್ಕರ್ vs ವೆಸ್ಟ್ ಇಂಡೀಸ್, 1978/79

655 – ವಿರಾಟ್ ಕೊಹ್ಲಿ vs ಇಂಗ್ಲೆಂಡ್, 2016/17

610 – ವಿರಾಟ್ ಕೊಹ್ಲಿ vs ಶ್ರೀಲಂಕಾ, 2017/18

593 – ವಿರಾಟ್ ಕೊಹ್ಲಿ vs ಇಂಗ್ಲೆಂಡ್, 2018

ಲಂಡನ್‌ನಲ್ಲಿ ಗಿಲ್ ಇನ್ನೂ ಅನೇಕ ದಾಖಲೆಗಳ ಹೊಸ್ತಿಲಲ್ಲಿದ್ದಾರೆ. ಭಾರತ vs ಇಂಗ್ಲೆಂಡ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಲು 25 ವರ್ಷದ ಗಿಲ್ ಇನ್ನೂ 20 ರನ್ ಗಳಿಸಬೇಕಾಗಿದೆ. ಭಾರತ vs ಇಂಗ್ಲೆಂಡ್ 5 ನೇ ಟೆಸ್ಟ್‌ನಲ್ಲಿ ಅವರು 53 ರನ್ ದಾಟಿದರೆ, ಗಿಲ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಗವಾಸ್ಕರ್ ಅವರ ದಾಖಲೆಯನ್ನು ಮುರಿದಂತಾಗುತ್ತದೆ. ಒಂದು ವೇಳೆ ಗಿಲ್ 80 ರನ್ ಗಳಿಸಿದರೆ, ಟೆಸ್ಟ್ ಸರಣಿಯಲ್ಲಿ 800 ರನ್ ಪೂರೈಸಿದ ಮೊದಲ ಏಷ್ಯನ್ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.

ಆದರೆ, ಮೊದಲ ಇನಿಂಗ್ಸ್‌ನಲ್ಲಿ ಗಿಲ್ ಬೇಗನೆ ಔಟಾದರು. ಪಂದ್ಯದ ಒಂದು ಅನಿರೀಕ್ಷಿತ ಕ್ಷಣದಲ್ಲಿ ಭಾರತದ ನಾಯಕ 21 ರನ್ ಗಳಿಸಿ ರನೌಟ್ ಆದರು. ಹವಾಮಾನ ಮತ್ತು ಇಂಗ್ಲೆಂಡ್ ಅನುಮತಿಸಿದರೆ, 25 ವರ್ಷದ ಗಿಲ್‌ಗೆ ಟೆಸ್ಟ್‌ನಲ್ಲಿ ಆ ದಾಖಲೆಗಳನ್ನು ಮಾಡಲು ನಂತರ ಮತ್ತೊಂದು ಅವಕಾಶ ಸಿಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com