India vs England 5th Test Updates: ಕೊನೆ ಕ್ಷಣದಲ್ಲಿ ಭಾರತದಿಂದ ಉತ್ತಮ ಪ್ರದರ್ಶನ; ಆದರೆ ಮಳೆ, Bad light ಅಡ್ಡಿ!

ಭಾರತದ 396 ರನ್ ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 76 ಓವರ್ ಗಳಲ್ಲಿ 339 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದೆ.
India-England 5th Test Match Halted Due To bad light
ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ವೇಳೆ ಮಳೆ online desk
Updated on

ಓವಲ್: ಇಂಗ್ಲೆಂಡ್ ನ ಓವಲ್ ನಲ್ಲಿ ನಡೆಯುತ್ತಿರುವ ಭಾರತ- ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದ ನಿರ್ಣಾಯಕ ದಿನವಾದ 4 ನೇ ದಿನದಲ್ಲಿ ಇಂಗ್ಲೆಂಡ್ ಗೆಲುವಿನ ಸನಿಹದಲ್ಲಿದೆ. ಇಂಗ್ಲೆಂಡ್ ಗೆ ಗೆಲುವು ಸಾಧಿಸಲು 35 ರನ್ ಗಳ ಅಗತ್ಯವಿದ್ದರೆ, ಭಾರತದ ಗೆಲುವು 4 ವಿಕೆಟ್ ಗಳನ್ನು ಕೇಳುತ್ತಿದೆ.

ಭಾರತದ 396 ರನ್ ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 76 ಓವರ್ ಗಳಲ್ಲಿ 339 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದೆ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 224 ರನ್ ಗಳಿಸಿದ್ದರೆ, ಇಂಗ್ಲೆಂಡ್ 247 ರನ್ ಗಳಿಳಿಸಿತ್ತು. ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 396 ಗಳಿಸಿದ್ದರೆ, ಇಂಗ್ಲೆಂಡ್ 339 ಗಳಿಸಿದೆ.

4 ನೇ ದಿನದಾಟದಲ್ಲಿ ಇಂಗ್ಲೆಂಡ್ ನ ಬ್ಯಾಟ್ಸ್ ಮನ್ ಗಳು ಭಾರತೀಯ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ ಪರಿಣಾಮ ಇಂಗ್ಲೆಂಡ್ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ನಾಟಕೀಯ ಬೆಳವಣಿಗೆಯಲ್ಲಿ ಭಾರತೀಯ ಬೌಲರ್ ಗಳು ಕೊನೆ ಕ್ಷಣದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದಂತೆ ತೋರಿದರೂ, ಇಂಗ್ಲೆಂಡ್ ಹಾಗೂ ಭಾರತದ ಮಹತ್ವಾಕಾಂಕ್ಷೆಗೆ ಮಳೆ ಅಡ್ಡಿಯಾಗಿದೆ. ಬೆಳಕಿನ ಅಭಾವದಿಂದ ದಿನದ ಆಟವನ್ನು ರದ್ದುಗೊಳಿಸಲಾಗಿದೆ.

India-England 5th Test Match Halted Due To bad light
ಭಾರತದ ಗೆಲುವಿನ ನಿರೀಕ್ಷೆಗೆ ಪೆಟ್ಟು: ಬೌಂಡರಿ ಲೈನ್ ಬಳಿ Mohammed Siraj ಎಡವಟ್ಟು; Video!

ಕ್ಯಾಚ್ ಕೈಚೆಲ್ಲಿದ್ದು ಭಾರತಕ್ಕೆ ದುಬಾರಿಯಾಯ್ತು!

ಇಂಗ್ಲೆಂಡ್ ಪರ ಬ್ರೂಕ್ ಅತಿ ಹೆಚ್ಚು ಅಂದರೆ 118 ರನ್ ಗಳಿಸಿದ್ದು ಭಾರತದ ಕನಸಿಗೆ ತಣ್ಣೀರು ಎರಚಿತು. ಇಂಗ್ಲೆಂಡ್ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಬ್ರೂಕ್ ಒಂದು ಹಂತದಲ್ಲಿ ಪ್ರಸಿದ್ಧ್ ಕೃಷ್ಣ ಬೌಲಿಂಗ್ ನಲ್ಲಿ ಕ್ಯಾಚ್ ಇತ್ತಿದ್ದರು. ಆದರೆ ಸಿರಾಜ್ ಅದನ್ನು ಕೈ ಚೆಲ್ಲಿದ್ದು ತಂಡಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com