Joe Root-Mohammed Siraj
ಜೋ ರೂಟ್-ಮೊಹಮ್ಮದ್ ಸಿರಾಜ್

ಮೊಹಮ್ಮದ್ ಸಿರಾಜ್ ನಿಜವಾದ ಯೋಧ, ದೇಶಕ್ಕಾಗಿ ಬದುಕುತ್ತಾರೆ: ಇಂಗ್ಲೆಂಡ್ ಬ್ಯಾಟರ್ Joe Root ಪ್ರಶಂಸೆ!

ಭಾರತೀಯ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸಿರಾಜ್ ಇದುವರೆಗೆ 9 ಇನ್ನಿಂಗ್ಸ್‌ಗಳಲ್ಲಿ 23 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
Published on

ಭಾರತೀಯ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸಿರಾಜ್ ಇದುವರೆಗೆ 9 ಇನ್ನಿಂಗ್ಸ್‌ಗಳಲ್ಲಿ 23 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸಿರಾಜ್ ಈ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು ಅಗ್ರಸ್ಥಾನಕ್ಕೇರಿದ್ದಾರೆ.

ಈಗ ಇಂಗ್ಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್ ಜೋ ರೂಟ್ (Joe Root) ಮೊಹಮ್ಮದ್ ಸಿರಾಜ್ ಅವರನ್ನು ಹೊಗಳಿದ್ದಾರೆ. ಸಿರಾಜ್ ಅವರನ್ನು ದೇಶಕ್ಕಾಗಿ ಬದುಕುವ ನಿಜವಾದ ಯೋಧ ಎಂದು ರೂಟ್ ಬಣ್ಣಿಸಿದ್ದಾರೆ. ಓವಲ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ರೂಟ್ 105 ರನ್ ಗಳಿಸಿದರು. ಈ ಸಮಯದಲ್ಲಿ ಅವರು ಹ್ಯಾರಿ ಬ್ರೂಕ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 195 ರನ್‌ ಗಳ ಜೊತೆಯಾಟವಾಡಿದ್ದರು.

ಮೊಹಮ್ಮದ್ ಸಿರಾಜ್ ನಿಜವಾದ ಯೋಧ. ಸಿರಾಜ್ ನಿಮ್ಮ ತಂಡದಲ್ಲಿ ನೀವು ಬಯಸುವ ರೀತಿಯ ಆಟಗಾರ. ಅವರು ಭಾರತಕ್ಕಾಗಿ ಎಲ್ಲವನ್ನೂ ನೀಡುತ್ತಾರೆ. ಅವರು ಕ್ರಿಕೆಟ್ ಅನ್ನು ಅನುಸರಿಸುವ ರೀತಿ, ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ಕೆಲವೊಮ್ಮೆ ಅವರಲ್ಲಿ ನಕಲಿ ಕೋಪವಿರುತ್ತದೆ. ಅದನ್ನು ನಾನು ಸ್ಪಷ್ಟವಾಗಿ ನೋಡಬಹುದು. ನಿಜ ಹೇಳಬೇಕೆಂದರೆ, ಅವರು ತುಂಬಾ ಒಳ್ಳೆಯ ವ್ಯಕ್ತಿ. ತುಂಬಾ ವಿಕೆಟ್‌ಗಳನ್ನು ಪಡೆದಿರುವುದು ಇದೇ ಕಾರಣಕ್ಕೆ ಎಂದು ಹೇಳಿದ್ದಾರೆ.

Joe Root-Mohammed Siraj
5th Test: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 6 ರನ್‌ ವಿರೋಚಿತ ಗೆಲುವು; ಸಚಿನ್-ಆ್ಯಂಡರ್ಸನ್ ಟೆಸ್ಟ್ ಸರಣಿ ಸಮಬಲ!

ಸಿರಾಜ್ ವಿರುದ್ಧ ಆಡುವುದನ್ನು ನಾನು ಆನಂದಿಸುತ್ತೇನೆ. ಅವರ ಮುಖದಲ್ಲಿ ಯಾವಾಗಲೂ ದೊಡ್ಡ ನಗು ಇರುತ್ತದೆ. ಅವರು ತಮ್ಮ ತಂಡಕ್ಕಾಗಿ ಎಲ್ಲವನ್ನೂ ನೀಡುತ್ತಾರೆ. ಆದ್ದರಿಂದ ಒಬ್ಬ ಅಭಿಮಾನಿಯಾಗಿ ನೀವು ಅದಕ್ಕಿಂತ ಹೆಚ್ಚಿನದನ್ನು ಕೇಳಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಯಾವುದೇ ಯುವ ಆಟಗಾರನಿಗೆ ಉತ್ತಮ ಮಾದರಿ ಎಂದು ಜೋ ರೂಟ್ ಹೇಳಿದರು.

ಓವಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ 104 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಬಳಿಸಿದ್ದು ಪರಿಣಾಮ ಭಾರತ ತಂಡ ಇಂಗ್ಲೆಂಡ್ ವಿರುದ್ಧ 6 ರನ್ ಗಳಿಂದ ಗೆಲುವು ಸಾಧಿಸಲು ನೆರವಾಯಿತು.

Joe Root-Mohammed Siraj
ಇಂದು ಎದ್ದ ಕೂಡಲೇ ಗೂಗಲ್‌ ಮಾಡಿದೆ, 'Believe' ಎಮೋಜಿ ಸಿಕ್ಕಿತು: ಇಂಗ್ಲೆಂಡ್ ವಿರುದ್ಧ 5ನೇ ಟೆಸ್ಟ್ ಗೆದ್ದ ಬಳಿಕ ಮೊಹಮ್ಮದ್ ಸಿರಾಜ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com