
ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ 5ನೇ ಮತ್ತು ಕೊನೆಯ ಪಂದ್ಯ ರೋಚಕ ತಿರುವು ಪಡೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ, ನಾಲ್ಕನೇ ದಿನವಾದ ಭಾನುವಾರ ಭಾರತದ ಆಟಗಾರ ಮೊಹಮ್ಮದ್ ಸಿರಾಜ್ (Mohammed Siraj) ಇಂಗ್ಲೆಂಡ್‌ನ ಅಪಾಯಕಾರಿ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್‌ಗೆ ಜೀವದಾನ ನೀಡುವ ಮೂಲಕ ಭಾರತ ತಂಡಕ್ಕೆ ದುಬಾರಿಯಾದರು. 19 ರನ್ ಗಳಿಸಿದ್ದಾಗ ಹ್ಯಾರಿ ಬ್ರೂಕ್ ನೀಡಿದ ಕ್ಯಾಚ್ ಅನ್ನು ಮೊಹಮ್ಮದ್ ಸಿರಾಜ್ ಕೈಚೆಲ್ಲಿದ್ದು ಇದು ಭಾರತ ತಂಡ ಗೆಲ್ಲುವ ಭರವಸೆಯನ್ನು ಕಸಿದುಕೊಂಡಿತು.
ವಾಸ್ತವವಾಗಿ, ಭಾರತೀಯ ಬೌಲರ್ ಪ್ರಸಿದ್ಧ್ ಕೃಷ್ಣ 35ನೇ ಓವರ್ ಬೌಲಿಂಗ್ ಮಾಡಿದರು. ಈ ಓವರ್‌ನ ಮೊದಲ ಎಸೆತದಲ್ಲಿ, ಮೊಹಮ್ಮದ್ ಸಿರಾಜ್ ಹ್ಯಾರಿ ಬ್ರೂಕ್‌ಗೆ (19 ರನ್) ಜೀವದಾನ ನೀಡಿದರು. ಹ್ಯಾರಿ ಬ್ರೂಕ್ ಪುಲ್ ಶಾಟ್ ಆಡಿದರು.
ಚೆಂಡು ಡೀಪ್ ಫೈನಲ್ ಲೆಗ್‌ಗೆ ಹೋಯಿತು. ಬೌಂಡರಿ ಗೆರೆ ಬಳಿ ಮೊಹಮ್ಮದ್ ಸಿರಾಜ್ ಕ್ಯಾಚ್ ಪಡೆದರು. ಆದರೆ ಈ ಸಮಯದಲ್ಲಿ ಅವರು ಬೌಂಡರಿ ಲೈನ್ ಬಗ್ಗೆ ಗಮನ ಕೊಟ್ಟಿರಲಿಲ್ಲ. ಪರಿಣಾಮವಾಗಿ, ಅವರ ಕಾಲು ಬೌಂಡರಿ ಗೆರೆಗೆ ತಾಗಿತು. ನಂತರ ನಿಯಂತ್ರಣ ತಪ್ಪಿ ಬೌಂಡರಿ ಒಳಗೆ ಹೋದರು. ಹೀಗಾಗಿ ಹ್ಯಾರಿ ಬ್ರೂಕ್ ನಾಟ್ ಔಟ್ ಎಂದು ಘೋಷಿಸಲ್ಪಟ್ಟಿದ್ದು ಮಾತ್ರವಲ್ಲದೆ ಆರು ರನ್ ಸಹ ನೀಡಲಾಯಿತು. ನಂತರ ಸ್ಫೋಟಕ ಬ್ಯಾಟಿಂಗ್ ಮಾಡಿದ ಬ್ರೂಕ್ ಶತಕ ಸಹ ದಾಖಲಿಸಿದರು.
ಸದ್ಯ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 267 ರನ್ ಪೇರಿಸಿದ್ದು ಗೆಲುವಿಗೆ ಇನ್ನು 107 ರನ್ ಬಾಕಿ ಇದೆ. ಇಂದು ನಾಲ್ಕನೇ ದಿನವಾಗಿರುವುದರಿಂದ ನಾಳೆಯೂ ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ಮಾಡಲು ಹೆಚ್ಚಿನ ಅವಕಾಶವಿದೆ.
Advertisement